ರಿಚ್ಮಂಡ್ ಟೌನ್ ನ ಸ್ಟಾರ್ ಹೋಟೆಲೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಸಂಜನಾರಿಂದ ಹೊಡೆತ ತಿಂದ ನಿರ್ಮಾಪಕಿ ವಂದನಾ ಜೈನ್ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದರ ಮಧ್ಯೆ ಚಿತ್ರರಂಗದ ಕೆಲವರು ಇಬ್ಬರಿಗೂ ತಿಳುವಳಿಕೆ ಹೇಳಿದ್ದು, ನಂತರ ನಿರ್ಮಾಪಕಿ ವಂದನಾ ಜೈನ್ ತಮ್ಮ ದೂರನ್ನು ಹಿಂಪಡೆಯಲು ಸಮ್ಮತಿಸಿದ್ದಾರೆಂದು ಹೇಳಲಾಗಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಸಂಜನಾ ಹೊಡೆಯಲು ಹೊಗಿಲ್ಲ ಮಾತಿನ ಚಕಮಕಿ ನೆಡೆಯಿತು ಎಂದು ಹೇಳಿ ಸುಮ್ಮನಾಗಿದ್ದಾರೆ ಎಂದು ಹೇಳಲಾಗುತ್ತಿದೆ.ನಾನು ಮತ್ತು ದೂರು ನೀಡಿದವರು ಇಬ್ಬರೂ ಗೆಳತಿಯರು. ಗೆಳತಿಯರು ಎಂದಾಗ ಒಂದು ಮಾತು ಬರುತ್ತೆ ಹೋಗುತ್ತೆ. ನಮ್ಮ ನಡುವೆಯೂ ಹೀಗೆಯೇ ಆಗಿದೆ ಅಷ್ಟೆ. ಇದಕ್ಕೆ ಮಸಾಲೆ ಸೇರಿಸುವ ಅಗತ್ಯವಿಲ್ಲ. ನಾನು ನಮ್ಮ ಮನೆಯಲ್ಲಿ ಆರಾಮಾಗಿದ್ದೇನೆ. ಅವರು ಕೂಡ ಅವರ ಮನೆಯಲ್ಲಿ ಹಾಯಾಗಿದ್ದಾರೆ. ಗಲಾಟೆ ದೃಶ್ಯ ನನ್ನ ಅಣ್ಣನ ಮೊಬೈಲ್ನಲ್ಲಿ ರೆಕಾರ್ಡ್ ಆಗಿದೆ. ಅಗತ್ಯವಿದ್ದರೆ ನಾನು ವಿಡಿಯೋ ನೀಡುತ್ತೇನೆ,’ ಎಂದಿದ್ದಾರೆ.