ಬಾರ್ ಪಬ್ ಗಳಿಗೆ ಹೋಗೋ ಹುಡುಗೀರು ಅಂದ್ರೆ ಅವ್ರು ಬಾರೀ ಹೈಫೈ ಮೈಮೇಲೆ ಎರಡು ತುಂಡು ಬಟ್ಟೆ ಹಾಕ್ಕೊಂಡು ಹೋಗ್ತಾರೆ ಅಂತ ಮೂಗು ಮುರಿತಿದ್ದವರೆಲ್ಲ ಮೂಗು ಮೇಲೆ ಬೆರಳಿಡುವಂತ ಸುದ್ದಿಯೊಂದು ಕೇಳಿ ಬರುತ್ತಿದೆ. ಅದೇನಂದ್ರೆ ತುಂಡುಡುಗೆ ತೊಟ್ಟ ಲಲನೆಯರಿಗೆ ಬಾರ್ ಪಬ್ ಗಳಲ್ಲಿ ನೋ ಎಂಟ್ರಿಯಂತೆ.
ಹೌದು ಆದ್ರೆ ಈ ನೀತಿ ಜಾರಿಗೆ ಬಂದಿರೋದು ಕರ್ನಾಟಕದಲ್ಲಲ್ಲ. ಬದಲಿಗೆ ಪಂಜಾಬ್ ನಲ್ಲಿ. ಬಾರ್, ಪಬ್‌ಗಳಲ್ಲಿ ಯುವತಿಯರು ಪ್ರವೇಶ ಪಡೆಯಬೇಕಾದರೆ ತುಂಡುಡುಗೆ ತೊಡುವಂತಿಲ್ಲ, ಅಷ್ಟೇ ಅಲ್ಲ ಅಶ್ಲೀಲ ಅನ್ನಿಸುವಂತ ಯಾವ ಉಡುಪನ್ನು ಹಾಕಿಕೊಳ್ಳುವಂತಿಲ್ಲ. ಬಾರ್, ಪಬ್ ಹಾಗೂ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ . 2016ರ ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಪ್ರಕಾರ ಈ ನೂತನ ಯೋಜನೆ ಜಾರಿಗೆ ಮಾಡಲಾಗಿದೆ.
ಇದರ ಜತೆಗೆ ಇನ್ಮುಂದೆ ರಾಜ್ಯದಲ್ಲಿ ಮಧ್ಯರಾತ್ರಿ 2 ಗಂಟೆಯವರೆಗೆ ತೆರೆದಿರುತ್ತಿದ್ದ ಬಾರ್, ಪಬ್‌ಗಳ ಮೇಲೂ ನಿರ್ಬಂಧ ಹೇರಲಾಗಿದ್ದು, ರಾತ್ರಿ 12 ಗಂಟೆಗೆ ಅವುಗಳನ್ನು ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಒಟ್ಟಾರೆ ಈ ಯೋಜನೆ ಸ್ವಾಗತಾರ್ಹವೇ ಆದರೂ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಅವರು ಧರಿಸೋ ಉಡುಪು ಕಾರಣ ಅನ್ನೋ ವಿಚಾರದ ಪರ ವಿರೋಧದ ವಾದ ಈ ಹೊಸ ಯೋಜನೆಯ ಮೂಲಕ ಮತ್ತೆ ಜೀವ ಪಡೆದಿದೆ.
- “ಶ್ರೀ”
POPULAR STORIES :
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್
ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲು ಲೈಸೈನ್ಸ್ ಪಡೆಯಬೇಕಂತೆ..!!!
ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಗಾರ್ಮೆಂಟ್ಸ್ ಕಾರ್ಮಿಕರ ಪ್ರತಿಭಟನೆ,
ಕೈ ತಪ್ಪಿದ ಕೊಹಿನೂರ್ ವಜ್ರ… ಕದ್ದದ್ದಲ್ಲ ಉಡುಗೊರೆಯಾಗಿ ನೀಡಿದ್ದು..!
ಸ್ನಾನ ಮಾಡುತ್ತಿದ್ದವಳ ವಿಡಿಯೋ ಚಿತ್ರೀಕರಣ ಮಾಡಿದ..! ಕತ್ರೀನಾ ಕೈಫ್ ಸಿಟ್ಟಾಗಿದ್ದೇ ಒದ್ದುಬಿಟ್ಟಳು..!?