“ಘಟನೆ ನಡೆದ ಏಳು ವರ್ಷಗಳಾಗಿವೆ ಹಾಗೂ ನಮಗೆ ನ್ಯಾಯ ದೊರಕಿಲ್ಲ. ಸರಕಾರಕ್ಕೆ ನಮ್ಮ ನೋವು ಕಾಣಿಸುತ್ತಿಲ್ಲ. ಆಕೆಯ ಸಾವಿನಲ್ಲಿ ಎರಡೂ ಪಕ್ಷಗಳು ರಾಜಕೀಯ ನಡೆಸುತ್ತಿವೆ” ಎಂದು ಎಎಪಿ ಹಾಗೂ ಬಿಜೆಪಿ ನಡುವೆ ಈ ವಿಚಾರದಲ್ಲಿ ನಡೆಯುತ್ತಿರುವ ವ್ಯಾಗ್ಯುದ್ಧದ ಕುರಿತಂತೆ ಅವರು ಪ್ರತಿಕ್ರಿಯಿಸಿದರು.
“ಇಲ್ಲಿಯ ತನಕ ನಾನು ರಾಜಕೀಯದ ಬಗ್ಗೆ ಮಾತನಾಡಿಲ್ಲ, ಆದರೆ 2012ರಲ್ಲಿ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದ ಅದೇ ಜನರು ಇಂದು ತಮ್ಮ ರಾಜಕೀಯ ಲಾಭಕ್ಕಾಗಿ ನನ್ನ ಪುತ್ರಿಯ ಸಾವಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ”