No menu items!
15.2 C
Munich
Wednesday, April 29, 2026

‘ಕಿವೀ’ಸ್ ಹಿಂಡಿದ ಕನ್ನಡಿಗ ರಾಹುಲ್, ಶ್ರೇಯಸ್ ಅಯ್ಯರ್! ಹೇಗಿತ್ತು ಗೊತ್ತೇನ್ರಿ ನಮ್ ಹುಡ್ಗನ ಬ್ಯಾಟಿಂಗ್ ವೈಭವ?

Must read

ಕನ್ನಡಿಗ ಕೆ.ಎಲ್ ರಾಹುಲ್ ಮತ್ತೊಮ್ಮೆ ನ್ಯೂಜಿಲೆಂಡ್ ಬೌಲರ್ ಗಳನ್ನು ದಂಡಿಸಿದ್ದಾರೆ. ರಾಹುಲ್ ಭರ್ಜರಿ ಬ್ಯಾಟಿಂಗ್ ನಿಂದ ಭಾರತ 2ನೇ ಟಿ20 ಪಂದ್ಯದಲ್ಲೂ ಭರ್ಜರಿ ಜಯ ದಾಖಲಿಸಿದೆ. 

ಆಂಕ್ಲೆಂಟ್ ನ ಈಡನ್ ಪಾರ್ಕ್ ನಲ್ಲಿ ನಡೆದ ಮ್ಯಾಚಲ್ಲಿ ಟಾಸ್ ಗೆದ್ದ ಕೇನ್ ವಿಲಿಯಂ ಸನ್ ನಾಯಕತ್ವದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿತು. ಭಾರತದ ದಾಳಿಗೆ ಆಡಲಾಗದೆ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 132 ರನ್ ಮಾತ್ರಗಳಿಸಿತು. ರವೀಂದ್ರ ಜಡೇಜ ( 2 ವಿಕೆಟ್) ಶಾರ್ದೂಲ್ ಠಾಕೂರ್ , ಬೂಮ್ರಾ, ಶಿವಂ ದುಬೆ ತಲಾ 1 ವಿಕೆಟ್ ಪಡೆದರು.
ಬಳಿಕ ಗುರಿ ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ( 8) ಹಾಗೂ ಅವರ ಬೆನ್ನಲ್ಲೇ ಕ್ಯಾಪ್ಟನ್ ವಿರಾಟ್ ಕೊಹ್ಲಿ (11) ವಿಕೆಟ್ ಕಳೆದುಕೊಂಡಿತು. ಆದರೆ ಕನ್ನಡಿಗ ರಾಹುಲ್ ತಂಡಕ್ಕೆ ಆಸರೆಯಾದರು. ರಾಹುಲ್ ಅಜೇಯ ಅರ್ಧಶತಕ ( 57) ರನ್ ಸಿಡಿಸಿದರು. ಅವರಿಗೆ ಸಾಥ್ ನೀಡಿದ ಕಳೆದ ಮ್ಯಾಚಿನ ಮತ್ತೊಬ್ಬ ಹೀರೋ ಶ್ರೇಯಸ್ ಅಯ್ಯರ್ (44) ಗೆಲುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ ಶಿವಂ ದುಬೆ ಅಜೇಯ 8 ರನ್ ಮಾಡಿದ್ರು. ಭಾರತ 2.3 ಓವರ್ ಗಳು ಬಾಕಿ ಇರುವಂತೆಯೇ 7 ವಿಕೆಟ್ ಗಳ ಜಯ ದಾಖಲಿಸಿತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article