ಪೇಜಾವರ ಶ್ರೀ ಗಳು ದೈವಾದಿನರಾದ ಕಾರಣ ಉಡುಪಿಯಿಂದ ಶ್ರೀಗಳ ಪಾರ್ಥಿವ ಶರೀರವನ್ನು ಬೆಂಗಳೂರಿನ, ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಸಾವಿರಾರು ಸಂಕೆಯಲ್ಲಿ ಭಕ್ತಾದಿಗಳು ಬಂದಿರುವುದರಿಂದ ಪೋಲಿಸರು ಬಿಗಿ ಬಂದೋಬಸ್ತ್ ಆಯೊಜಿಸಿದ್ದಾರೆ. ಸಂಜೆಯ ವೇಳೆಗೆ ಶ್ರೀಗಳ ಇಚ್ಚೆಯಂತೆ ವಿದ್ಯಾಪೀಠದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.
ಇನ್ನು ಶ್ರೀಗಳ ಅಂತ್ಯ ಸಂಸ್ಕಾರ ಮಾಧ್ವ ಪರಂಪರೆಯ ಅನುಗುಣವಾಗಿ ನಡೆಯಲಿದ್ದು, ಕೃಷ್ಣರಾಜ ಕುತ್ವಾಡಿ ಅವರು ಧಾರ್ಮಿಕ ವಿಧಿ ವಿಧಾನ ಮಾರ್ಗದರ್ಶನ ನೀಡಲಿದ್ದಾರೆ. ಶ್ರೀಗಳ ಆಸೆಯಂತೆ ವಿದ್ಯಾಪೀಠದಲ್ಲಿ ಹುಲ್ಲುಹಾಸಿಗೆಯ ಮೇಲೆ ಬೃಂದಾವನ ನಿರ್ಮಾಣ ಮಾಡಲಾಗುತ್ತದೆ ಹಾಗು ಇನ್ನು ಪರಂಪರೆಯ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆಡೆಯಲಿದೆ .