6-5 =2 ಡೈರೆಕ್ಟರ್ ಅಶೋಕ್ ಕಮ್​ಬ್ಯಾಕ್ -` ದಿಯಾ’ ರಿಲೀಸ್​​ಗೆ ಡೇಟ್ ಫಿಕ್ಸ್

Date:

6-5 = 2 ಸಿನಿಮಾ ಖ್ಯಾತಿಯ ಡೈರೆಕ್ಟರ್ ಅಶೋಕ್ ಕೆ.ಎಸ್ ಆ್ಯಕ್ಷನ್ ಕಟ್ ಹೇಳಿರುವ ದಿಯಾ ಸಿನಿಮಾ ಈಗಾಗಲೇ ಸಾಕಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಫೆ.7ಕ್ಕೆ ರಿಲೀಸ್ ಆಗಲಿದೆ.
ಸ್ಯಾಂಡಲ್​​​ವುಡ್​​​​​​ನಲ್ಲಿ ಹೊಸಬರ ಅಲೆ ಜೋರಾಗಿದೆ. ಹೊಸ ಹೊಸ ಕಲಾವಿದರನ್ನು ಹಾಕಿಕೊಂಡು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬರ್ತಿದ್ದಾರೆ. ಹೊಸಬರಿಗೆ ಬಂಡವಾಳ ಹಾಕುವ ಧೈರ್ಯ ಮಾಡಿ, ಅವರನ್ನು ಪ್ರೋತ್ಸಾಹಿಸುವ, ಸ್ಯಾಂಡಲ್​ವುಡ್​ನಲ್ಲಿ ಹೊಸತನ ತರುವ ಪ್ರಯತ್ನವನ್ನು ಮಾಡುವ ನಿರ್ಮಾಪಕರ ಶ್ರದ್ಧೆ, ಆಸಕ್ತಿ ಹಾಗೂ ಇಚ್ಛಾಶಕ್ತಿಯನ್ನು ಮೆಚ್ಚಲೇ ಬೇಕು. ಅಂಥಾ ನಿರ್ಮಾಪಕರಲ್ಲಿ ಕೃಷ್ಣ ಚೈತನ್ಯ ಪ್ರಮುಖರು.
ಸ್ವರ್ಣಲತಾ ಪ್ರೊಡಕ್ಷನ್​​ನಡಿಯಲ್ಲಿ ಪ್ರೊಡ್ಯೂಸರ್ ಕೃಷ್ಣ ಚೈತನ್ಯ ಅವರು ಹೊಸ ತಂಡದೊಂದಿಗೆ ಸದ್ದಿಲ್ಲದೆ ಒಂದು ಸಿನಿಮಾ ಮಾಡಿದ್ದಾರೆ. ಆ ಸಿನಿಮಾದ ಹೆಸರೇ ‘ದಿಯಾ’. ಈ ದಿಯಾ ಸಿನಿಮಾದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದು, ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಾಗಿದೆ.
ದೀಕ್ಷಿತ್ ಶೆಟ್ಟಿ ಮತ್ತು ಪೃಥ್ವಿ ಅಂಬಾರ್ ನಾಯಕನಟರಾಗಿ ಅಭಿನಯಿಸಿರೋ ‘ದಿಯಾ’ಗೆ ಖುಷಿ ನಾಯಕಿ. 6-5 = 2 ಸಿನಿಮಾ ಮೂಲಕ ಮನೆಮಾತಾಗಿರೋ ಡೈರೆಕ್ಟರ್ ಅಶೋಕ್ ಕಮ್​​ಬ್ಯಾಕ್​ ಮೂವಿ ಇದಾಗಿದೆ. ವಿಶಾಲ್ ವಿಠಲ್, ಸೌರಭ್ ವಾಘ್ ಮರೆ ಛಾಯಗ್ರಹಣ, ಅಜನೀಶ್​ ಲೋಕನಾಥ್ ಹಿನ್ನೆಲೆ ಸಂಗೀತವಿದೆ. ಕಲೆ ವರದರಾಜ್ ಕಾಮತ್​ ಅವರದ್ದು. ಪ್ರೊಡಕ್ಷನ್ ಹೊಣೆಯನ್ನು ಯತೀಶ್ ನಿಭಾಯಿಸಿದ್ದಾರೆ. ಇಂಚರಾ ವಿನಯಾ ಅವರ ವಸ್ತ್ರವಿನ್ಯಾಸ, ಖುರ್ಷಿದಾ ಬಾನು ವರ್ಣಾಲಂಕಾರ ಮಾಡಿದ್ದಾರೆ. ಪ್ರವೀಣ್ ಚನ್ನಪ್ಪ, ರಾಕೇಶ್ ಶ್ರೀನಿವಾಸ್, ದರ್ಶನ್ ಅಪೂರ್ವ, ಚಂದನ್, ಮತ್ತು ಭರತ್ ಡೈರೆಕ್ಷನ್ ಟೀಮ್​ನಲ್ಲಿ `ದಿಯಾ’ಗಾಗಿ ದುಡಿದಿದ್ದಾರೆ.
ಯುವ, ಹೊಸಬರ ತಂಡವೊಂದು ದಿಯಾ ಸಿನಿಮಾ ಮಾಡಿದ್ದು, ಟ್ರೇಲರ್ ನೋಡಿದ್ರೆ ಇದೊಂದು ಪಕ್ಕಾ ಸಸ್ಪನ್ಸ್, ಥ್ರಿಲ್ಲರ್ ಮೂವಿ ಅನಿಸ್ತಿದ್ದು, ಮೊದಲ ಸಿನಿಮಾ 6-5 =2ನಲ್ಲಿ ಹಾರಾರ್ ಎಲಿಮೆಂಟ್‍ನಿಂದ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ್ದ ಡೈರೆಕ್ಟರ್ ಅಶೋಕ್ `ದಿಯಾ’ ದಲ್ಲಿ ರೊಮ್ಯಾಂಟಿಕ್ ಸಬ್ಜೆಕ್ಟ್ ಜೊತೆಗೆ, ಥ್ರಿಲ್ಲರ್​​ ಹೂರಣ ಬೆರೆಸಿ ಚಿತ್ರರಸಿಕರ ಮುಂದೆ ಬರ್ತಿದ್ದಾರೆ. ಎಲ್ಲಾ ಕುತೂಹಲ ತಣಿಯಲು ಫೆಬ್ರವರಿ 7ರವರೆಗೆ ಕಾಯಲೇಬೇಕು.

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....