`ಫಿಫ್ಟಿ ಶೇಡ್ಸ್ ಆಫ್ ಗ್ರೇ' ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!

Date:

raaa
ಕಾಮಕ್ಕೆ ಕಣ್ಣಿಲ್ಲ, ಕಾರಣವೂ ಇಲ್ಲ. ಅದು ನಿರಂತರವಾಗಿ ಭೋರ್ಗರೆಯುತ್ತಲೇ ಇರುತ್ತದೆ. ಯಾಕಂದ್ರೆ ಅದು ಪ್ರಕೃತಿಯ ನಿಯಮ, ಕಡಿವಾಣ ಸಾಧ್ಯವೇ ಇಲ್ಲ. ವಿದೇಶ ನಿರ್ಮಿತ ಚಿತ್ರಗಳಲ್ಲಿ ಆಲ್ ಮೋಸ್ಟ್ ರೋಮ್ಯಾಂಟಿಕ್- ಎರೋಟಿಕ್ ಮೂವಿಗಳದ್ದೇ ಹಾವಳಿ. ಅಲ್ಲಿ ಅಶ್ಲೀಲತೆ ಇಲ್ಲದಿದ್ದರೇ ಸಿನಿಮಾ ತಯಾರಾಗುವುದೇ ಇಲ್ಲ. ಅದೇ ತೆರನಾದ ಸಿನಿಮಾಗಳು ಬಾಲಿವುಡ್ ನಲ್ಲಿ ನಿಧಾನವಾಗಿ ಬೇರುಬಿಟ್ಟಿದ್ದವು. ಒಂದು ಹಂತದಲ್ಲಿ ಅಷ್ಟಲ್ಲಿದ್ದರೂ ಇಷ್ಟಿಷ್ಟಾಗಿ ಬೆತ್ತಲಾಗುವುದನ್ನು ಬಾಲಿವುಡ್ ಕರಗತ ಮಾಡಿಕೊಂಡಿತ್ತು.

ಹಾಗೆ ನೋಡಿದರೇ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಸಂಪ್ರದಾಯಕ್ಕೆ ಹೆಚ್ಚಿನ ಮನ್ನಣೆಯಿದೆ. ಕೆಲವೊಂದು ವ್ಯಾಪ್ತಿಯವರೆಗೆ ಅದು ಅಶ್ಲೀಲತೆಯನ್ನು ತಾಳಿಕೊಳ್ಳುತ್ತದೆ. ಆದರೆ ಮಿತಿ ಮೀರಿದರೇ ಖಂಡಿತ ಸಹಿಸುವುದಿಲ್ಲ. ಹಾಗಾಗಿ ಭಾರಿ ಸದ್ದು ಮಾಡಿದ್ದ `ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಇಂಗ್ಲೀಷ್ ಚಿತ್ರವನ್ನು ನಿಷೇಧಿಸಿತ್ತು. ಅತಿಯಾದ ಕಾಮ, ಕೇವಲ ಕಾಮ, ಕಾಮವೇ ಎಲ್ಲಾ, ಕಾಮ ಇಲ್ಲದೇ ಏನೂ ಇಲ್ಲ ಎಂಬಂತಿರುವ `ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಚಿತ್ರವನ್ನು ನಿಷೇಧಿಸಲು, ಅತಿಯಾದ ರೋಮ್ಯಾನ್ಸ್ ಕಾರಣ ಅಂತ ಭಾರತ ಸಮಜಾಯಿಷಿ ನೀಡಿತ್ತು. ಈ ಚಿತ್ರದಲ್ಲಿ ಅಕ್ಷರಶಃ ಇರೋದು ರೊಮ್ಯಾನ್ಸ್ ಮಾತ್ರ. ಕಾದಂಬರಿ ಆಧಾರಿತ ಚಿತ್ರವಿದು. ಮೂಲ ಕೃತಿಯಲ್ಲಿ ರೋಮ್ಯಾನ್ಸ್ ಅನ್ನು ಭರಪೂರ್ತಿಯಾಗಿ ಕೆತ್ತಿದ ಲೇಖಕ, ತನ್ನ ಕಾದಂಬರಿಯನ್ನು ಅನಾಮತ್ತು ಐವತ್ತು ಭಾಷೆಗಳಲ್ಲಿ ಅನುವಾದ ಅಗುವಂತೆ ಮಾಡಿದ್ದ. ಆ ಮಟ್ಟಿಗೆ ಹೆಸರು ಮಾಡಿದ `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದರು. ಅಲ್ಲಿ ಮೂಲ ಕೃತಿಯನ್ನು ಮೀರಿಸುವಂತೆ ಕಾಮವನ್ನು ಕೆತ್ತಿ ಬಿಸಾಡಲಾಗಿತ್ತು.

2011ರಲ್ಲಿ ಬ್ರಿಟೀಷ್ ಲೇಖಕಿ ಇ ಎಲ್ ಜೇಮ್ಸ್ ಬರೆದ ಕಾದಂಬರಿಯೇ ಫಿಫ್ಟಿ ಶೇಡ್ಸ್ ಆಫ್ ಗ್ರೇ’. ಕಾಲೇಜ್ ಗ್ರಾಜುಯೇಟ್ ಮುಗಿಸಿದವರ ಸಂಬಂಧದ ಬಗ್ಗೆ ಹೆಣೆದ ಈ ಕಾದಂಬರಿ ಮಾಡಿದ ದಾಖಲೆಗಳು ಕೂಡ ಅವಿಸ್ಮರಣೀಯವಾದದ್ದು. ಇ ಎಲ್ ಜೇಮ್ಸ್. ಲಂಡನ್ ಮೂಲದ ಲೇಖಕಿ. ಇವಳ ತಾಯಿ ಚಿಲಿ ಮೂಲದವಳು, ತಂದೆ ಸ್ಕಾಟ್ ಲ್ಯಾಂಡಿನವನು. ಬಿಬಿಸಿಯಲ್ಲಿ ಕ್ಯಾಮೆರಾಮೆನ್ ಆಗಿ ಕೆಲಸ ಮಾಡ್ತಿದ್ದ. ಟೆಲೆವಿಶನ್ ಎಕ್ಸ್ ಕ್ಯುಟಿವ್ ಆಗಿ ಕೆಲಸ ಮಾಡ್ತಿದ್ದ ಇ ಎಲ್ ಜೇಮ್ಸ್ ರೋಮ್ಯಾನ್ಸ್, ಎರೊಟಿಕ್, ಫ್ಯಾನ್ ಫಿಕ್ಷನ್ ಕಾದಂಬರಿಗಳನ್ನು ಬರೆಯುವುದರಲ್ಲಿ ನಿಷ್ಣಾತಳು. ಇದೇ ಲೇಖಕಿ `ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಎಂಬ ಕೃತಿಯನ್ನು ಬರೆದಿದ್ದಳು. ಈ ಕಾದಂಬರಿಯಲ್ಲಿ ಅತಿಯಾದ ರೊಮ್ಯಾನ್ಸ್ ಅನ್ನು ಕೆತ್ತಿ ಬಿಸಾಕಿದ್ದ ಜೇಮ್ಸ್ ನಾವೆಲ್ ಓದಿದವರು, ಇದು `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಅಲ್ಲ, `ಹಂಡ್ರೆಡ್ ಶೇಡ್ಸ್ ಆಫ್ ಸೆಕ್ಸ್’ ಅಂತ ಕಮೆಂಟ್ ಕೊಟ್ಟರು. ಹಾಗಿತ್ತು ಅದರ ಅಕ್ಷರ ವೈಭವ.

ಅಷ್ಟಕ್ಕೂ ರೋಮ್ಯಾನ್ಸ್ ಮೀರಿ ಎರೋಟಿಕ್ ಶೇಡ್ ಇದ್ದ ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಕಾದಂಬರಿ ಬರೆದ ದಾಖಲೆಗಳು ಸಾಮಾನ್ಯವಾಗಿರಲಿಲ್ಲ. ಆ ಕಾದಂಬರಿಯನ್ನು ಇಡೀ ಜಗತ್ತೇ ಬಾಯಿ ಚಪ್ಪರಿಸಿಕೊಂಡು ಓದಿತ್ತು. 2011ರಲ್ಲಿ ಬಿಡುಗಡೆಯಾದ ಈ ಕೃತಿ ಅನಾಮತ್ತು ಐವತ್ತೊಂದು ಭಾಷೆಗಳಿಗೆ ತಜರ್ುಮೆಯಾಗಿತ್ತು. ಒಂದು ಕೃತಿ ಐವತ್ತೊಂದು ಭಾಷೆಗಳಿಗೆ ತರ್ಜುಮೆ ಆಗುವುದಂದರೇ ತಮಾಷೆ ವಿಚಾರವಲ್ಲ. ಅದು ಕಾದಂಬರಿಯ ಜನಪ್ರಿಯತೆಯನ್ನು ಹೇಳುತ್ತದೆ. ಅಂತ ಜನಪ್ರಿಯ ಕಾದಂಬರಿಯ ಪ್ರತಿಗಳು ಸೇಲಾದ ಸಂಖ್ಯೆಯನ್ನು ಕೇಳಿಯೇ ಎಂಥವರೂ ಬೆಚ್ಚಿಬೀಳಬೇಕು. ಪುಸ್ತಕ ಪ್ರಪಂಚದಲ್ಲಿ ದಾಖಲೆ ಬರೆದ ಕೆಲವೇ ಕೆಲವು ಪುಸ್ತಕಗಳ ಸಾಲಿಗೆ ಸೇರಿಕೊಂಡ `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಕಾದಂಬರಿಯ ಅನಾಮತ್ತು ನೂರು ಮಿಲಿಯನ್ ಪ್ರತಿಗಳು ಮಾರಾಟವಾಗಿದೆ. ಇನ್ನೂ ಮಾರಾಟವಾಗುತ್ತಿದೆ.

ಎರಡು ಜೋಡಿಗಳ ನಡುವೆ ನಡೆಯುವ ಪ್ರೇಮ್ ಕಹಾನಿ, ಕಮಿಂಟ್ ಮೆಂಟ್, ಬಲವಂತ, ಲೈಂಗಿಕ ಹಿತಾಸಕ್ತಿಗಳ ಕುರಿತಾದ ಈ ಕಾದಂಬರಿ ಜಗತ್ತಿನಾದ್ಯಂತ ಜನಪ್ರಿಯವಾಗಿದ್ದೇ, ಆ ಕೃತಿಯ ಹಿಂದೆ ಬ್ರಿಟೀಷ್ ನಿರ್ಮಾಪಕರ ಹಿಂಡು ನೆರೆಯತೊಡಗಿತ್ತು. ಕಡೆಗೆ ಬ್ರಿಟೀಷ್ ನಿರ್ಮಾಪಕ ಮೈಕಲ್ ಡಿ ಲುಕ್, ಡನಾ ಬ್ರೂನ್ ಟೀ, ಲೇಖಕಿ ಇ ಎಲ್ ಜೇಮ್ಸ್ ಅವರಿಂದ ಚಿತ್ರ ನಿರ್ಮಾಣಕ್ಕೆ ಹಕ್ಕನ್ನು ಪಡೆದುಕೊಂಡರು. ಇಡೀ ಕಾದಂಬರಿಯಲ್ಲಿ ಅತಿಹೆಚ್ಚು ರೋಮ್ಯಾನ್ಸ್ ಇದ್ದಿದ್ದರಿಂದ ಮೂಲ ಕೃತಿಗೆ ಕೊಂಚವೂ ಮೋಸವಾಗದಂತೆ ಚಿತ್ರ ನಿರ್ಮಿಸಬೇಕಿತ್ತು. ಡೈರೆಕ್ಟರ್, ಟೆಕ್ನಿಷಿಯನ್ಸ್, ಆಕ್ಟರ್ಸ್ ಗಳಿಂದ ಹಿಡಿದು, ಚಿತ್ರಕ್ಕೆ ನೂರಕ್ಕೆ ನೂರು ಎಫರ್ಟ್ ಹಾಕುವ ಕಲಾವಿದರ ಅನ್ವೇಷಣೆ ನಡೆಸಿದರು. ಅವರ ಉದ್ದೇಶಕ್ಕೆ ತಕ್ಕಂತೆ `ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಚಿತ್ರ ನಿರ್ಮಾಣಕ್ಕೆ ಟೀಮ್ ರೆಡಿಯಾಗಿತ್ತು. ಸ್ಯಾಮ್ ಟೇಲರ್ ಜಾನ್ಸನ್ ನಿರ್ದೇಶನದ ಹೊಣೆ ವಹಿಸಿಕೊಂಡರೇ, ಕೆಲ್ಲಿ ಮಾರ್ಸೆಲ್ ಚಿತ್ರಕಥೆಯ ಜವಾಬ್ದಾರಿ ತೆಗೆದುಕೊಂಡರು. ಮೋಸ್ಟ್ ಸಕ್ಸಸ್ಫುಲ್ ಕಾದಂಬರಿ ಸಿನಿಮಾ ರೂಪಕ್ಕೆ ಬರುವ ಭರದ ಸಿದ್ದತೆ ನಡೆದಿತ್ತು.

ನಿರ್ದೇಶಕ ಸ್ಯಾಮ್ ಟೇಲರ್ ಜಾನ್ಸನ್ ಕೈಲಿ ಸಕ್ಸಸ್ಫುಲ್ ರೊಮ್ಯಾಂಟಿಕ್ ಕಾದಂಬರಿಯಿತ್ತು. ಅದನ್ನು ಸಿನಿಮಾ ಮಾಡೋದು ಆ ಕಾದಂಬರಿಗಿಂತ ದೊಡ್ಡ ಸವಾಲು ಅಂತ ಅವನಿಗೆ ಗೊತ್ತಿತ್ತು. ಸ್ಯಾಮ್ ಟೇಲರ್ ಜಾನ್ಸನ್ `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಚಿತ್ರ ನಿರ್ದೇಶನಕ್ಕೆ ತಯಾರಿ ಮಾಡಿದ್ದ. ಅದಕ್ಕೆ ತಕ್ಕ ಪಾತ್ರವರ್ಗಗಳನ್ನು ಹುಡುಕಿದ. ಆಗ ಸಿಕ್ಕವರೇ ಈ ಡಕೋಟಾ ಜಾನ್ಸನ್, ಜೆಮ್ಮಿ ಡೋರ್ನನ್, ಜೆನ್ನಿಫರ್ ಏಲ್. ಖ್ಯಾತ ಕಲಾವಿದರಾದ ಎಲೈಸ್ ಮಾಮ್ಫೋರ್ಡ್, ವಿಕ್ಟರ್ ರಸುಕ್, ಲೂಕ್ ಗ್ರೈಮ್ಸ್, ರೀಟಾ ಓರಾ `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಸಿನಿಮಾಕ್ಕೆ ಪೂರ್ಣ ಪ್ರಮಾಣದಲ್ಲಿ ತಯಾರಿ ಮಾಡಿಕೊಂಡರು. ಈ ಚಿತ್ರ ಬೇರೆ ಚಿತ್ರಗಳಿಗಿಂತ ವಿಭಿನ್ನ ಅನ್ನಿಸಲು ಮ್ಯೂಸಿಕ್ ಅನ್ನು ಅಳವಡಿಸಲಾಗಿತ್ತು. ಡೆನ್ನಿ ಎಲ್ಫ್ ಮೆನ್ ಸಂಗೀತ ಸಂಯೋಜನೆ ಮಾಡಿದ್ದ.

ಸುಮಾರು ಎರಡು ಘಂಟೆ ಐದು ನಿಮಿಷವಿದ್ದ ಈ ಚಿತ್ರ ಶೂಟಿಂಗ್ ಮುಗಿದು, ಡಬ್ಬಿಂಗ್ ಕೆಲಸ ಮುಗಿಸಿಕೊಂಡಿತ್ತು. ಕಡೆಗೆ 2015 ಫೆಬ್ರವರಿ 11ನೇ ತಾರೀಕು ಬರ್ಲಿನ್ ನಲ್ಲಿ ತೆರೆ ಕಂಡಿತ್ತು. ಅಮೇರಿಕಾದಲ್ಲಿ ಫೆಬ್ರವರಿ ಹದಿಮೂರಕ್ಕೆ ತೆರೆ ಕಂಡಿತ್ತು. ಈ ಚಿತ್ರವನ್ನು ಮೆಚ್ಚಿದ ಅಮೇರಿಕಾ ಆರ್ ರೇಟಿಂಗ್ ಕೊಟ್ಟಿತ್ತು. ಆಮೇಲೆ ಇಡೀ ಜಗತ್ತಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಚಿತ್ರ ಯಾವ ಪರಿ ಹಾಟ್ ಆಗಿ ಮೂಡಿ ಬಂದಿತ್ತೆಂದರೇ ಮೂಲ ಕೃತಿಯೇ ನಾಚಿ ತಲೆ ತಗ್ಗಿಸುವಂತಿತ್ತು. ರೋಮಾನ್ಸ್, ಕಾಮೋತ್ಕಟತೆ, ಎಲ್ಲವೂ ನಿರೀಕ್ಷೆಗಿಂತ ಹೆಚ್ಚಾಗಿಯೇ ಇತ್ತು. ಪಡ್ಡೆಗಳಿಗೆ, ಪ್ರೇಮಿಗಳಿಗೆ, ಹುಚ್ಚು ಕುದುರೆಗಳಿಗೆ ಹೇಳಿ ಮಾಡಿಸಿದಂತಿದ್ದ ಚಿತ್ರವಾಗಿತ್ತು. ಕೆಲವೊಂದು ರೋಮಾನ್ಸ್ ಓದಲಿಕ್ಕೆ ಚಂದ, ನೋಡಲಿಕ್ಕಲ್ಲ ಎಂಬಂತಿತ್ತು `ಫಿಫ್ಟಿ ಶೇಡ್ಸ್ ಆಫ್ ಗ್ರೇ’. ಯಾವಾಗ `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ನಿರೀಕ್ಷೆಗೆ ಮೀರಿ ಬಿಚ್ಚಿ ನಿಂತಿರುವ ಚಿತ್ರವೆನ್ನುವುದು ನಿಕರವಾಯಿತೋ, ಭಾರತ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಚಿತ್ರವನ್ನು ನಿಷೇಧಿಸಲಾಯಿತು. ಸಂಪ್ರದಾಯ, ಕಟ್ಟುಪಾಡುಗಳನ್ನು ಉಳಿಸಿಕೊಂಡ ದೇಶಗಳು, ಈ ಚಿತ್ರದಲ್ಲಿ ಏನೂ ಕಮ್ಮಿಯಿಲ್ಲ, ಎಲ್ಲಾ ಸ್ವಲ್ಪ ಜಾಸ್ತಿಯೇ ಇದೆ ಅಂತ ಕಾರಣ ಕೊಟ್ಟು ನಿಷೇಧ ಹೇರಿತ್ತು.

50shades2

ನಮ್ಮ ದೇಶದ ಜೊತೆ ಈ ಚಿತ್ರವನ್ನು ಯುಎಇ, ಕೀನ್ಯಾ, ಮಲೇಷ್ಯಾ, ಚೀನಾ ಸೇರಿದಂತೆ ಅನೇಕ ರಾಷ್ಟ್ರಗಳು ನಿಷೇಧಿಸಿದ್ದವು. ಕೆಲ ರಾಷ್ಟ್ರಗಳು ಬೇರೆ ಬೇರೆ ಕಾರಣಗಳನ್ನು ಕೊಟ್ಟರೂ ಅಸಲಿ ಕಾರಣ ಕಾಮ ಸಾಮ್ರಾಜ್ಯದ ದರ್ಬಾರು ಎನ್ನುವುದೇ ಖರೆ. ಕಾದಂಬರಿಗಳು ಸಿನಿಮಾ ಆಗೋದು ಹೊಸತಲ್ಲ. ಕೆಲವು ಕಾದಂಬರಿಗೆ ಅದರದ್ದೇ ಆದ ಘನತೆಯಿರುತ್ತದೆ. ಅದು ತೆರೆಯ ಮೇಲೆ ಅಷ್ಟೇ ಸೊಗಸಾಗಿ ಅರಳುತ್ತವೆ. `ಫಿಫ್ಟಿ ಶೇಡ್ಸ್ ಆಫ್ ಗ್ರೇ’- ಅಸಲಿಗೆ ಕಾದಂಬರಿಯಲ್ಲಿ ಓದಲು ಮಜವಾಗಿದೆ. ಆದರೆ ಸಿನಿಮಾದಲ್ಲಿ ನೋಡಲು ಆಯಾ ಮನಃಸ್ಥಿತಿಯ ವೀಕ್ಷಕರು ಬೇಕಷ್ಟೆ. ಎಲ್ಲರೂ ಒಪ್ಪುವುದಿಲ್ಲ.

POPULAR  STORIES :

ನಲವತ್ತೈದರ ಹರೆಯದಲ್ಲೂ ಅದ್ಭುತ ಬೌಲಿಂಗ್..!

ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!

ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,

ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!

ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...