ಯಡಿಯೂರಪ್ಪ ಅವರನ್ನು ರಾಜಾಹುಲಿ ಎಂದು ಬಿಂಬಿಸಲಾಗುತ್ತಿತ್ತು. ಹುಲಿಗೆ ಅಮಿತ್ ಶಾ ಅವರನ್ನು ಭೇಟಿ ಮಾಡುವ ಅವಕಾಶವೇ ಸಿಕ್ಕಿಲ್ಲ. ಬೆಕ್ಕು ಬಂದಾಗ ಇಲಿ ಹೋಗಿ ಬಿಲ ಹುಡುಕುತ್ತದೆಯೋ ಹಾಗೆ ಯಡಿಯೂರಪ್ಪ ಕೇಂದ್ರದ ನಾಯಕರ ಬಳಿ ಪರಿಹಾರ ಕೇಳುವ ಮತ್ತು ರಾಜಕೀಯ ವಿಷಯ ಕುರಿತು ಚರ್ಚಿಸುವ ಧೈರ್ಯ ಯಡಿಯೂರಪ್ಪ ಅವರಿಗೆ ಇಲ್ಲದಂತಾಗಿದೆ. ಇವರಿಗೆ ಬದ್ಧತೆ,
ಆತ್ಮಗೌರವ ಕಳೆದು ಹೋಗಿವೆ. ಮಾತುಕೊಟ್ಟಂತೆ ನಡೆದುಕೊಳ್ಳಲಾಗುತ್ತಿಲ್ಲ ಎಂದು ಜನರ ಬಳಿ ಯಡಿಯೂರಪ್ಪ ಕ್ಷಮೆ ಕೇಳಬೇಕು. ಈಗಲೂ ಕಾಲ ಮಿಂಚಿಲ್ಲ. ನಮ್ಮ ಪಕ್ಷ ಬಿಟ್ಟು ನಿಮ್ಮ ಪಕ್ಷ ಸೇರಿ ಉಪ ಚುನಾವಣೆಯಲ್ಲಿ ಗೆದ್ದವರನ್ನು ಮಂತ್ರಿಗಳನ್ನಾಗಿ ಮಾಡಿ, ಇಲ್ಲವೇ ಜನರ ಬಳಿ ಬೇಷರತ್ ಕ್ಷಮೆ ಕೇಳಿ ಎಂದು ಉಗ್ರಪ್ಪ ಒತ್ತಾಯಿಸಿದರು.