ಪಾಕಿಸ್ತಾನಿ ಸೇನಾ ಪಡೆಯ ಮುಖ್ಯ ವಕ್ತಾರ ಮೇಜರ್‍ಜನರ್ ಆಸೀಫ್ ಗಫೂರ್, ಕುಖ್ಯಾತ ಭಯೋತ್ಪಾದನೆ ಸಂಘಟನೆ ಜೈಷ್-ಎ-ಮಹಮದ್(ಜೆಇಎಂ) ಜೊತೆ ಆಪ್ತ ಸಂಬಂಧ ಹೊಂದಿರುವುದಕ್ಕೆ ಬಲವಾದ ಸಾಕ್ಷ್ಯಾಧಾರ ಲಭಿಸಿದೆ. ಬಂದರು ನಗರಿಕರಾಚಿಯಲ್ಲಿರನ್ ಕುಪ್ರಸಿದ್ಧ ಜಾಮಿಯಾ ರಶಿದಿಯಾ ಮದರಸಾಗೆ ಡಿ.27ರಂದು ಮೇಜರ್‍ಜನರಲ್‍ಆಫಿಫ್‍ಗಪೂರ್ ಭೇಟಿ ನೀಡಿ ಕುಖ್ಯಾತ ಉಗ್ರರೊಂದಿಗೆ ಇರುವ ಫೋಟೋಗಳು ಈಗ ಬಹಿರಂಗಗೊಂಡಿದೆ.
ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಸೇನೆಯ ಉನ್ನತಾಧಿಕಾರಿಗಳು ಮತ್ತು ಭಯೋತ್ಪಾದಕರ ನಡುವಣ ಸಂಬಂಧ ಮತ್ತಷ್ಟ ಬಲಗೊಂಡಿರುವ ಹಿನ್ನೆಲೆಯಲ್ಲಿ ಮುಂದೆ ಇಸ್ಲಾಮಾಬಾದ್‍ನಿಂದ ನಡೆಯಬಹುದಾದ ಕುತಂತ್ರ ಮತ್ತು ವಿಧ್ವಂಸಕ ದಾಳಿಗಳ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತ ತೀವ್ರ ಕಟ್ಟೆಚ್ಚರ ವಹಿಸಿದೆ. ಅಲ್ಲದೇ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.