ಮೊದಲ ಬಾರಿಗೆ ಆದಿತ್ಯ ಠಾಕ್ರೆ ಕ್ಯಾಬಿನೆಟ್ ಸಚಿವರ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಒಟ್ಟು 25 ಕ್ಯಾಬಿನೆಟ್ ಮಂತ್ರಿಗಳು, 10 ರಾಜ್ಯ ಸಚಿವರು ಮತ್ತು ಒಬ್ಬ ಉಪಮುಖ್ಯಮಂತ್ರಿ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಗ ಆದಿತ್ಯ ಠಾಕ್ರೆಗೆ ಸಿಎಮ್‌ಒ ಇಲಾಖೆ ಸಿಗಲಿದೆ ಎಂದು ಮೂಲಗಳು ಹೇಳಿವೆ ಆದರೆ ಆದಿತ್ಯ ಅವರಿಗೆ ಆ ಜವಬ್ದಾರಿ ಹೇಗೆ ನಿಭಾಯಿಸುತ್ತಾರೆ ನೊಡಬೇಕಿದೆ.
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಮಾದರಿಯಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಕಚೇರಿಗೆ ಉದ್ಧವ್ ಠಾಕ್ರೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.