ಯಾರನ್ನಾದರೂ ನೋಡಿ… ಅವರ ಮೇಲೆ ನಿಮಗೆ ಪ್ರೀತಿ ಹುಟ್ಟಿ, ಲೈಫ್ ಲಾಂಗ್ ಅವರೊಡನೆ ಇರಬೇಕು ಎಂದು ನಿರ್ಧರಿಸಿ ಅವರಿಗೆ ಪ್ರಪೋಸ್ ಮಾಡಲು ಮುಂದಾಗಿದ್ದೀರಾ..? ನೀವು ಪ್ರಪೋಸ್ ಮಾಡುವ ಮುನ್ನ ಇದನ್ನು ಓದಿ ಬಿಡಿ..!
ಪ್ರೀತಿ ಮಾಯೆ…ಮೊದಲ ನೋಟದಲ್ಲಿ ಪ್ರೀತಿ ಹುಟ್ಟುತ್ತೆ ನಿಜ.. ಆದರೆ ಅದು ಕೆಲವೊಮ್ಮೆ ಆಕರ್ಷಣೆಯೂ ಆಗಬಹುದು. ಆದ್ದರಿಂದ ದುಡುಕಿ ಪ್ರೀತಿಯಲ್ಲಿ ಬೀಳ ಬಾರದು. ನೀವು ಯಾರಿಗಾದರೂ ಗಡಿಬಿಡಿಯಿಂದ ಪ್ರಪೋಸ್ ಮಾಡಲು ಹೋಗಬೇಡಿ.
*ಪ್ರಪೋಸ್ ಮಾಡುವ ಮುನ್ನ ಅವರು ಯಾರು? ಅವರ ವಿದ್ಯಾರ್ಹತೆ ಏನು? ಅವರ ಅಭಿರುಚಿಗಳೇನು? ಅವರ ಹಿನ್ನೆಲೆಯೇನು ಎನ್ನುವುದರ ಬಗ್ಗೆ ಮೊದಲು ತಿಳಿದುಕೊಳ್ಳಿ.
* ಕಲ್ಪನಾ ಪ್ರಪಂಚಕ್ಕೂ, ವಾಸ್ತವಕ್ಕೂ ವ್ಯತ್ಯಾಸವಿದೆ. ಒಮ್ಮೆ ಅವರು ನಿಮ್ಮ ವಾಸ್ತವ ಬದುಕಿಗೆ ಸೂಟ್ ಆಗುತ್ತಾರಾ ಎನ್ನುವುದನ್ನು ತಿಳಿಯಿರಿ.
* ಆಕರ್ಷಣೆಯೇ, ಪ್ರೀತಿಯೇ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಿ. ಮೊದಲು ಅವರ ಸ್ನೇಹ ಸಂಪಾದಿಸಿ, ಅವರನ್ನು ಅರ್ಥಮಾಡಿಕೊಂಡು ನಿಮ್ಮ ಸಂಗಾತಿ ಆಗಿ ಲೈಫ್ ಲಾಂಗ್ ಇರಬಲ್ಲರೇ ಎನ್ನುವುದನ್ನು ಅರಿಯಿರಿ.
* ಗೆಳೆತನದಿಂದ ಎಲ್ಲವೂ ಅರ್ಥವಾಗುತ್ತದೆ, ನಿಮ್ಮೆಲ್ಲಾ ಅನುಮಾನ, ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ.
* ಅವರ ಮನೆಯವರನ್ನೂ ಪರಿಚಯ ಮಾಡಿಕೊಳ್ಳಿ.. ಅವರ ಮನ ಗೆಲ್ಲುವ ಪ್ರಯತ್ನ ಮಾಡಿ.. ಅವರ ವಿಶ್ವಾಸಗಳಿಸಿಕೊಳ್ಳಿ..
ಇಷ್ಟೆಲ್ಲಾ ಆದಮೇಲೆ ಪ್ರೀತಿ ನಿವೇದಿಸಿಕೊಳ್ಳಿ.