ವಿಶ್ವದ ಶ್ರೀಮಂತ ಉದ್ಯಮಿ ಎಂದು ಹೆಸರು ಪಡೆದಿರುವ ಮುಖೇಶ್ ಅಂಬಾನಿ ಬಳಿ ಈಗಾಗಲೇ ಸಾಕಷ್ಟು ದುಬಾರಿ ಕಾರುಗಳಿವೆ ಎಂಬುದು ಗೊತ್ತಿರುವ ವಿಚಾರವೇ.
ಆದರೆ ಈ ಎಲ್ಲಾ ದುಬಾರಿ ಕಾರುಗಳಲ್ಲಿ ಅತ್ಯಂತ ದುಬಾರಿ ಕಾರು ಯಾವುದು ಎಂಬುದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಡುವ ಪ್ರಶ್ನೆಯಾಗಿತ್ತು ಹಾಗು ಕುತೂಹಲ ಕೂಡ ಇತ್ತು ಇದಕ್ಕೆ ಈಗ ಉತ್ತರ ಸಿಕ್ಕಿದೆ ಅವರ ಬಳಿ ಇರುವುದು ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್ VIII ಕಾರು ಅತ್ಯಂತ ದುಬಾರಿ ಕಾರು ಎಂದು ಹೇಳಲಾಗಿದೆ. ಇತರೆ ಕಾರುಗಳ ಬೆಲೆ 8 ಕೋಟಿ ಇದೆಯಂತೆ. ಆದರೆ ಈ ಕಾರಿನ ಬೆಲೆ 13.5 ಕೋಟಿ ರೂಪಾಯಿ. ಈ ಕಾರಿಗೆ ಇತರ ಕಸ್ಟಮೈಸೇಶನ್ ಸೇರಿ 15 ಕೋಟಿ ರೂಪಾಯಿಯಾಗಿದೆಯಂತೆ.