ಚೀನಾದಲ್ಲಿ ಆವರಿಸಿರುವ ಮಾರಣಾಂತಿಕ ಕೊರೋನಾ ವೈರಸ್ಗೆ ಎರಡು ಸಾವಿರಕ್ಕೂ ಹೆಚ್ಚು ಮಂದಿ ತುತ್ತಾಗಿದ್ದು, 100ಕ್ಕೂ ಹೆಚ್ಚು ಮಂದಿ ವೈರಸ್ಗೆ ಬಲಿಯಾಗಿದ್ದಾರೆ.ನಗರದಲ್ಲಿ ಇದುವರೆಗೆ 4193 ಪ್ರಕರಣಗಳು ಪತ್ತೆಯಾಗಿವೆ. ವೈರಸ್ಗೆ ತುತ್ತಾದವರಲ್ಲಿ ನಿನ್ನೆವರೆಗೆ 82 ಜನ ಮೃತಪಟ್ಟಿದ್ದರು. ಆದರೆ ಒಂದು ರಾತ್ರಿಗೆ 24 ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 106ಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ ಈ ವೈರಸ್ನ ಪ್ರಮಾಣ ದಿನ ಹೋದಂತೆ ಹೆಚ್ಚುತ್ತಿದ್ದು, 13 ನಗರಗಳಲ್ಲಿ ಹೆಚ್ಚಾಗಿ ಹರಡಿದೆ. ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ನಗರಗಳಲ್ಲಿ ಸಂಚಾರ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಹೀಗಾಗಿ 4.10 ಕೋಟಿ ಮಂದಿಯ ಜೀವನ ಅಸ್ತವ್ಯಸ್ತವಾಗಿದೆ.ಸಂಚಾರ ನಿರ್ಬಂಧ ಹೇರಿರುವ ಕಾರಣ ಜನರು ಮನೆಗಳಿಂದ ಹೊರಬರುತ್ತಿಲ್ಲ. ಔಷಧ ಅಂಗಡಿಗಳು ಹೊರತುಪಡಿಸಿ ಬೇರೆ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆದಿಲ್ಲ. ಸಾರ್ವಜನಿಕ ಸಮಾರಂಭಗಳು, ಕೌಟುಂಬಿಕ ಕಾರ್ಯಕ್ರಮಗಳನ್ನೂ ನಡೆಸದಂತೆ ಎಚ್ಚರಿಕೆ ನೀಡಲಾಗಿದೆ.ಚೀನಾದ ಮಹಾಗೋಡೆಯ ಒಂದು ಭಾಗದ ವೀಕ್ಷಣೆಗೆ ಅವಕಾಶ ನಿರಾಕರಿಸಲಾಗಿದ್ದು, ಪ್ರವಾಸಿಗರ ಆಗಮನಕ್ಕೆ ಕಡಿವಾಣ ಹಾಕಲಾಗಿದೆ.ಚೀನಾದಲ್ಲಿ ಮಾತ್ರವಲ್ಲದೆ ನೆರೆಹೊರೆಯು ರಾಷ್ಟ್ರಗಳಿಗೂ ಈ ಕೊರೋನಾ ವೈರಸ್ ಎಂಟ್ರಿ ಕೊಟ್ಟಿದೆ. ಥೈಲ್ಯಾಂಡ್ನಲ್ಲಿ 8, ಜಪಾನ್ 4, ದಕ್ಷಿಣ ಕೊರಿಯಾ 4,ಅಮೆರಿಕ 5, ವಿಯೆಟ್ನಾಂ 2, ಸಿಂಗಾಪೂರ್ 5, ಮಲೇಷ್ಯಾ 4, ನೇಪಾಳ್ 1, ಫ್ರಾನ್ಸ್ 3, ಆಸ್ಟ್ರೇಲಿಯಾ 5, ಕೆನಡಾ 1, ಜರ್ಮನಿ 1, ಹಾಗೂ ಕಾಂಬೋಡಿಯಾ 1ಪ್ರಕರಣಗಳು ದಾಖಲಾಗಿವೆ ಎಂದು ವರಿದಿಯಾಗಿದೆ.
ಚೀನಾದಲ್ಲಿ ಕೊರೋನಾ ಮರಣ ಮೃದಂಗ : ಸಾವಿನ ಸಂಖ್ಯೆ 106ಕ್ಕೇರಿಕೆ..!
Date: