ರಾಜ್ಯದಲ್ಲಿ ಒಂದು ಪಕ್ಷದ ಮೇಲೆ ಇನ್ನೊಂದು ಪಕ್ಷದವರು ವಾಗ್ದಾಳಿ ನಡೆಸುವುದು ಹಾಗೂ ವಿರೋಧ ಮಾತನಾಡುವುದು ಹೊಸದೇನಲ್ಲ ಆದರೆ ಇದೀಗ ಕಾಂಗ್ರೆಸ್ ವಲಯದಲ್ಲಿ ಡಿಕೆಶಿಯವರ ಮೇಲೆ ಅಸಮಾಧಾನ ಮೂಡಿದೆ ಎಂದು ಹೇಳಲಾಗುತ್ತಿದೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಭಾಗವಹಿಸಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್ 5 ನಿಮಿಷದಲ್ಲಿ ಅಲ್ಲಿಂದ ತೆರಳಿದ್ದಾರೆ. ಸಭೆಯಲ್ಲಿ ಹಾಜರಿ ಹಾಕಿ ಹೊರ ನಡೆದ ಡಿ.ಕೆ. ಶಿವಕುಮಾರ್ ಸಭೆಯ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.
ದೇವಸ್ಥಾನಕ್ಕೆ ತೆರಳಬೇಕಿದ್ದ ಡಿಕೆಶಿ ಸಭೆಯಿಂದ ಹೊರಟಿದ್ದು, ಸಭೆಯ ಬಳಿಕ ಪಕ್ಷದ ನಾಯಕರು ಸುದ್ದಿಗಾರರಿಗೆ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.