ಆತ್ಮೀಯ ಭಾವನೆ ಮೂಡುವಂತೆ ವರ್ತಿಸುವಂತೆ ಮತ್ತು ವಿದ್ಯಾರ್ಥಿ ಪೋಷಕರೊಂದಿಗೂ ಸೌಜನ್ಯದಿಂದ ವರ್ತಿಸಿ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ತಿಳಿಸಿದರು.ಕೆಲವು ವಿಷಯದಲ್ಲಿ ಚುರುಕಿಲ್ಲದ ವಿದ್ಯಾರ್ಥಿಗಳ ಕಡೆ ಹೆಚ್ಚು ಗಮನಹರಿಸಿ ಉತ್ತೇಜಿಸುವ ಕೆಲಸ ಆಗಬೇಕು, ಅನಗತ್ಯವಾಗಿ ಸಮಯ ವ್ಯಯಿಸದೇ, ಮೊಬೈಲ್ ಗಳಿಂದ ದೂರ ಇರುವುದು, ಊಟದ ಶೈಲಿ, ಓದುವ ವಿಧಾನ ಕುರಿತು ಶಿಕ್ಷಕರು ತಿಳಿ ಹೇಳುವಂತೆ ಭವಾನಿ ರೇವಣ್ಣ ಅವರು ಹೇಳಿದರು.
ಎಸ್.ಎಸ್.ಎಲ್. ಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನಗಳಿಸಿದ ವಿಷಯ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುವ ಗೀಳಿಲ್ಲ ಅದರ ಅವಶ್ಯಕತೆಯೂ ನನಗಿಲ್ಲಾ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭವಾನಿ ರೇವಣ್ಣನವರು ಹೇಳಿದರು.