ಇಡೀ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯದ್ದೇ ಮಾತು. ಪರ – ವಿರೋಧದ ಚರ್ಚೆ. ಕಾಯ್ದೆ ವಿರೋಧಿಸಿ ಪ್ರತಿಭಟನೆ ಮುಂದುವರೆದಿದೆ. ಇಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಕೂಡ ಬೃಹತ್ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಶಾಸಕ ಜಮೀರ್ ಅಹಮ್ಮದ್ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅಪ್ಪ ಮತ್ತು ಅಜ್ಜನ ಸರ್ಟಿಫಿಕೇಟ್ ಕೇಳಿದರು!
ಮೋದಿ ಮತ್ತು ಅಮಿತ್ ಶಾ ಅವರಪ್ಪ ಮತ್ತು ತಾತನ ಸರ್ಟಿಫಿಕೇಟ್ ಮೊದಲು ತರಲಿ. ಮೋದಿಯವರೇ ನಿಮ್ಮ ಬಳಿ ತಂದೆಯ ಸರ್ಟಿಫಿಕೇಟ್ ಇದ್ಯಾ? ಅಮಿತ್ ಶಾ ನಿಮ್ಮೊಡನೆ ಅಜ್ಜನ ಸರ್ಟಿಫಿಕೇಟ್ ಇದೆಯಾ. ಮೊದಲು ನೀವು ನಿಮ್ಮ ತಂದೆ, ತಾತನ ಸರ್ಟಿಫಿಕೇಟ್ ತನ್ನಿ. ಆಮೇಲೆ ನಾವು ಸರ್ಟಿಫಿಕೇಟ್ ತೋರಿಸ್ತೀವಿ ಎಂದರು.
ಸದ್ಯ ಜಮೀರ್ ಅಹಮ್ಮದ್ ಖಾನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೋದಿ, ಅಮಿತ್ ಶಾ ಅವರಪ್ಪ, ಅಜ್ಜನ ಸರ್ಟಿಫಿಕೇಟ್ ತೋರಿಸಲಿ ಎಂದ ಜಮೀರ್!
Date: