ನ್ಯೂಜಿಲೆಂಡ್ ಕಿವಿ ಹಿಂಡಿದ ಕನ್ನಡಿಗ ರಾಹುಲ್ ; ಅಯ್ಯರ್ ಆಟಕ್ಕೆ ಕಿವೀಸ್ ಅಯ್ಯಯ್ಯೋ..!

Date:

ಆಕ್ಲೆಂಡ್​ : ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 6 ವಿಕೆಟ್ ಗಳಿಂದ ಗೆದ್ದು ಬೀಗಿದೆ.ಈ ಗೆಲುವಿನ ‘ಶ್ರೇಯಸ್ಸು’ ಅಯ್ಯರ್ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಸಲ್ಲುತ್ತದೆ.
ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇನ್ ವಿಲಿಯಂಸನ್ ನಾಯಕತ್ವದ ನ್ಯೂಜಿಲೆಂಡನ್ನು ಬ್ಯಾಟಿಂಗ್​ ಗೆ ಆಹ್ವಾನ ಮಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಕಾಲಿನ್ ಮನ್ರೋ ಅವರ 59, ಕ್ಯಾಪ್ಟನ್ ವಿಲಿಯಮ್ಸ್​ 51ರನ್ ಹಾಗೂ ರಾಸ್ ಟೇಲರ್ ಅವರ ಹೊಡಿಬಡಿ 54ರನ್ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 203ರನ್​ಗಳ ಬೃಹತ್ ಮೊತ್ತ ಗಳಿಸಿತು.
ನಂತರ ಟೀಮ್ ಇಂಡಿಯಾ ಪರ ಗುರಿ ಬೆನ್ನತ್ತಲು ಹಿಟ್ ಮ್ಯಾನ್ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆ.ಎಲ್ ರಾಹುಲ್ ಬ್ಯಾಟಿಂಗ್​ಗೆ ಇಳಿದರು. ಆದರೆ ತಂಡದ ಮೊತ್ತ 16ರನ್ ಆಗಿದ್ದಾಗ ರೋಹಿತ್ ಶರ್ಮಾ ಔಟಾದರು. ರೋಹಿತ್ ಔಟಾದ ಬಳಿಕ ಕೊಹ್ಲಿ ರಾಹುಲ್ ಜೊತೆಯಾದರು. ಈ ಜೋಡಿ 99ರನ್ ಜೊತೆಯಾಟವಾಡಿತು. ಈ ಮೂಲಕ ಭಾರತದ ಗೆಲುವಿಗೆ ದಾರಿ ಸುಗಮವಾಗಿತ್ತು. ಆದರೆ, ಇವರಿಬ್ಬರು ಒಟ್ಟೊಟ್ಟಿಗೇ ಪೆವಿಲಿಯನ್ ಸೇರಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ಆದರೆ ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟಿಂಗ್ ಮಾಡಿದರು. 29 ಬಾಲ್​ಗಳಲ್ಲಿ 58ರನ್ ಚಚ್ಚಿ ನ್ಯೂಜಿಲೆಂಡ್ನಿಂದ ಗೆಲುವು ಕಸಿದುಕೊಂಡರು. ಅದಕ್ಕು ಮೊದಲು ರಾಹುಲ್ 29 ಬಾಲ್ ಗಳಲ್ಲಿ 58 ರನ್ ವಿರಾಟ್ ಕೊಹ್ಲಿ 32 ಬಾಲ್​​ಗಳಲ್ಲಿ 45ರನ್ ಮಾಡಿದ್ದರು. ಅಂತಿಮವಾಗಿ ಮನೀಷ್ ಪಾಂಡೆ ಅಯ್ಯರ್​ ಗೆ ಸಾಥ್ ನೀಡಿ ಗೆಲುವಿಗೆ ನೆರವಾದರು. ಇನ್ನೂ ಒಂದು ಓವರ್ ಬಾಕಿ ಇರುವಂತೆ ಭಾರತ ಗೆದ್ದಿತು.

Share post:

Subscribe

spot_imgspot_img

Popular

More like this
Related

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ

ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು...

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ!

ಸಿಮೆಂಟ್ ಮಿಕ್ಸರ್ ಲಾರಿ ಅವಾಂತರಕ್ಕೆ ಪುಟ್ಟ ಬಾಲಕ ಬಲಿ! ಬೆಂಗಳೂರು: ಸಿಮೆಂಟ್ ಮಿಕ್ಸರ್...

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು!

ಕಿವಿ ಹಣ್ಣಿನ ಪ್ರಯೋಜನಗಳ ಜೊತೆಗೆ ಎಚ್ಚರಿಕೆ: ಅತಿಯಾಗಿ ತಿಂದರೆ ಹಾನಿಯೇ ಹೆಚ್ಚು! ಕಿವಿ...

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ ನಿಗದಿ

ರೈತರ ಬೇಡಿಕೆಗೆ ಮಣಿದ ಸರ್ಕಾರ: ಕಬ್ಬು ಟನ್‌ʼಗೆ 3300 ರೂ. ಬೆಲೆ...