ಕೇಂದ್ರದಿಂದ ರಾಜ್ಯಕ್ಕೆ ಒಂದಷ್ಟು ಹಣ ಪ್ರತಿಯೊಂದು ರಾಜ್ಯಕ್ಕೂ ಬರುತ್ತದೆ ಅನುದಾನಕ್ಕಾಗಿ ಹಾಗೂ ಯೋಜನೆಗಳಿಗಾಗಿ ಎಂದು ಕೇಂದ್ರದಿಂದ ಹಣ ನೀಡುತ್ತಾರೆ ಈ ಪ್ರಕಾರವಾಗಿ ಈ ವರೆಗೂ ಕೇಂದ್ರ ಬಿಡುಗಡೆ ಮಾಡಿರುವುದು ಮಾತ್ರ 3,600 ಕೋಟಿಯಷ್ಟೇ. ಮೊದಲ ಕಂತು ಆಗಸ್ಟ್-ಸೆಪ್ಟೆಂಬರ್ ತಿಂಗಳ ಅವಧಿಯದ್ದಕ್ಕೆ ಮಾತ್ರ ಅನ್ವಯವಾಗುತ್ತದೆ. ಆದರೆ ಅಕ್ಟೋಬರ್-ನವೆಂಬರ್ ತಿಂಗಳ ಬಾಕಿ 3,200 ಕೋಟಿ ರೂ ಮೊತ್ತ ಇನ್ನೂ ಬಾಕಿ ಇದೆ.
ಇನ್ನು ಫೆಬ್ರವರಿ-ಮಾರ್ಚ್ ತಿಂಗಳ ಪರಿಹಾರ ಮೊತ್ತ 2020 ರ ವೇಳೆಗೆ ಮುಂದಿನ ಹಣಕಾಸು ವರ್ಷ ಪ್ರಾರಂಭಕ್ಕೂ ಮುನ್ನ ಮತ್ತೊಂದು ಕಂತು ಬರಬೇಕಿದೆ. ಇನ್ನು ನರೇಗಾ ಯೋಜನೆಯಲ್ಲಿ ಬರಬೇಕಿದ್ದ ಹಣವನ್ನೂ ಕೇಂದ್ರ ಸರ್ಕಾರ ಪೂರ್ಣವಾಗಿ ನೀಡಿಲ್ಲ. 3 ವರ್ಷಗಳ ಒಟ್ಟು 803 ಕೋಟಿ ಹಣ ರಾಜ್ಯಕ್ಕೆ ಬರಬೇಕಿದೆ. ಈ ವರ್ಷದ ಹಣ 757 ಕೋಟಿ ಬಾಕಿ ಇದೆ.