ಅಮೆರಿಕಾದ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತೀಯ ಮೂಲದ ಪೋರಿ ಸಾಧನೆ..!

Date:

ಶ್ವೇತಾ ಪ್ರಭಾಕರನ್. ಇವರ ವಯಸ್ಸು ಇನ್ನೂ ಬರೀ 15 ವರ್ಷ. ಇವರ ತಂದೆ ಮೂಲತಃ ತಮಿಳುನಾಡಿನವರು. ತಂದೆ ತಾಯಿ ಇಬ್ಬರೂ ಕಂಪ್ಯೂಟರ್ ಎಂಜಿನಿಯರ್ಗಳಾಗಿದ್ದಾರೆ. ಅಮೆರಿಕಾದ ವರ್ಜಿನಿಯಾದಲ್ಲಿ ವಾಸ.
ಕೇವಲ 15 ವರ್ಷಕ್ಕೆ EVERYBODY CODE NOW ಎಂಬ ಶಿಕ್ಷಣ ಸಂಸ್ಥೆಯನ್ನು ಹುಟ್ಟು ಹಾಕಿರುವ ಶ್ವೇತಾ, ಇದರ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ದಾರಿ ತೋರಿಸುವ ಪ್ರಯತ್ನ ಮಾಡುತ್ತಿದ್ದಾಳೆಂದರೆ ತಪ್ಪಾಗಲಾರದು.
ತಮ್ಮ ಸಂಸ್ಥೆಯನ್ನು ಲಾಭರಹಿತ ಶಿಕ್ಷಣ ಸಂಸ್ಥೆಯನ್ನಾಗಿ ರೂಪಿಸಿರುವ ಕಾರಣಕ್ಕಾಗಿಯೇ ಶ್ವೇತಾ ಅವರನ್ನು ವೈಟ್ ಹೌಸ್ನ ಪ್ರತಿಷ್ಠಿತ ಪ್ರಶಸ್ತಿ ಹುಡುಕಿಕೊಂಡು ಬಂದಿದೆ. ಅಮೆರಿಕಾ ಸರಕಾರ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡುವವರಿಗೆ ಈ ಪ್ರಶಸ್ತಿ ನೀಡುತ್ತದೆ. ಈ ಪ್ರಶಸ್ತಿಯನ್ನು ಶ್ವೇತಾ ಪಡೆದು ಭಾರತೀಯರ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಶ್ವೇತಾ ಪ್ರಭಾಕರನ್ ಅವರು ಯಾವುದೇ ಲಾಭದ ಉದ್ದೇಶವಿಟ್ಟುಕೊಳ್ಳದೆ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದ್ರು. ಇದರ ಮೂಲಕ ಇಂದಿನ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಎಂಜಿನಿಯರ್, ವಿಜ್ಞಾನಿ ಅಥವಾ ಉದ್ಯಮಿಗಳನ್ನಾಗಿಸಲು ತರಬೇತಿ ನೀಡುತ್ತಿದ್ದಾರೆ.

ಇನ್ನು ತಮ್ಮ ಸಂಸ್ಥೆಯ ಮೂಲಕ ಶ್ವೇತಾ ಅವರು, ಮಿಷನ್ 20 ಎಂಬ ಅಭಿಯಾನ ಆರಂಭಿಸಿದ್ದಾರೆ. ಈ ಮಿಷನ್ 20 ಎಂದರೆ 2020ರ ವೇಳೆಗೆ ಅಮೇರಿಕಾದಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಐಟಿ ಹುದ್ದೆಗಳು ಖಾಲಿಯಾಗಲಿವೆ. ಆ ಹುದ್ದೆಗಳ ಮೇಲೆ ಕಣ್ಣಿಟ್ಟಿರುವ ಶ್ವೇತಾ ಈಗಿನಿಂದಲೇ ವಿದ್ಯಾರ್ಥಿಗಳಿಗೆ ಐಟಿ ತರಬೇತಿ ನೀಡುವ ಸಲುವಾಗಿ ಈ ಅಭಿಯಾನಕ್ಕೆ ಮಿಷನ್ 20 ಹೆಸರಿಟ್ಟಿದ್ದಾರೆ.

ಅಲ್ಲದೇ, ಆ ನಿಟ್ಟಿನಲ್ಲಿ ಯಶಸ್ವಿ ಸಹ ಆಗಿದ್ದಾರೆ. ಈಗಾಗಲೇ ಸಾವಿರಾರು ವಿದ್ಯಾರ್ಥಿಗಳಿಗೆ ನುರಿತ ತಜ್ಞರಿಂದ ತರಗತಿ ನಡೆಸಿ ಉತ್ತಮ ತರಬೇತಿ ನೀಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ಶ್ವೇತಾ ಪ್ರಭಾರಕರನ್ ಅವರ ಹೊಸ ಸಾಹಸಕ್ಕೆ ಅವರ ಪೋಷಕರ ಜತೆಗೆ ಅಮೆರಿಕಾ ಸರ್ಕಾರವು ಬೆನ್ನೆಲುಬಾಗಿ ನಿಂತು ಸಾಕಷ್ಟು ಧನಸಹಾಯ ಮಾಡಿದೆ.
ಅಷ್ಟೇ ಅಲ್ಲದೆ ಶ್ವೇತಾ ಮುಂದಿನ ದಿನಗಳಲ್ಲೆ ಐಟಿ ಕ್ಷೇತ್ರದ ಮೂಲಕ ಅಮೇರಿಕಾವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕನಸು ಹೊಂದಿದ್ದಾರೆ. ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ವೃತ್ತಿಪರ ತರಬೇತಿ ನೀಡಿದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಈ ಸಂಸ್ಥೆ ಪ್ರಾರಂಭಿಸಿರುವುದಾಗಿ ಶ್ವೇತಾ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ ಭಾರತೀಯರೊಬ್ಬರು ಅಮೆರಿಕದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಹೊರಟಿರುವುದು ನಮ್ಮಂತಹ ಭಾರತೀಯರಿಗೆ ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲದೇ ಅಮೆರಿಕನ್ನರಿಗೆ ಶ್ವೇತಾ ಮಾದರಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆಯಾಗಲಾರದು.

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...