ಮಂಗಳೂರು ಏರ‍್ಪೋರ್ಟಿನಲ್ಲಿ ಬಾಂಬ್ ಇಟ್ಟಿದ್ದ ಆದಿತ್ಯ ರಾವ್ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸರಿಗೆ ಈತನ ಕುರಿತು ಇನ್ನಷ್ಟು ನಿಗೂಢ ಸತ್ಯಗಳು ಗೊತ್ತಾಗಿವೆ. ಎಂಜಿನಿಯರಿAಗ್ ಹಾಗೂ ಎಂಬಿಎ ಪದವೀಧರನಾಗಿದ್ದ ಆದಿತ್ಯ ತನ್ನ ಬಯೋಡಾಟದಲ್ಲಿ ತಪ್ಪು ಮಾಹಿತಿ ನೀಡಿರುವುದನ್ನು ಪೊಲೀಸರು ಪತ್ತೆ ಹೆಚ್ಚಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಕೆಲಸ ಕೇಳಿಕೊಂಡು ಹೋದ ಸಂದರ್ಭದಲ್ಲಿ ತನ್ನ ಬಯೋಡಾಟದಲ್ಲಿ ಕಡಿಮೆ ಅಂಕಗಳನ್ನು ಪಡೆದಿರುವುದಾಗಿ ಹೇಳಿದ್ದಾನೆ. ತಾನು ಬ್ಲಾಕ್ ಬೆಲ್ಟ್ ಪಡೆದಿದ್ದು, ಸಂಗೀತ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದೇನೆ. ಎನ್ ಸಿ ಸಿ ಕೆಡೆಟ್ ಆಗಿದ್ದೆ ಎಂದೂ ಹೇಳಿದ್ದಾನೆ.
ನನಗೆ ಇಂಗ್ಲಿಷ್, ಹಿಂದಿ, ಕನ್ನಡ ಮತ್ತು ತುಳು ಭಾಷೆಗಳು ಗೊತ್ತು. ಪ್ರವಾಸ, ಕ್ರಿಕೆಟ್, ಸಂಗೀತ ನನ್ನ ಆಸಕ್ತಿಯ ವಿಷಯಗಳು. ಹತ್ತನೇ ತರಗತಿಯಲ್ಲಿ ಶೇಕಡಾ ೮೨ ಮತ್ತು ಪಿಯುಸಿಯಲ್ಲಿ ಶೇಕಡಾ 68 ಅಂಕಗಳನ್ನು ಪಡೆದಿದ್ದೇನೆ ಎಂದೂ ಬರೆದಿದ್ದ.
ಪಾಸಿಟಿವ್ ಪ್ರೇಮ್ ಆಫ್ ಮೈಂಡ್ ಅಂಡ್ ಸೆನ್ಸ್ ಆಫ್ ಅಚೀವ್ ಮೆಂಟ್ ಲೀಡ್ಸ್ ಟು ದಿ ಬೆಸ್ಟ್ ಔಟ್ ಪುಟ್ (ಧನಾತ್ಮಕ ಮನಸ್ಸು ಮತ್ತು ಸಾಧನೆಯ ಪ್ರಜ್ಞೆ ಉತ್ತಮ ಫಲಿತಾಂಶದತ್ತ ಕೊಂಡೊಯ್ಯುತ್ತದೆ’ ಎಂದು ವಿಶೇಷ ಒಕ್ಕಣೆಯನ್ನು ಬರೆದು ಗಮನ ಸೆಳೆದಿದ್ದಾನೆ.
ಮಂಗಳೂರಿನ ಹೊಟೇಲ್‌ನಲ್ಲಿ ಕ್ಯಾಶಿಯರಾಗಿ ಕೆಲಸ ನಿರ್ವಹಿಸಿ, ಬಳಿಕ ಕಾರ್ಕಳದಲ್ಲಿರುವ ಬಾರ್ ಅಂಡ್ ರೆಸ್ಟೋರೆಂಟಲ್ಲಿ ಸಪ್ಲೆöÊಯರಾಗಿ ಕೆಲಸ ಮಾಡಿದ್ದ. ಜನವರಿ 20ರಂದು ಬಾಂಬ್ ಇಡುವುದಕ್ಕಿಂತ ಮುಂಚೆ ಆದಿತ್ಯ ಕಾರ್ಕಳದ ಕಿಂಗ್ಸ್ ಕೋರ್ಟ್ ಹೊಟೇಲಿನಲ್ಲಿ ತಂಗಿದ್ದ ಸಿಸಿಟಿವಿ ದೃಶ್ಯಗಳು ಸಿಕ್ಕಿವೆ. ಜನವರಿ 18ರಂದು ಅಡುಗೆ ಸಹಾಯಕನಾಗಿ ಕೆಲಸಕ್ಕೆ ಸೇರಿದ್ದ. ಎರಡು ದಿನ ಕೆಲಸ ಮಾಡಿ ಹೋಟೆಲ್ಲಿಂದ ನಾಪತ್ತೆಯಾಗಿದ್ದ. ತಂಗಿದ್ದ ಮೂರು ದಿನದಲ್ಲಿ ಟೇಬಲ್ ಕ್ಲೀನಿಂಗ್, ಅಡುಗೆಗೆ ಸಹಾಯ ಮಾಡಿದ್ದಾನೆ. ರೂಮಿನಲ್ಲಿ ಬಾಂಬ್ ತಯಾರಿಗೆ ಪೂರ್ವ ಸಿದ್ಧತೆ ಮಾಡಿದ್ದಾನೆ. ಈ ಎಲ್ಲಾ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಬಾಂಬ್ ಇರಿಸಿದ ಹಿಂದಿನ ದಿನ ರಾತ್ರಿ ಇಡೀ ಮಲಗದ ಬರಿ ಮೈಯಲ್ಲೇ ಹೊಟೇಲ್ ಹೊರಗಡೆ ಅಡ್ಡಾಡುತ್ತಿದ್ದ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ.
“ಆದಿತ್ಯ ರಾವ್ ಕೆಲಸ ಕೇಳಿಕೊಂಡು ಸಂಜೆ ಏಳು ಗಂಟೆಗೆ ಬಂದಿದ್ದ. ಅವನ ಆಧಾರ್ ಕಾರ್ಡ್ ಪಡೆದುಕೊಂಡು ಆತನಿಗೆ ಕೆಲಸ ನೀಡಿದ್ದೆವು. ಭಾನುವಾರ ನಮ್ಮ ಹೊಟೆಲಲ್ಲಿ ಕೆಲಸ ಮಾಡಿದ್ದಾನೆ. ಸೋಮವಾರ ಬೆಳಗ್ಗೆ 4 ಗಂಟೆಗೆ ಹೋಗಿದ್ದಾನೆ. ಅವನು ಮಾಡಿದ ಕೆಲಸಕ್ಕೆ ಸಂಬಳವನ್ನೂ ಕೇಳಿಲ್ಲ’’ ಎಂದು ಕಿಂಗ್ಸ್ ಕೋರ್ಟ್ ಹೊಟೇಲ್ ಮಾಲೀಕ ಅಶೋಕ್ ಶೆಟ್ಟಿ ಹೇಳಿದ್ದಾರೆ.
ಸೆಕ್ಯೂರಿಟಿ ಕೆಲಸಕ್ಕೆ ಸತಾಯಿಸಿದ್ದಕ್ಕೆ ಬಾಂಬಿಟ್ಟ : ಆದಿತ್ಯ ಬೆಂಗಳೂರು ರ‍್ಪೋರ್ಟಿನಲ್ಲಿ ಸೆಕ್ಯೂರಿಟಿ ಕೆಲಸಕ್ಕೆ ಪ್ರಯತ್ನಿಸಿದ್ದ, ಆದರೆ ಅದು ಬೇರೆಯವರ ಪಾಲಾಗಿತ್ತು. ಇದರಿಂದ ಕೋಪಗೊಂಡು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡುವುದಕ್ಕೆ ಶುರು ಮಾಡಿದ್ದಾನೆ. ರೈಲ್ವೆ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಹಾಕಿ ಬಂಧಿತನಾಗಿದ್ದ. ಇಂಟರ್‌ನೆಟ್ ಮೂಲಕ ಬಾಂಬ್ ತಯಾರಿಕಾ ಕಚ್ಚಾವಸ್ತುಗಳನ್ನು ತರಿಸಿ ಸ್ವತಃ ತಾನೇ ಬಾಂಬ್ ತಯಾರಿಸಿ ವಿಮಾನ ನಿಲ್ದಾಣ ಸ್ಟೋಟಗೊಳಿಸಲು ಸಂಚು ರೂಪಿಸಿದ ಎಂದು ಆಯುಕ್ತ ಹರ್ಷಾ ವಿವರಿಸಿದ್ದಾರೆ.
ಬಾಂಬ್ ಇಟ್ಟು ಭೀತಿ ಸೃಷ್ಟಿಸಿದ್ದ ಆರೋಪಿ ಆದಿತ್ಯ ರಾವ್ ಅದೇ ದಿನ ಇಂಡಿಗೋ ವಿಮಾನದಲ್ಲೂ ಬಾಂಬಿ ಇಟ್ಟಿರುವುದಾಗಿ ಕರೆ ಮಾಡಿ ಭೀತಿಯನ್ನು ಹುಟ್ಟಿಸಿದ್ದ. ಅಲ್ಲದೆ ಇದೇ ರೀತಿ ಕರೆ ಮಾಡಿ ಬೆದರಿಕೆ ಹಾಕಿದ್ದ. ಈ ಎಲ್ಲಾ ಮೂರು ವಿಚಾರಗಳಲ್ಲೂ ಪ್ರಕರಣ ದಾಖಲಾಗಿದೆ.
ಬಾಂಬರ್ ಆದಿತ್ಯರಾವ್ನ ಕಂತೆ ಕಂತೆ ಪುರಾಣ, ಇಲ್ಲಿದೆ ಕಂಪ್ಲೀಟ್ ಸ್ಟೋರಿ
Date: