ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿದೆ. ಭಾರತದ ಪರವಾಗಿ ಶಿಖರ್ ಧವನ್ 96, ರೋಹಿತ್ ಶರ್ಮ 42, ವಿರಾಟ್ ಕೊಹ್ಲಿ 78, ಕೆ.ಎಲ್. ರಾಹುಲ್ 80 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ 49.1 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 304 ರನ್ ಗಳಿಸಿ 36 ರನ್ ಗಳ ಅಂತರದಿಂದ ಸೋಲು ಕಂಡಿದೆ.
ಇನ್ನು ಕನ್ನಡಿಗ ಕೆ.ಎಲ್. ರಾಹುಲ್ ಪಂದ್ಯದಲ್ಲಿ 80 ರನ್ ಗಳಿಸಿದ್ದು ಏಕದಿನ ಮಾದರಿಯಲ್ಲಿ 1000 ರನ್ ಗಡಿ ದಾಟಿದ್ದಾರೆ. ಅವರು 27 ಇನ್ನಿಂಗ್ಸ್ ಗಳಲ್ಲಿ 1 ಸಾವಿರ ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ, ಶಿಖರ್ ಧವನ್, ನವಜೋತ್ ಸಿಂಗ್ ಸಿಧು 25 ಪಂದ್ಯಗಳಲ್ಲಿ, ಎಂ.ಎಸ್. ಧೋನಿ, ಅಂಬಾಟಿ ರಾಯುಡು 29 ಪಂದ್ಯಗಳಲ್ಲಿ 1000 ರನ್ ಗಳಿಸಿದ್ದಾರೆ.