ನಿತ್ಯಾನಂದ ಎಂದ ಕೂಡಲೆ ನೆನಪಾಗೊದು ವಿವಾದಗಳು ಆಪಾದನೆಗಳನ್ನು ಹೊತ್ತು ಆರೋಪಿಯಾಗಿ ತಲೆ ಮರೆಸಿಕೊಳ್ಳುತ್ತಿರುವ ನಿತ್ಯಾನಂದ, ಇತ್ತೀಚೆಗೆ ತನ್ನದೇ ಆದ ದೇಶ ಕಟ್ಟಿಕೊಂಡಿದ್ದೇನೆಂದು ಹೇಳಿಕೊಂಡಿದ್ದ. ಕೈಲಾಸ ಎಂದು ದೇಶಕ್ಕೆ ನಾಮಕರಣ ಮಾಡಿಕೊಂಡಿದ್ದ ಈತ ನಂತರ ನಾಪತ್ತೆ. ಇದೀಗ ಈ ಆರೋಪಿ ವಿರುದ್ಧ ಕ್ರಮಕ್ಕೆ ಮುಂದಾಗಿ ಎಂದು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅದರಲ್ಲು ತಾನೊಂದು ಪ್ರತ್ಯೇಕ ದೇಶವನ್ನು ಮಾಡಿದ್ದೇನೆ ಅಲ್ಲಿಗೆ ಪ್ರತ್ಯೇಕ ವಿಮಾನ ನಿಲ್ದಾಣ ಮಾಡಿ ಅದಕ್ಕೆ ವೀಸಾ ವನ್ನು ಮಾಡಬೇಕೆಂದು ಹೇಳುತ್ತಿದ್ದರು ಇದೆಲ್ಲ ಗಮನಿಸಿದ ಸರ್ಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ.
ಈತನ ವಿರುದ್ಧ ಗಡೀಪಾರು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಹೇಳಿದೆ. ರಾಜ್ಯದ ತನಿಖಾ ತಂಡ ಕೂಡಲೇ ರಾಜ್ಯ ಗೃಹ ಇಲಾಖೆಗೆ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದೆ ಎನ್ನಲಾಗುತ್ತಿದೆ.