`ಭಾರತ ಸಸಿಕಾಂತ ಸೆಂಥಿಲ್ ಅವರ ಅಪ್ಪನ ಆಸ್ತಿ ಅಲ್ಲ ಎಂದು ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ವಕ್ತಾರ ವಿಕಾಸ ಪುತ್ತೂರು ಕಿಡಿಕಾರಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನ ಕೋಟೆಕಾರಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಮಾಜಿ ಜಿಲ್ಲಾಧಿಕಾರಿ ಸಸಿಕಾಂಥ್ ಸೆಂಥಿಲ್, ಇನ್ನು ಸಾವಿರ ವರ್ಷವಾದರೂ ಬಿಜೆಪಿಗರಿಗೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಿಡಲ್ಲ’ ಎಂದು ಆಕ್ರೋಶಿತ ನುಡಿಗಳನ್ನಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಕಾಸ ಪುತ್ತೂರು, `ಭಾರತ ಸೆಂಥಿಲ್ ಅಪ್ಪನ ಆಸ್ತಿಯಲ್ಲ. ಭಾರತವು ಹಿಂದೂ ರಾಷ್ಟ್ರವಾಗಿದ್ದು, ಎಂದಿಗೂ ಹಿಂದೂ ರಾಷ್ಟ್ರವಾಗಿರಲಿದೆ ಎಂದು ತಿರುಗೇಟು ನೀಡಿದ್ದಾರೆ. ಮುಂದಿನ ಸಾವಿರ ವರ್ಷಗಳವರೆಗೂ ಇದು ಹಿಂದೂ ರಾಷ್ಟ್ರವಾಗಿಯೇ ಇರುತ್ತದೆ. ಮೋದಿ ಐತಿಹಾಸಿಕ ತಪ್ಪನ್ನು ಸರಿಪಡಿಸುವ ಸಲುವಾಗಿ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ. ಮೋದಿ, ಅಮಿತ್ ಶಾ ಅವರನ್ನು ಅಭಿನಂದಿಸುತ್ತೇವೆ. ಶೇ ೯೫ರಷ್ಟು ಮಂದಿ ಕಾಯ್ದೆ ಪರವಾಗಿದ್ದಾರೆ. ತನ್ನ ರಾಜಕೀಯ ಬೇಳೆಬೇಯಿಸಿಕೊಳ್ಳಲು ಯತ್ನಿಸುತ್ತಿರುವ ಸೆಂಥಿಲ್ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಯು ಟಿ ಖಾದರ್ ಕಾಯ್ದೆಯ ಬಗ್ಗೆ ತಿಳಿಯದೆ ಪ್ರತಿಭಟನೆ ನಡೆಸಲು ಬೀದಿಗಿಳಿದಿದ್ದಾರೆ ಎಂದು ಸಿಡಿದಿದ್ದಾರೆ.