ಅಮಿತ್ ಶಾ ಅವರೇ, ಸಿಎಎ/ಎನ್‌ಆರ್‌ಸಿ ವಿರೋಧಿಸಿ ದೇಶಾದ್ಯಂತ 1 ತಿಂಗಳಿನಿಂದ ನಿರಂತರವಾಗಿ, ಎಲ್ಲ ಜಾತಿ-ಧರ್ಮಗಳ ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಜನಸಾಮಾನ್ಯರು ಪ್ರತಿಭಟನೆ ಮಾಡುತ್ತಿದ್ದಾರೆ. ಜನಾಭಿಪ್ರಾಯದ ವಿರುದ್ಧ ಸರ್ವಾಧಿಕಾರಿ ಧೋರಣೆ ಏಕೆ? ಬಿಜೆಪಿಯು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುತ್ತಿಲ್ಲವೇಕೆ? ಉತ್ತರ ಕೊಡಿ ಶಾ.
ಕೇವಲ ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರಕಾರವು ಟೇಕ್ ಆಫ್ ಆಗಿಲ್ಲ. ಬಿಜೆಪಿ ಆರೆಸೆಸ್ಸ್ ಕಿತ್ತಾಟ, ಮಂತ್ರಿಮಂಡಲ ರಚನೆಗೆ ನಿಮ್ಮ ತಡೆ ಮತ್ತು ದಬ್ಬಾಳಿಕೆ, ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರ ಹೊಂದಾಣಿಕೆ ಕೊರತೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಗೊಳಿಸಿರುವುದೇಕೆ? ಉತ್ತರ ಕೊಡಿ ಶಾ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.