ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದರೂ ಆ ಸಿನಿಮಾದ ಗುಟುರು ಇನ್ನೂ ನಿಂತಿಲ್ಲ. ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಿದ್ದ ಟಗರು ಸಿನಿಮಾ ಅಂದ ಕೂಡಲೇ ನೆನಪಾಗುವುದು ಬರೀ ಶಿವಣ್ಣ ಮಾತ್ರವಲ್ಲ.. ಶಿವಣ್ಣ ಜೊತೆ ಗುದ್ದಾಡಿದ ವಿಲನ್ ಧನಂಜಯ್ ಅಲಿಯಾಸ್ ಡಾಲಿ ಧನಂಜಯ್ ಕೂಡ! ಈ ಟಗರು ಸಿನಿಮಾ ಬಳಿಕ ನಟ ಧನಂಜಯ್ ಡಾಲಿ ಧನಂಜಯ್ ಎಂದೇ ಜನಜನಿತರಾಗಿದ್ದಾರೆ. ಅಲ್ಲದೆ ಆ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಕೂಡ..
ಟಗರು ಸಿನಿಮಾದಲ್ಲಿನ ಡಾಲಿ ಧನಂಜಯ್ ನಟನೆ, ಮ್ಯಾನರಿಸಂಗೆ ಚಿತ್ರರಸಿಕರು, ಚಿತ್ರ ವಿಮರ್ಶಕರೂ ಕಳೆದೋಗಿದ್ದಾರೆ. ಆ ಮಟ್ಟಿಗೆ ಡಾಲಿಯಾಗಿ ಸೂಪರ್ ಡೂಪರ್ ಪರ್ಫಾರ್ಮ್ ಮಾಡಿದ್ದರು ಧನಂಜಯ್. ಶಿವಣ್ಣ ಮತ್ತು ಧನಂಜಯ್ ಕಾಂಬಿನೇಷನ್ಗೆ ಫಿದಾ ಆಗಿರುವ ಅಭಿಮಾನಿಗಳು ಮತ್ತೆ ಶಿವಣ್ಣ, ಧನಂಜಯ್ ಯಾವ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಆ ದಿನವೂ ಈಗ ಹತ್ತಿರವಾಗಿದೆ..!
ತಮಿಳಲ್ಲಿ ಗೋಲಿ ಸೋಡ , 10 ಎನ್ರಾದುಕುಲ್ಲ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿರುವ ಡೈರೆಕ್ಟರ್ ಕಮ್ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಶಿವಣ್ಣ ಮತ್ತು ಡಾಲಿ ಧನಂಜಯ್ ಅವರೊಡನೆ ಸಿನಿಮಾ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಧ್ರುವಾ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ವಿಜಯ್ ಮಿಲ್ಟನ್ ಈ ಸಿನಿಮಾದ ಕೆಲಸದ ನಂತರ ಶಿವಣ್ಣ – ಧನಂಜಯ್ ಸಿನಿಮಾದ ಕೆಲಸ ಕೈಗೆತ್ತಿಕೊಳ್ಳಲಿದ್ದಾರಂತೆ.
ದ್ರೋಣ ಸಿನಿಮಾ ರಿಲೀಸ್ ಗೆ ಕಾಯುತ್ತಿರೋ ಶಿವಣ್ಣ ಭಜರಂಗಿ -2ನಲ್ಲಿ ಬ್ಯುಸಿ ಇದ್ದಾರೆ. ನಂತರ ರವಿ ಅರಸು ನಿರ್ದೇಶನದ ಆರ್ ಡಿ ಎಕ್ಸ್ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ವಿಜಯ್ ನಿರ್ದೇಶನದ ಸಿನಿಮಾ!
ಟಗರು ನಂತ್ರ ಮತ್ತೆ ಒಂದಾಗ್ತಿದ್ದಾರೆ ಶಿವಣ್ಣ – ಡಾಲಿ ಧನಂಜಯ್..! ಇದೇ ನೋಡಿ ಹೊಸ ಸಿನಿಮಾ..!
Date: