ಉಪ ಚುನಾವಣೆ ಆದ ಬಳಿಕ ಜೆಡಿಎಸ್ ಮೂಲೆ ಗುಂಪಾಗಿರುವುದು ಖಂಡಿತಾ ಏಕೆಂದರೆ ಒಂದು ಸ್ಥಾನದಲ್ಲೂ ಸಹ ಗೆಲ್ಲದೇ ಜೆಡಿಎಸ್ ಉಪಚುನಾವಣೆಯಲ್ಲಿ ನೆಲಕಚ್ಚಿತ್ತು ಅನೇಕ ಶಾಸಕರು ಜೆಡಿಎಸ್ ಪಕ್ಷದಲ್ಲಿದ್ದರೂ ಇಲ್ಲದಂತಾಗಿದ್ದಾರೆ. ಲೋಕಸಭಾ ಚುನಾವಣೆ ಹಾಗೂ ಉಪ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸ್ಥಾನ ಗೆದ್ದಿದೆ, ಎಲ್ಲಿ ಪಕ್ಷ ಸೋತಿದೆ ಎಂಬುದನ್ನು ಕುಮಾರಸ್ವಾಮಿ ಹಾಗೂ ದೇವೇಗೌಡರು ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಇದ್ದಾರೆ.
ಇದೀಗ ಪಕ್ಷ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮತ್ತೆ ದೇವೇಗೌಡರು ಅಖಾಡಕ್ಕೆ ಇಳಿಯುತ್ತಾರೆ ಎನ್ನಲಾಗಿದೆ. ಈಗಾಗಲೇ ಉಪ ಚುನಾವಣೆ ನಂತರ ತುಂಬಾ ಸೈಲೆಂಟ್ ಆಗಿರುವ ದೇವೇಗೌಡರು, ಪಕ್ಷಕ್ಕಾಗಿ ಮತ್ತೆ ರಂಗಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಕೇಳಿ ಬರ್ತಿದೆ .