ಪ್ರಕೃತಿಯ ನಿಯಮವೇ ಹಾಗೆ…ಅದನ್ನು ಯಾರೂ, ಯಾವ ಟೆಕ್ನಾಲಜಿಯು , ಯಾವತ್ತಿಗೂ ಬದಲಾಯಿಸಲು ಸಾಧ್ಯವಿಲ್ಲ.
ಭೂಮಿ ಮತ್ತು ಸೂರ್ಯನ ಸಂಬಂಧ ವಿಶೇಷವಾಗಿದ್ದು ಸೂರ್ಯ ಭೂಮಿಯ ಎಲ್ಲೆಡೆ ಬೆಳಕು ನೀಡುತ್ತಾನೆ. ಸೂರ್ಯನಿಲ್ಲದೆ ಪ್ರಪಂಚ ಬೆಳಕು ಕಾಣದೆ ಬರೀ ಕತ್ತಲಾಗಿಯೇ ಉಳಿಯುವುದು.
ಸೂರ್ಯನ ಉದಯವೇ ಹೊಸ ದಿನದ ಆರಂಭ. ಆದರೆ, ಸೂರ್ಯ ಇಲ್ಲೊಂದು ಊರಲ್ಲಿ ಸತತ 40 ದಿನ ಹುಟ್ಟಲ್ಲ…!
ರಷ್ಯಾದ ಮೆರಿಮೆನಸ್ಕ್ ಎಂಬ ನಗರ. ಈ ನಗರದಲ್ಲಿ ಚಳಿಗಾಲದಲ್ಲಿ 40 ದಿನ ಸೂರ್ಯ ಕಾಣಿಸಲ್ಲ. ಚಳಿಗಾಲ ಆರಂಭವಾಗುತ್ತಿದ್ದಂತೆ ಸೂರ್ಯ 40 ದಿನ ಮಾಯವಾಗಿರ್ತಾನೆ. ಈ ವಿಶೇಷವನ್ನು ‘ಪೋಲರ್ ನೈಟ್’ ಅಂತಾರೆ.