ಯುವ ಆಟಗಾರ, ಕನ್ನಡಿಗ ಕೆ.ಎಲ್ ರಾಹುಲ್ ಟೀಮ್ ಇಂಡಿಯಾ ನಾಯಕನಾಗಿ ತಂಡವನ್ನು ಯಶಸ್ವಿಯಾಗಿ ಮುನ್ನೆಡೆಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ 5ನೇ ಟಿ20 ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ರೋಹಿತ್ ಶರ್ಮಾ ಗಾಯಕ್ಕೆ ತುತ್ತಾಗಿದ್ದರಿಂದ ರಾಹುಲ್ ನಾಯಕತ್ವದ ಜವಬ್ದಾರಿಯನ್ನು ಹೊರಬೇಕಾಯಿತು. ಅನಿರೀಕ್ಷಿತವಾಗಿ ಸಿಕ್ಕ ಹೊಸ ಹೊಣೆಯನ್ನು ರಾಹುಲ್ ನಿಭಾಯಿಸಿದರು. ಭಾರತ 7 ರನ್ ಗಳಿಂದ ಗೆಲುವು ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಾಯಕ ರೋಹಿತ್ ಶರ್ಮಾ (ಅಜೇಯ 60/ ಗಾಯಗೊಂಡು ನಿವೃತ್ತಿ) ಮತ್ತು ರಾಹುಲ್ (45) ಉತ್ತಮ ಆಟದ ನೆರವಿನಿಂದ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163ರನ್ ಗಳನ್ನು ಮಾಡಿತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ನಿಗದಿತ ಓವರ್ಗಳಲ್ಲಿ 9 ವಿಕೆಟ್ಗೆ 156ರನ್ ಮಾತ್ರ ಗಳಿಸಲು ಸಾಧ್ಯವಾಯಿತು. ವಿಕೆಟ್ ಕೀಪರ್ ಟಿಮ್ ಸೀಫರ್ಟ್ (50) ಹಾಗೂ ರಾಸ್ ಟೇಲರ್ (53) ಹೊರತುಪಡಿಸದರೆ ಯಾರೂ ಉತ್ತಮ ರೀತಿಯಲ್ಲಿ ಬ್ಯಾಟ್ ಬೀಸಲಿಲ್ಲ.
ಈಗಾಗಲೇ ಯಾವುದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲೆ ಎಂದು ಸಾಬೀತು ಪಡಿಸಿರುವ ಕೆ.ಎಲ್ ರಾಹುಲ್, ವಿಕೆಟ್ ಕೀಪರ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೀಗ ಟೀಮ್ ಇಂಡಿಯಾದ ಸಾರಥಿಯಾಗಿಯೂ ಯಶಸ್ವಿಯಾಗಿ ಜವಬ್ದಾರಿ ನಿಭಾಯಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕನಾದ ಕನ್ನಡಿಗ ಕೆ.ಎಲ್ ರಾಹುಲ್..!
Date: