ರಾಜಸ್ಥಾನದ ಅಜ್ಮೀರ್ ಕೇಂದ್ರೀಯ ಕಾರಾಗೃಹದಲ್ಲಿದ್ದ ಈತ 21 ದಿನಗಳ ಪರೋಲ್ ಪಡೆದಿದ್ದ. ಈ ಅವಧಿ ಮುಗಿದು ಶುಕ್ರವಾರ ಅಧಿಕಾರಿಗಳ ಮುಂದೆ ಶರಣಾಗಬೇಕಿತ್ತು. ಪರೋಲ್ ಅವಧಿಯಲ್ಲಿ ಅಗ್ರಿಪಾಡ ಪೊಲೀಸ್ ಠಾಣೆಯಲ್ಲಿ ಪ್ರತಿದಿನ ಬೆಳಗ್ಗೆ 10.30ರಿಂದ 12 ಗಂಟೆ ಅವಧಿಯಲ್ಲಿ ಹಾಜರಾಗುವಂತೆ ಆದೇಶಿಸಲಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ಜಲೀಸ್ ಗುರುವಾರ ಆಗಮಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ 68 ವರ್ಷ ವಯಸ್ಸಿನ ಜಲೀಸ್ ಅನ್ಸಾರಿ ನಾಪತ್ತೆಯಾಗಿದ್ದಾನೆ.