ಈ ಯುವ ಪೋರನ ಹೆಸರು ಸಿದ್ಧಾಂತ್ ವತ್ಸ್. ಬಿಹಾರದ ಪಾಟ್ನಾ ಮೂಲದ ಸಿದ್ಧಾಂತ್ ವತ್ಸ್ ಟೆಡ್ಎಕ್ಸ್ ಸ್ಪೀಕರ್ಗಳಲ್ಲೊಬ್ಬರು. ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್-ವಾಚ್ ಸಹ ಸಂಸ್ಥಾಪಕರು. ಅರ್ಧಕ್ಕೆ ಶಾಲೆ ಬಿಟ್ಟ 19 ವರ್ಷದ ಸಿದ್ಧಾಂತ್ ವತ್ಸ್ ಎನ್ಜಿಓ ಒಂದರ ಕಾರ್ಯಾಚರಣೆಗಳ ನಿರ್ವಹಣೆಯನ್ನೂ ನೋಡಿಕೊಳ್ಳುತ್ತಿದ್ದಾರೆ.
ಕೆಲವೇ ಕೆಲ ನಿಮಿಷ ಮಾತನಾಡಿದ್ರೆ ಸಾಕು ಸಿದ್ಧಾಂತ್ ವತ್ಸ್ ಅವರು ಎಷ್ಟು ವಿಭಿನ್ನ ಮತ್ತು ಕ್ರೇಜಿ ಅನ್ನೋದು ಗೊತ್ತಾಗುತ್ತೆ. ತನ್ನ ಕನಸುಗಳನ್ನು ಬೆನ್ನತ್ತಿ ಹೋಗುವ ಅತಿಯಾದ ಉತ್ಸಾಹ ಅವರಲ್ಲಿದೆ. ಈ ನಿಟ್ಟಿನಲ್ಲಿ ಮುನ್ನುಗ್ಗಲು ತನ್ನ ಪ್ರೌಢ ಶಾಲಾ ಶಿಕ್ಷಣವನ್ನೂ ಅರ್ಧಕ್ಕೇ ನಿಲ್ಲಿಸಿ ಶಾಲೆಯಿಂದ ಹೊರಬಂದ ಗಟ್ಟಿಗನೀತ. ‘ಶಿಕ್ಷಣವನ್ನು ಮುಂದೂಡುವ ತನ್ನ ನಿರ್ಧಾರವನ್ನು ಕೇಳಿ ಪೋಷಕರು ಶಾಕ್ ಆಗಿದ್ದರು’ ಅಂತ ನೆನಪಿಸಿಕೊಳ್ತಾರೆ ಸಿದ್ಧಾಂತ್.
ಸಿದ್ಧಾಂತ್ ಅವರಲ್ಲಿ ಕೆಲ ವಿಶೇಷ ಗುಣಗಳಿವೆ. ಇದರಿಂದಾಗಿಯೇ ಅವರು ಅವರ ಗೆಳೆಯರಿಗಿಂತ ವಿಭಿನ್ನವಾಗಿ ನಿಲ್ತಾರೆ. ಅವನೊಬ್ಬ ಕನಸುಗಾರ. ಸಿದ್ಧಾಂತ್ ಉದ್ಯಮಿಯಾಗಲು ಅದೇ ಮೊದಲ ಕಾರಣ. ರಿಸ್ಕ್ ತೆಗೆದುಕೊಳ್ಳಲು ಆತನಿಗೆ ಭಯವಿಲ್ಲ. ನಿಜ ಏನಂದ್ರೆ, ಅವನು ಅವುಗಳನ್ನು ರಿಸ್ಕ್ ಅಂತಲೇ ಪರಿಗಣಿಸುವುದಿಲ್ಲ. ಬಾಲಿವುಡ್ ಸಿನಿಮಾಗಳಂತೆ ಎಲ್ಲವೂ ಒಳ್ಳೆಯ ರೀತಿಯಲ್ಲಿ ಅಂತ್ಯವಾಗಬೇಕು. ಇಲ್ಲದಿದ್ದರೆ ಅದು ಅಂತ್ಯವೇ ಇಲ್ಲ ಅನ್ನೋದು ಸಿದ್ಧಾಂತ್ ನಂಬಿಕೆ.
8ನೇ ತರಗತಿಯಲ್ಲಿರುವಾಗಲೇ ಸಿದ್ಧಾಂತ್ ಒಂದು ಎನ್ಜಿಓ ಅರ್ಥಾತ್ ಸ್ವಯಂ ಸೇವಾ ಸಂಘವನ್ನು ಪ್ರಾರಂಭಿಸಿದ್ದ. ತನ್ನದೇ ಕಾನೂನು ಕಟ್ಟಳೆಗಳಲ್ಲಿ ಸಿದ್ಧಾಂತ್ ತನ್ನನ್ನು ತಾನೇ ಕಟ್ಟಿಹಾಕಿಕೊಳ್ಳಲಿಲ್ಲ. ತನಗೆ ನೈತಿಕವಾಗಿ ಏನು ಸರಿ ಅನ್ನಿಸಿತೋ ಅದನ್ನು ಮುನ್ನುಗ್ಗಿ ಮಾಡುತ್ತಿದ್ರು. ಇನ್ನು ಕೇವಲ 17 ವರ್ಷದವರಿದ್ದಾಗ ಅಪೂರ್ವ ಸುಕಂತ್ ಮತ್ತು ಇನ್ನೂ ಇಬ್ಬರು ಗೆಳೆಯರೊಂದಿಗೆ ಸೇರಿ ಆಂಡ್ರಾಯ್ಡ್ ಸಿಸ್ಟಮ್ಸ್ ಪ್ರಾರಂಭಿಸಿದ್ರು. ಕೊನೆಗೆ ‘ವಿಶ್ವದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಮಾಡಿದ್ರು.
ಸಿದ್ದಾಂತ್ ಆ ವಾಚ್ಗೆ ‘ಆಂಡ್ರಾಯ್ಡ್ ’ ಎಂದು ಹೆಸರಿಟ್ರು. ವಾಚ್ ಮೂಲಕ ನಾವು ಕರೆ ಮಾಡಬಹುದು, ಇಂಟರ್ನೆಟ್ ಬಳಸಬಹುದು, ವಾಟ್ಸಾಪ್ ಮೂಲಕ ಸಂದೇಶಗಳನ್ನು ಕಳಿಸಬಹುದು. ಅಷ್ಟೇ ಅಲ್ಲ, ಆಂಡ್ರಾಯ್ಡ್ ಸ್ಮಾರ್ಟ್ ವಾಚ್ ಹಾಡುಗಳನ್ನು ಕೇಳಬಹುದು ಹಾಗೂ ಫೋಟೋಗಳನ್ನೂ ಕ್ಲಿಕ್ಕಿಸಬಹುದು. ಅಷ್ಟೇ ಯಾಕೆ ಒಂದು ಮೊಬೈಲ್ ಫೋನ್ನಲ್ಲಿ ನೀವು ಏನೆಲ್ಲಾ ಮಾಡಬಹುದೋ? ಅದನ್ನೆಲ್ಲಾ ಈ ವಾಚ್ ಮೂಲಕವೂ ಮಾಡಬಹುದು.
ಇನ್ನು ಸಿದ್ಧಾಂತ್ ಅವರ ತಾಯಿ ಪ್ರಾರಂಭಿಸಿದ ಫಲಕ್ ಫೌಂಡೇಶನ್, ಶಿಕ್ಷಣ, ಆರೋಗ್ಯ ಹಾಗೂ ಸಾಮಾಜಿಕ ಜಾಗೃತಿ ವಲಯಗಳಲ್ಲಿ ಕೆಲಸ ಮಾಡುತ್ತಿದೆ. ಸಿದ್ಧಾಂತ್ 7ನೇ ತರಗತಿಯಲ್ಲಿರುವಾಗಲೇ ಈ ಎನ್ಜಿಓ ಮಕ್ಕಳಿಗೆ ಸಾಮಾನ್ಯ ಕಂಪ್ಯೂಟರ್ ಕೌಶಲ್ಯ, ಇಂಗ್ಲೀಷ್ ಮತ್ತು ಗಣಿತ ವಿಷಯಗಳನ್ನು ಕಲಿಸತೊಡಗಿದ. ಕ್ರಮೇಣ ದಿನ ಕಳೆದಂತೆ ಸಿದ್ಧಾಂತ್ ಎನ್ಜಿಓನ ಇತರೆ ಕಾರ್ಯಗಳಲ್ಲೂ ಕೈಜೋಡಿಸತೊಡಗಿದ್ದು, ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಷ್ಟೇ ಏಕೆ? ಅಮೆರಿಕಾ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರಿಂದಲೂ ಶಭಾಷ್ ಗಿರಿ ಪಡೆದಿದ್ದಾರೆ.
ಇನ್ನು ಸಿದ್ದಾಂತ್ ವತ್ಸ್ ತನ್ನ ವಯಸ್ಸಿನ ಯುವ ಜನರಿಗೆ .. ಒಂದೇ ಕೆಲಸವನ್ನು ತುಂಬಾ ಸಮಯದವರೆಗೆ ಮಾಡುವುದು ಇಷ್ಟವಾಗಬಾರದು. ಒಂದೆಡೆ ಬಹುಸಮಯ ಕೂರಲೂಬಾರದು. ಕನಸುಗಳನ್ನು ಬೆನ್ನಟ್ಟಬೇಕು. ಮನಸ್ಸಿಗೆ ಬಂದ ಎಲ್ಲವನ್ನೂ ಮಾಡಬೇಕು. ಅಂದಾಗ ಮಾತ್ರ ಮುಂದೆ ಏನ್ನಾದರೂ ಸಾಧಿಸಲು ಸಾಧ್ಯ ಎನ್ನೋದೇ ಸಿದ್ಧಾಂತನ ಸಿದ್ಧಾಂತ