ಕಿರಿಕ್ ಪಾರ್ಟಿ’ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದ ರಶ್ಮಿಕಾ ಮಂದಣ್ಣ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದು, ಬಹುಬೇಡಿಕೆ ನಟಿಯಾಗಿದ್ದಾರೆ.
ಅವರ ನಿವಾಸದ ಮೇಲೆ ಐಟಿ ದಾಳಿ ನೆಡೆಸಿದೆ ರಶ್ಮಿಕಾ ಸಿನಿಮಾಗೆ ತೆಗೆದು ಕೊಳ್ಳುವ ಸಂಭಾವನೆ ಗೆ ನಿಗದಿತ ದಾಖಲೆಗಳ ಪರಿಶೀಲನೆ ನೆಡೆಸುತ್ತಿದೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿರುವ ರಶ್ಮಿಕಾ ಮಂದಣ್ಣ ಅವರ ನಿವಾಸದಲ್ಲಿ ಮುಂಜಾನೆಯಿಂದ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 70 ಲಕ್ಷದಿಂದ 1 ಕೋಟಿ ವರೆಗೂ ಸಂಭಾವನೆ ತೆಗೆದುಕೊಳ್ಳುತ್ತಿರುವ ರಶ್ಮಿಕಾ ಅವರಿಗೆ ಯಾವ ಕಾರಣಕ್ಕೆ ಈ ದಾಳಿ ನಡೆದಿದೆ ಮತ್ತು ರೇಡ್ ವೇಳೆ ಯಾವೆಲ್ಲ ದಾಖಲೆಗಳು ದೊರೆತಿವೆ ಎನ್ನುವ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.