ಹಲವು ವರ್ಷಗಳಿಂದ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಷೋನ ನಿರೂಪಣೆ ಮಾಡಿಕೊಂಡು ಬರ್ತಿದ್ದಾರೆ ಅವರು ಪ್ರತಿ ಸಲವು ವಿಶೇಷ ಶೈಲಿಯಲ್ಲಿ ಅದನ್ನು ಮಾಡುತ್ತಾರೆ ಮನೋರಂಜನೆಗಾಗಿ ಅವರು ಬಿಗ್ ಬಾಸ್ ಮನೆಯೊಳಗೆ ಜೋಕರ್ ಅವತಾರದಲ್ಲಿ ಎಂಟ್ರಿ ಕೊಟ್ರು ಕನ್ನಡ ಬಿಗ್ ಬಾಸ್ ಸಂಚಿಕೆಯಲ್ಲಿ ಜಾತ್ರೆ ರೀತಿಯಲ್ಲಿ ಸೆಟ್ ಹಾಕಲಾಗಿತ್ತು. ಹಾಗೆಯೇ ಈ ಜಾತ್ರೆಯಲ್ಲಿ ಜೋಕರ್ ವೇಷದಾರಿಗಳು ಮನೆಯ ಎಲ್ಲಾ ಸದಸ್ಯರನ್ನು ರಂಜಿಸಿದ್ದರು.
ಆದರೆ ಜೋಕರ್ ವೇಷ ಧರಿಸಿ ಕಿಚ್ಚ ಸುದೀಪ್ ಮನೆಗೆ ಎಂಟ್ರಿ ಕೊಟ್ಟಿದ್ದು ಮೊದಲಿಗೆ ಆ ಮನೆಯವರಿಗೆ ತಿಳಿಯಲಿಲ್ಲ.ಇನ್ನು ಈ ವೇಷ ಹಾಕಿಕೊಳ್ಳಲು ಮೂಲಗಳ ಪ್ರಕಾರ ಸುಮಾರು ಎರಡು ಗಂಟೆಗಳ ಕಾಲ ಮೇಕಪ್ ರೂಂನಲ್ಲಿ ಜೋಕರ್ ಮೇಕ್ ಓವರ್ ಗಾಗಿ ಕುಳಿತಿದ್ದರಂತೆ. ಈ ರೀತಿಯ ವಿಶೇಷವಾಗಿ ಅವರು ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಗಳೇ ಬೆರೆತಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ .ಎಷ್ಟರ ಮಟ್ಟಿಗೆ ಎಂದರೆ ಬಿಗ್ ಬಾಸ್ ಶೋ ಎಂದರೆ ಕಿಚ್ಚ ಸುದೀಪ್ ಅವರು ಮಾತ್ರ ನಡೆಸಿ ಕೊಡುವಂತಹ ಶೋ ಎಂಬ ಮಟ್ಟಿಗೆ ಜನಪ್ರಿಯವಾಗಿದೆ .