ಕ್ಷೇತ್ರದ ಜನರಲ್ಲಿ ಒಬ್ಬ ದೇವಸ್ಥಾನ ಕಟ್ಟಬೇಕೆಂದು ಬಂದರೆ, ಮತ್ತೊಬ್ಬ ಚರ್ಚ್ ಕಟ್ಟಬೇಕೆಂದು ಬರುತ್ತಾರೆ. ನನ್ನ ಕೈಲಾದ ಮಟ್ಟಿಗೆ ಇಟ್ಟಿಗೆಯನ್ನೋ, ಕಿಟಕಿಯನ್ನೋ, ಬಾಗಿಲನ್ನೋ ನೀಡುತ್ತೇನೆ. ಶಾಲೆ ಕಟ್ಟುತ್ತೇನೆಂದು ಬಂದರೆ ಅವರಿಗೆ ಕುರ್ಚಿ ಕೊಡಿಸೋದು ನಮ್ಮ ಕೆಲಸ ಎಂದು ಶಿವಕುಮಾರ್ ಹೇಳಿದರು.
ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆಯನ್ನು 2 ವರ್ಷದ ಹಿಂದೆ ನಿರ್ಮಿಸಲು ಹೋದಾಗ ನಾನೆ ಅವರನ್ನು ತಡೆದು ಕಾನೂನುಬದ್ಧವಾಗಿ ಮಾಡುವಂತೆ ಸಲಹೆ ನೀಡಿದ್ದೆ. ನಂತರ ನನ್ನ ಕೈಲಾದ ಸಹಾಯ ಮಾಡಿದೆ. ಉಳಿದದ್ದು ಭಕ್ತನಿಗೂ ಹಾಗೂ ಭಗವಂತನಿಗೂ ಬಿಟ್ಟ ವಿಚಾರ. ಬಿಜೆಪಿಯವರು ಏನು ಬೇಕೋ ಅದನ್ನು ಮಾಡಿಕೊಳ್ಳಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.