ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಪುಣ್ಯತಿಥಿ ನಿಮಿತ್ತ ವಿಷ್ಣು ಸೇನಾ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದಿನಪೂರ್ತಿ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.
ರಕ್ತದಾನ, ನೇತ್ರದಾನ ಹಾಗೂ ಅನ್ನದಾನದಂತಹ ಕೈಂಕರ್ಯಗಳು ನೆರವೇರಿದ್ದು , ಅಪಾರ ಸಂಖ್ಯೆಯ ಅಭಿಮಾನಿಗಳು ನೆಚ್ಚಿನ ನಟನ ಸಮಾಧಿ ಬಳಿ ಬಂದು ನಮನ ಸಲ್ಲಿಸಿದರು.ದಿನಪೂರ್ತಿ ವಿಷ್ಣು ಅಭಿನಯದ ಗೀತೆಗಳನ್ನು ಹಾಡುವ ಕಾರ್ಯಕ್ರಮವೂ ಹಮ್ಮಿಕೊಳ್ಳಲಾಗಿತ್ತು. ವಿಷ್ಣುದಾದ ಅಂದ್ರೆ ಕರ್ನಾಟಕದಲ್ಲಿ ಲಕ್ಷಾಂತರ ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವವಾಗಿದ್ದರು ಇಂದು ಅವರ ಪುಣ್ಯತಿಥಿಗೆ ಅವರ ಅಭಿಮಾನಿಗಳು ಅವರ ಸ್ಮಾರಕದ ಬಳಿ ಬಂದಿದ್ದರು .