ಅವನು‌ ಮತ್ತು ಮೂವರು ಹುಡುಗಿಯರು….! ಮುಂದೇನಾಗಬಹುದು? ನೀವೇ ಹೇಳಿ..!

Date:

ಅವತ್ಯಾಕೋ ಅಶ್ವಿನ್ ಸಿಕ್ಕಾಪಟ್ಟೆ ಕುಡಿದಿದ್ದ‌. ಆಗಾಗ ಯಾವಾಗಲಾದ್ರು ಫ್ರೆಂಡ್ಸ್ ಜೊತೆ ಹೊರ ಹೋದಾಗ ಕುಡಿಯುವ ಶಾಸ್ತ್ರ ಮಾಡ್ತಿದ್ದ ಅಶ್ವಿನ್ ಅವತ್ತು ಮಾತ್ರ ಫ್ರೆಂಡ್ಸ್ ಬೇಡ ಬೇಡ ಅಂದ್ರು ಕಂಠಪೂರ್ತಿ ಕುಡಿದು ಬಿಟ್ಟಿದ್ದ…!

ಹಾಗಂತ ಬಾರಿನಲ್ಲಿ ಮಲಗಲು‌‌ ಜಾಗ ಕೊಡ್ತಾರ? ರೂಂ ಗೆ ಹೋಗಲೇ ಬೇಕಿತ್ತು. ಫ್ರೆಂಡ್ಸ್ ಅವರ ರೂಂಗೆ ಬರಲು ಬಲವಂತ ಮಾಡಿದರೂ ಕೇಳಲಿಲ್ಲ.‌ತನ್ನ ಬೈಕೇನು ಮಾಡೋದು, ಅದರಲ್ಲೇ ಹೋಗುತ್ತೇನೆ , ಇನ್ನೂ‌‌ 11 ಗಂಟೆ, ಎಂದು ಹಠ ಮಾಡಿ ಹೊರಟ…!
ಸ್ವಲ್ಪ ದೂರ ಹೋಗುವಷ್ಟರಲ್ಲಿ ಗಾಡಿ ಬ್ಯಾಲೆನ್ಸ್ ಮಾಡಲಾಗದೆ ಬಿದ್ದ. ಇತ್ತ ಜ್ಞಾನವೇ ಇಲ್ಲದಂತೆ ‌ರೋಡೇ ನಂದು ಅನ್ನೋ ರೀತಿಯಲ್ಲಿ ನಡು ರಸ್ತೆಯಲಿ ಆರಾಮಾಗಿ ಮಲಗಿದ್ದ.


ಅಪ್ಪ ಅಮ್ಮ ಮಾಡಿದ್ದ ಪುಣ್ಯ ಅವನು ಬಿದ್ದ ಮೇಲೆ‌ ಯಾವುದೋ ವಾಹನ ವೇಗವಾಗಿ ಬಂದು ಮೈ ಮೇಲೆ‌ ಹರಿದು‌ ಹೋಗ್ಲಿಲ್ಲ.‌
ಸುಮಾರು 10-15 ನಿಮಿಷ ಆಗಿತ್ತೇನೋ ಒಂದು ಕ್ಯಾಬ್ ಬಂತು.‌ ಪುಣ್ಯಾತ್ಮ‌ ರಸ್ತೆಯಲ್ಲಿ ಲೋಕದ ಅರಿವಿಲ್ಲದಂತೆ‌ ಮಲಗಿರೋದು ಡ್ರೈವರ್ ಕಣ್ಣಿಗೆ ಬಿತ್ತು. ನಿಲ್ಲಿಸಿದ…ಗ್ಲಾಸ್ ಇಳಿಸಿಕೊಂಡು‌ ಬಗ್ಗಿ ನೋಡಿದ ಅಷ್ಟೇ…! ಇಳಿದು ಬದುಕಿದ್ದಾನೋ ಸತ್ತಿದ್ದಾನೋ ಅಂತನೂ‌ ನೋಡಿಲ್ಲ.‌ ಕ್ಯಾಬ್ ನಲ್ಲಿದ್ದ ಇಬ್ಬರು ಇಳಿದರು. ಅಶ್ವಿನ್ ಆರಾಮಾಗಿ ನಿದ್ರೆ ಮಾಡ್ತಿದ್ದ…! ಅವನಿಗೆ‌ ಏನೇನೂ ಆಗಿರ್ಲಿಲ್ಲ.‌..! ಅದನ್ನು ಗಮನಿಸಿ ಡ್ರೈವರ್ ಹೆಲ್ಪ್ ಕೇಳಿದ್ರು ಅವರಿಬ್ಬರು. ಆದರೆ, ಇವೆಲ್ಲ ಬೇಡ ಮೇಡಂ ಬದಿ ಎಳೆದಾಕಿ ಅಂದ…! ಇಬ್ಬರು‌ ಕ್ಯಾಬ್ ಡ್ರೈವರ್ ಗೆ ಉಗಿದ್ರು. ನಿನಗೇನು ಆಗಲ್ಲಪ್ಪ…..ಗಾಡಿ ಸೈಡ್ ಹಾಕು…ಎಕ್ಸ್ಟ್ರಾ ದುಡ್ಡು ಬೇಕಾದ್ರು ಕೊಡ್ತೀವಿ ಅಂದ್ರು.  ಇಬ್ಬರು ಸೇರಿ ಕ್ಯಾಬ್ ಗೆ ಅಶ್ವಿನ್ ನ ಎತ್ತಾಕಿದ್ರು.


‘ಅದೃಷ್ಟ ಮಾಡಿದ್ದಾನೆ ಈ ಆಸಾಮಿ. ಇವನಿಗೂ ಏನೂ ಆಗಿಲ್ಲ.‌ ಇವನ ಗಾಡಿಗೂ ಏನು ಆಗಿಲ್ಲ…! ನಾನು ಬೈಕ್ ತಗೋತೀನಿ, ನೀನು ಕ್ಯಾಬ್ ನಲ್ಲಿ ಕೂತ್ಕೊ ಅಂತ ಪ್ರತೀಕ್ಷಗೆ ಹೇಳಿದ್ಲು ಮಾಲಿನಿ‌‌‌‌…!


ಪ್ರತೀಕ್ಷ ಮತ್ತು ಮಾಲಿನಿ ಇಬ್ರೂ ಒಂದೇ ರೀತಿ. ‌ಡೇರಿಂಗ್ ನೇಚರ್.‌ ಮಾಲಿನಿ ಬೈಕ್ ಹಿಂದೆ‌ ಕ್ಯಾಬ್ ಹೊರಟಿತು.‌ ಪ್ರತೀಕ್ಷಳ ಮನೆ ಬಂತು.‌ ಮಾಲಿನಿ ಬೈಕ್ ಅನ್ನು‌ ಗೇಟ್ ಒಳಗೆ ಹಾಕಿದ್ಲು.‌
ಪ್ರತೀಕ್ಷಳ ಅಮ್ಮ ಬಂದು ಬಾಗಿಲು ತೆರೆದ್ರು.‌ ಮಾಲಿನಿ ,‌ಪ್ರತೀಕ್ಷ ಇಬ್ಬರು‌ ಸೇರಿ‌ ಅಶ್ವಿನ್ ನನ್ನು ಕಾರಿನಿಂದ ಇಳಿಸಿದ್ರು…!
ಮಾಲಿನಿ ಕ್ಯಾಬ್ ನವನಿಗೆ‌ ದುಡ್ಡು ಕೊಟ್ಟು ಕಳುಹಿಸಿದ್ಲು.


‘ಇದೇನ್ರೇ’ ಅಂತ ಪ್ರತೀಕ್ಷಳ‌ ಅಮ್ಮ ಕೇಳಿದ್ರು. ಅಷ್ಟೊತ್ತಿಗೆ ಏನಾಯ್ತು ಅಂತ ಟಿವಿ ನೋಡ್ತಿದ್ದ ಪ್ರತೀಕ್ಷಳ ಅಪ್ಪನೂ ಬಂದ್ರು….! ಪ್ರತೀಕ್ಷ ಅಪ್ಪ ಅಮ್ಮನಿಗೆ ನಡೆದಿದ್ದೆಲ್ಲಾ ವಿವರಿಸಿದ್ಲು..
ಒಳ್ಳೇ ಕೆಲಸ ಮಾಡಿದೆ. ಹುಚ್ಚು ಹುಡುಗ‌. ಹೆಚ್ಚು ಕಡಿಮೆ ಆಗಿದ್ರೆ? ಸಾಯೋನ್ ಸಾಯ್ತಿದ್ದ , ಪಾಪ ಅವನ ಅಪ್ಪ ಅಮ್ಮ ಬದುಕಿದ್ರೂ ಸಾಯಿಬೇಕಿತ್ತಲ್ಲ ಅಂದ್ರು ಪ್ರತೀಕ್ಷಳ ಅಪ್ಪ.‌ ಅಶ್ವಿನ್ ನ ಒಂದು ರೂಂ ನಲ್ಲಿ ಮಲಗಿಸಿದ್ರು.‌ ಅಷ್ಟಾದರೂ ಅವನು ಗಾಢನಿದ್ರೆಯಲ್ಲೇ‌ ಇದ್ದ…!

ಬೆಳಗ್ಗೆ 10 ಗಂಟೆ …ಅಶ್ವಿನ್ ಗೆ‌ ಎಚ್ಚರವಾಯಿತು. ಎಲ್ಲಿದ್ದೀನಿ ಅಂತ ಗೊತ್ತಾಗ್ಲಿಲ್ಲ. ರಾತ್ರಿ‌ ಕುಡಿದು , ಬೈಕ್ ಹತ್ತಿದ್ದು, ಬಿದ್ದಿದ್ದು ಮಾತ್ರ ನೆನಪಾಯ್ತು…! ಹೊರಗಡೆ ಹೋಗೋದು ಹೇಗೆ?‌ ಕರ್ಕೊಂಡು‌ ಬಂದವರಿಗೆ ಮುಖ ತೋರಿಸೋದು ಹೇಗೆ? ಅನ್ನೋ ತಲೆಬಿಸಿ‌ ಶುರುವಾಯ್ತು. ತಲೆ ಮೇಲೆ ಕೈ ಹೊತ್ಕೊಂಡು‌ ಕುಳಿತ…!


ಪ್ರತೀಕ್ಷ ಬಂದ್ಲು, ಹಾಯ್ ನಾನು ಪ್ರತೀಕ್ಷ…ನಿಮ್ಮ ಪರಿಚಯ ಈ ಐಡಿ ಕಾರ್ಡ್ ನಿಂದ ಆಯ್ತು. ಸರಿ, ಎದ್ದೇಳಿ ಫ್ರೆಶ್ ಆಗಿ ಅಮ್ಮ ಟಿಫನ್ ರೆಡಿ ಮಾಡಿದ್ದಾರೆ ಅಂದ್ಲು.
ಅಲ್ಲ, ಅಂತ ಏನೋ ಮಾತಾಡಕ್ಕೆ ಹೋದ ಅಶ್ವಿನ್. ಸರಿ ಸರಿ ಬೇಗ ಫ್ರೆಶ್ ಆಗಿ , ಆಮೇಲೆ ಮಾತಾಡಣ ಎನ್ನುತ್ತಾ ಕೈ ಹಿಡಿದು ಟವೆಲ್ ಇಟ್ಟು, ಬಾತ್ ರೂಂ ದಾರಿ ತೋರಿಸಿದ್ಲು ಪ್ರತೀಕ್ಷ.


ಯೋಚ್ನೇ ಮಾಡ್ತಾ ಬಾತ್ ರೂಂ ಗೆ ಹೋದ.‌ಸ್ನಾನ ಮುಗಿಸಿಕೊಂಡು ವಾಪಸ್ಸು ರೂಂ ಗೇ ಹೋದ…!
ರೀ ,ಬನ್ನಿ ಎಲ್ರೂ‌ ಟಿಫನ್ ಮಾಡೋಣ. ಡೈನಿಂಗ್ ಹಾಲ್ ಲಿ ಅಪ್ಪ ನಿಮಗೋಸ್ಕರ ಕಾಯ್ತ ಇದ್ದಾರೆ ಅಂದ್ಲು ಪ್ರತೀಕ್ಷ.
ಅವಳ ಹಿಂದೆ ಸಂಕೋಚದಿಂದಲೇ ಹೋದ ಅಶ್ವಿನ್. ಬಾರಪ್ಪ ಕೂತ್ಕೋ..ಅಂದ್ರು ಪ್ರತೀಕ್ಷಳ‌ ಅಪ್ಪ ನಾಗರಾಜ್. ಸಂಕೋಚ ಮಾಡಿಕೊಳ್ಬೇಡಪ್ಪ , ನೀನು ನಮ್ಮ ಮಗಳು ಪ್ರತೀಕ್ಷಳ ಫ್ರೆಂಡ್ ಅಂದ್ರೆ ನಮ್ಮ ಮಗನೇ ಕಣೋ ಅಂದ್ರು ಪ್ರತೀಕ್ಷಳ ಅಮ್ಮ ಮೀನಾಕ್ಷಿ.
ಪ್ರತೀಕ್ಷ ತನ್ನ ಅಪ್ಪ, ಅಮ್ಮ ಮತ್ತು ಸ್ನೇಹಿತೆ ಮಾಲಿನಿನ ಪರಿಚಯ ಮಾಡಿಕೊಟ್ಳು.


ತಿಂಡಿ ಆಯ್ತು. ಎಲ್ಲರೂ ಫ್ರೀ ಇದ್ರು‌. ಪ್ರತೀಕ್ಷಳ ಅಪ್ಪ ಅಶ್ವಿನ್ ನ ಹೆಗಲ ಮೇಲೆ ಕೈ ಹಾಕಿಕೊಂಡು ಹಾಲ್ ಗೆ ಕರೆದುಕೊಂಡು ಹೋದ್ರು.
ಅಶ್ವಿನ್ ಸಾರಿ ಇನ್ನೊಂದು ದಿನ ಬರ್ತೀನಿ. ಮನೆಗೆ ಹೋಗ್ತೀನಿ ಅಂದ. ಮನೆಗೆ ಆಮೇಲೆ ಹೋಗುವಂತೆ. ಗಡಿಬಿಡಿ ಏಕೆ, ಹೇಗಿದ್ರು ಭಾನುವಾರ ಅಲ್ವ ಅಂದ್ರು‌ ನಾಗರಾಜ್.

ಅಶ್ವಿನ್ ಎಲ್ಲರ ಕ್ಷಮೆ ಕೇಳಿದ.‌ನಾನು ಇಲ್ಲಿಗೆ ಹೇಗೆ ಬಂದೆ? ನೀವು ನನಗೆ ಏನ್ ಆಗ್ಬೇಕು?‌ಯಾವುದು ಗೊತ್ತಿಲ್ಲ.
ನಿನ್ನೆ ಕುಡಿದು ಬಿದ್ದಿದ್ದು ಮಾತ್ರ ನೆನಪಿರೋದು ಅಂತ ಒಪ್ಪಿಕೊಂಡ.


ನಾವು ಮೂವಿಗೆ ಹೋಗಿ ಬರ್ತಿದ್ವಿ. ಒಬ್ರು ಮನೆ ಉತ್ತರದ್ರುವಕ್ಕೆ ಇನ್ನೊಬ್ಬರ ಮನೆ ದಕ್ಷಿಣದ್ರುವಕ್ಕೆ ಅದ್ಕೆ ಅವಳನ್ನೂ (ಮಾಲಿನಿ) ಕರ್ಕೊಂಡು ಮನೆಗೆ ಬರ್ತಿದ್ದೆ. ಆಗ ನೀವು ಸಿಕ್ಕಿದ್ರಿ ಅಂತ ಪ್ರತೀಕ್ಷ‌ ಮುಂದೆ ನಡೆದಿದ್ದನ್ನೆಲ್ಲಾ ಹೇಳಿದ್ಲು.
ಅಶ್ವಿನ್ ಪ್ರತೀಕ್ಷಳ ಅಮ್ಮನ ಕಡೆ ನೋಡಿ, ಅಮ್ಮ ನಿಮಗೆ ಇದು ಗೊತ್ತಿದ್ರು. ನಾನು ನಿಮ್ಮ ಮಗಳ ಫ್ರೆಂಡ್ , ನನ್ನ ಮಗನಂತೆ ಅಂದ್ರಲ್ಲ ಎಂದು ಭಾವುಕನಾದ. ಅಳಬೇಡಪ್ಪ. ನೀನು ಅಪರಿಚಿತ ಅನ್ಕೊಂಡು ತಿಂಡಿ ತಿನ್ನ ಬಾರದು. ಪ್ರೀತಿಯಿಂದ ಉಣಬಡಿಸಿದ್ದನ್ನು ಸಂತೋಷದಿಂದ ತಿನ್ನ ಬೇಕು ಅಂತ ಹಾಗೆ ಹೇಳಿದೆ. ಈಗ ಏನಾಯ್ತು…. ಇನ್ಮುಂದೆ ನೀನು ನಮ್ಮ‌ ಪ್ರತೀಕ್ಷಗೆ ಫ್ರೆಂಡೇ,‌ನಮ್ ಮನೆ ಮಗನೇ ಎಂದು ಹೇಳಿದ್ರು ಮೀನಾಕ್ಷಿ.


ನಾಗರಾಜ್ ಅವರು ಅಶ್ವಿನ್ ಊರು, ಅಪ್ಪ , ಅಮ್ಮನ ಬಗ್ಗೆ ವಿಚಾರಿಸುತ್ತಾ ಪ್ರೀತಿಯಿಂದ ಬುದ್ಧಿ ಮಾತು ಹೇಳಿದ್ರು. ಆಗಾಗ ಬಂದೋಗ್ತ ಇರು , ಯಾವಾಗ , ಏನ್ ಬೇಕಾದ್ರು ಫೋನ್ ಮಾಡು ಅಂತ ಹೇಳಿ, ಅವರ ವಿಸಿಟಿಂಗ್ ಕಾರ್ಡ್ ಕೊಟ್ರು.
ಅಶ್ವಿನ್ ಹೊರಟ..! ಮಾಲಿನಿ ನಗುತ್ತಾ ಬೈಕ್ ಕೀ ಕೊಟ್ಟಳು. ಮಾಲಿನಿ ಮತ್ತು ಪ್ರತೀಕ್ಷಳ ಕಡೆ ನೋಡಿ ಥ್ಯಾಂಕ್ಯು ಹೇಳಿ, ನಾಗರಾಜ್ ಮತ್ತು ಮೀನಾಕ್ಷಿ ಕಡೆಗೆ ತಿರುಗಿ ನಮಸ್ಕರಿಸಿದ…


ಅಷ್ಟೊತ್ತಿಗೆ ಮಾಲಿನಿ, ಹಲೋ ನೀವ್ ಈಗ ಹೋಗೋದು ನಿಮ್ಮ ರೂಂಗೇ ಅಲ್ವಾ? ಅಂದ್ಲು. ಹೌದು ಅಂದ ಅಶ್ವಿನ್. ಅದೇ ರೋಡಲ್ಲಿ ಮೂರೇ ಮೂರು ಕಿಮೀ ಹಿಂದೆ ನಮ್ ಮನೆ ನನ್ನೂ ಬಿಟ್ಟೋಗಿ ಅಂದ್ಲು…! ಹೌದಪ್ಪ ಅವಳನ್ನು ಅಲ್ಲೇ ಬಿಟ್ಟು ಹೋಗು ಅಂದ್ರು ನಾಗರಾಜ್, ಮೀನಾಕ್ಷಿ.


ನಾನಾ? ಅಂತ ಅಶ್ವಿನ್ ಕೇಳಿದಾಗ, ಹೌದು ಸಾರ್ ನೀವೇ… ನಿನ್ನೆ ನಿಮ್ಮ ಬೈಕ್ ತಗೊಂಡು ಬಂದವಳು ಅವಳೇ..ಅವಳಿಗೇ ಡ್ರಾಪ್ ಕೊಡೋಕೆ ಆಗಲ್ವಾ? ಅಂತ ತಮಾಷೆ ಮಾಡಿದ್ಲು ಪ್ರತೀಕ್ಷ.  ಮಾಲಿನಿ ಮನೆ ಹತ್ತಿರ ಬಂದ ಮೇಲೆ ಬೈಕ್ ನಿಲ್ಲಿಸಲು ಹೇಳಿದ್ಲು‌. …!
ಅಶ್ವಿನ್ ಈ ಏರಿಯಾದಲ್ಲ? ಅಂದ…ಈ ಏರಿಯಾ ಅಲ್ಲ…ಇದೇ ಮನೆ ಅಂತ ತೋರಿಸಿದಳು ಮಾಲಿನಿ. ಅಶ್ವಿನ್ ಕಕ್ಕಾಬಿಕ್ಕಿ….ಸರಿ ಬಿಡಿ ಬಾಯ್ ಅಂದು ಹೊರಟ..


ಮನೆಗೆ ಬಂದು ಕಾಫಿ ಕುಡ್ಕೊಂಡು ಹೋಗಿ ಎಂದು‌ ಬೈಕ್ ಕೀ ಎತ್ಕೊಂಡು ಕೈ ಎಳೆದಳು…! ಇಳಿದು ಗಾಡಿ ಬದಿ ಹಾಕಿದ. ದೇವರ ಮೇಲೆ ಭಾರ ಹಾಕಿ‌ ಮಾಲಿನಿ ಮನೆಯೊಳಗೆ ನಡೆದ…..!
ಮಾಲಿನಿ ಕೈ ಹಿಡಿದುಕೊಂಡೇ ಕರೆದುಕೊಂಡು ಹೋದ್ಲು. ಅವಳ ಅಕ್ಕ‌ ಶಾಲಿನಿ ಟಿವಿ ನೋಡ್ತಾ ಕುಳಿತಿದ್ಲು…! ಅಶ್ವಿನ್ ನ ನೋಡಿ ಅವಳಿಗೆ ಶಾಕ್…! ಅಮಾಯಕನಂತೆ ತಲೆ‌ ಅಲ್ಲಾಡಿಸಿದ ಅಶ್ವಿನ್.


ಅಕ್ಕ, ಇವ್ರು ನನ್ ಫ್ರೆಂಡ್ ಅಶ್ವಿನ್ ಅಂತ ಎಂದು ಮಾಲಿನಿ‌ ಶಾಲಿನಿಗೆ‌ ಪರಿಚಯಿಸಿದಳು. ಹೊರ ಹೋಗಿದ್ದ ಮಾಲಿನಿ ಅಪ್ಪ ಪ್ರಕಾಶ್ ಅಮ್ಮ ಜ್ಯೋತಿ ಕೂಡ ಮನೆಗೆ ಬಂದ್ರು. ಮಾಲಿನಿ ಪರಿಚಯಿಸಿದಳು..‌.!
ಕಾಫಿ‌ ಕುಡಿದು ಅಶ್ವಿನ್ ರೂಂಗೆ ಹೋದ. ರೂಂ ಬಾಗಿಲು ತೆಗೆಯುವಷ್ಟರಲ್ಲಿ ಶಾಲಿನಿ ಫೋನ್…!  ರಿಸೀವ್ ಮಾಡಿ ಹಲೋ ಎನ್ನುವಷ್ಟರಲ್ಲಿ ಶಾಲಿನಿ,‌” ಈಗ ನನ್ನ ಬಿಟ್ಟು ನನ್ನ ತಂಗೀನಾ ಬುಟ್ಟಿಗೆ ಹಾಕಿಕೊಂಡ್ಯ? ನಾನು ಬಿಟ್ಟು ಹತ್ತು ದಿನ ಆಗಿಲ್ಲ ಅಷ್ಟರಲ್ಲೇ ನನ್ನ ತಂಗಿನಾ…? ಅಂತ ಒಂದೇ ಸಮನೆ ಬೈಯೋಕೆ ಶುರುಮಾಡಿದಳು. ಅಶ್ವಿನ್ ಗೆ ಮಾತಾಡೋಕು ಅವಕಾಶ ಕೊಡಲಿಲ್ಲ.


ಮರುದಿನ ಪರ್ಸ್ ನಲ್ಲಿ ಪ್ರತ್ಯಕ್ಷಳ ಅಪ್ಪನ ವಿಸಿಟಿಂಗ್ ಕಾರ್ಡ್ ಕಣ್ಣಿಗೆ ಬಿತ್ತು. ಫೋನ್ ಮಾಡಿ ಪ್ರತ್ಯಕ್ಷಳ ನಂಬರ್ ಕೇಳಿದ…
ಸರಿ ಈಗಲೇ ವಾಟ್ಸಪ್ ಮಾಡ್ತೀನಿ ಅಂದ ನಾಗರಾಜ್ ಅವರು, ‘ನಾನೇ ನಿಂಗೆ ಫೋನ್ ಮಾಡ್ಬೇಕು ಅನ್ಕೊಂಡಿದ್ದೆ. ಆದ್ರೆ, ನೀನು ನನ್ನ ನಂಬರ್ ತಗೊಂಡು ನಿನ್ನ ನಂಬರ್ ಕೊಡದೇ ಹೋದ್ಯಯಲಪ್ಪ.‌ ಹುಚ್ ಹುಡುಗ ಮತ್ತೆ ನಮ್ಮ ಮನೆ ಕಡೆ ಬರಲ್ಲ…ನನಗೆ ಫೋನ್ ಕೂಡ ಮಾಡಲ್ಲ ಅನ್ಕೊಂಡಿದ್ದೆ. ಮಾಡಿದ್ಯಲ್ಲ ಅಂದ್ರು.


ಏನ್ ವಿಷ್ಯ ಅಂಕಲ್ ಅಂತ ಕೇಳಿದ ಅಶ್ವಿನ್ , ನೀನು ಚುರುಕಿದ್ದಿ, ನಿನ್ನಂತ ಹುಡುಗನ ನಾನು ಹುಡುಕುತ್ತಿದ್ದೆ. ನಮ್ಮ ಆಫೀಸ್ ಲಿ ಕೆಲಸ ಮಾಡಪ್ಪ. ಒಳ್ಳೆಯ ಸಂವಳನೇ ಕೊಡ್ತೀನಿ ಅಂತ ಆಫರ್ ನೀಡಿದ್ರು ನಾಗರಾಜ್…!
ನೋಡ್ತೀನಿ ಅಂಕಲ್ ಅಂದ ಅಶ್ವಿನ್. ನೋಡೋದು ಬೇಡ ಏನ್ ಬೇಡ ಬಾ….ಅಂತ ನಾಗರಾಜ್ ಪ್ರೀತಿಯಿಂದ ಗದರಿ, ಇವತ್ತೇ ನೀನು ಮಾಡ್ತಿರೋ ಕೆಲಸಕ್ಕೆ ರಾಜೀನಾಮೆ ನೀಡಿ, ನೋಟಿಸ್ ಪಿರಿಯಡ್ ಮುಗಿಸಿ ಬಂದ್ ಬಿಡು. ಓಕೆ, ಪ್ರತೀಕ್ಷನ ನಂಬರ್ ಈಗಲೇ ಕಳುಹಿಸ್ತೀನಿ . ಈಗ ಕಾಲೇಜಲ್ಲಿ ಇರ್ತಾಳೆ ಸಂಜೆ ಮಾಡು ಅಂತ ಹೇಳಿ ಕರೆ ಕಟ್ ಮಾಡಿದ್ರು.


ಪ್ರತೀಕ್ಷನ ನಂಬರ್ ಸಿಗ್ತು. ಪ್ರತೀಕ್ಷಗೆ ಕರೆ ಮಾಡಿ, ಮಾಲಿನಿ ಮತ್ತು ಪ್ರತೀಕ್ಷನ ಮೀಟಾಗಿ‌ ಶಾಲಿನಿ ಮತ್ತು ತನ್ನ ಲವ್ ಸ್ಟೋರಿ ಹೇಳಿ, ಮಾಲಿನಿ ಮೂಲಕ ಸರಿಪಡಿಸಿಕೊಳ್ಳೋಣ ಅಂತ ಯೋಚಿಸಿದ್ದ.
ಆದರೆ, ಪ್ರತೀಕ್ಷ ಕುಟುಂಬ, ಮಾಲಿನಿ‌ ಮತ್ತವಳ ಕುಟುಂಬ ಎಲ್ರೂ ನನ್ನ ಬಗ್ಗೆ ತಪ್ಪು ತಿಳೀತಾರೆ ಬೇಡ ಅಂತ ಸುಮ್ಮನಾದ.
ನಾಗರಾಜ್ ಅವರು‌ ಪ್ರತೀಕ್ಷೆ ಅಶ್ವಿನ್ ಫೋನ್ ಮಾಡಿದ ವಿಷಯವನ್ನು ತಿಳಿಸಿದ ಮೇಲೆ ಪ್ರತೀಕ್ಷಳೇ ಕಾಲ್ ಮಾಡಿದ್ಲು‌ ಅಶ್ವಿನ್ ಗೆ. ಅವನು ಏನಿಲ್ಲ ಸುಮ್ನೆ ನಂಬರ್ ಕೇಳಿದ್ದೆ. ಜೀವ ಉಳಿಸಿದ್ದಕ್ಕೆ ಋಣ ತೀರಿಸೋಕೆ ಆಗಲ್ಲ.‌ ಅಟ್ಲೀಸ್ಟ್ ನಿಮಗೆ ನಿಮ್ಮ ಫ್ರೆಂಡ್ ಗೆ ಹೊರಗಡೆ ಟ್ರೀಟ್ ಕೊಡಿಸುವ ಅಂತ ಎಂದು‌ ಪ್ಲೇಟ್ ಚೇಂಜ್ ಮಾಡಿದ.


ನಾಗರಾಜ್ ಅವರ ಒತ್ತಾಯದ ಮೇರೆಗೆ ಅವರ ಕಂಪನಿ ಸೇರಿದ್ದಾನೆ. ಜೊತೆಗೆ ಐಪಿಎಸ್ ತಯಾರಿ ಕೂಡ ಜೋರಾಗಿ ನಡೆಸ್ತಿದ್ದಾನೆ ಅಶ್ವಿನ್. ಮಾಲಿನಿ ಮತ್ತು ಪ್ರತ್ಯಕ್ಷ ಫೈನಲ್ ಈಯರ್ ಬಿಇ ಸ್ಟೂಡೆಂಟ್ಸ್.


ಶಾಲಿನಿ ಮತ್ತು ಅಶ್ವಿನ್ ಒಂದೇ ಆಫೀಸಲ್ಲಿ ಕೆಲಸ ಮಾಡ್ತಿದ್ದವರು.‌ಇಬ್ಬರ ನಡುವೆ ಲವ್ ಆಗಿತ್ತು. ಚೆನ್ನಾಗೇ ಇದ್ರು. ಒಂದ್ ದಿನ ಮಾತಾಡ್ತಾ ಡ್ರಿಂಕ್ ವಿಷಯ ಬಂದಿತ್ತು. ಆಗ, ಅಶ್ವಿನ್ ಗೆ ನೀನು ಕುಡೀತಿಯಾ? ಅಂತ ಶಾಲಿನಿ ಕೇಳಿದ್ಲು. ಹೌದು, ಅಪರೂಪಕ್ಕೊಮ್ಮೆ, ಅದು ಕಾಮನ್ ಅಲ್ವಾ? ಎಂದಿದ್ದ ಅಶ್ವಿನ್. ಅದೊಂದು‌ ವಿಷಯಕ್ಕೆ ಕೋಪಗೊಂಡು ನೀನು ಬೇಡ ಅಂತ ದೂರಾಗಿದ್ಲು ಶಾಲಿನಿ. ಎರಡು ಮೂರು ದಿನ ಆದ್ರು ಸರಿ ಹೋಗಲಿಲ್ಲ.‌ ಸತ್ಯ ಒಪ್ಕೊಂಡಿದ್ದೇ ತಪ್ಪಾಯ್ತು ಎಂದು ಲವ್ ಬ್ರೇಕಪ್ ಆದ ದುಃಖದಲ್ಲಿ ಅಶ್ವಿನ್ ಕುಡಿದಿದ್ದ…! ಅದೃಷ್ಟವಶಾತ್ ಅವತ್ತು ರಾತ್ರಿಯೇ ಪ್ರತೀಕ್ಷ, ಮಾಲಿನಿಯಿಂದ ಬದುಕುಳಿದಿದ್ದ.


ಅದೆಲ್ಲಾ ಆಗಿ ಒಂದು‌ ತಿಂಗಳಿಗೆ ಅಶ್ವಿನ್ ಕಂಪನಿ ಬಿಟ್ಟಾಗ ಶಾಲಿನಿ ತನಗೆ ಹೇಳದೆ ಕೆಲಸ ಬಿಟ್ಟ ಅಂತ ಮತ್ತಷ್ಟು ಕೋಪಿಸಿಕೊಂಡಿದ್ಲು.
ಪ್ರತೀಕ್ಷಳ ಅಪ್ಪನ ಆಫೀಸಲ್ಲೇ ಕೆಲಸ ಆಗಿದ್ರಿಂದ ಪ್ರತೀಕ್ಷ ಮತ್ತು ಮಾಲಿನಿ ಅಶ್ವಿನ್ ಗೆ ತುಂಬಾ ಕ್ಲೋಸ್ ಆಗಿದ್ದಾರೆ. ಶಾಲಿನಿ ಮೇಲೆ ಇವತ್ತಿಗೂ ಜೀವ ಇಟ್ಕೊಂಡಿದ್ದಾನೆ. ತಿಳಿದೋ‌ ತಿಳಿಯದೇನೋ ಮಾಲಿನಿ ಮತ್ತು ಪ್ರತೀಕ್ಷ ಇಬ್ಬರಿಗೂ ಅಶ್ವಿನ್ ಮೇಲೆ ಲವ್ ಆಗಿದೆ…! ಶಾಲಿನಿ ಈಗಲೂ ಅಶ್ವಿನ್ ಅನ್ನು ಪ್ರೀತಿಸ್ತಾನೇ ಇದ್ದಾಳೆ… ಮುಂದೇನಾಗುತ್ತೋ…?

 

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....