ಡಾ.ಅಂಬರೀಶ್ ಮಿತ್ತಲ್ ಅವರು, ಮನುಷ್ಯದ ದೇಹಕ್ಕೆ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅಗತ್ಯ ಎಷ್ಟಿದೆ ಅನ್ನೋದನ್ನು ಭಾರತಕ್ಕೆ ತಿಳಿಸಿಕೊಟ್ಟರು.. ಆರೋಗ್ಯ ಹಾಗೂ ಚಿಕಿತ್ಸಾ ವಿಜ್ಞಾನದಲ್ಲಿ ಭಾರತದಲ್ಲಿ ಇದುವರೆಗೆ ಯಾರೂ ಮಾಡಿರದಂತಹ ಅನೇಕ ಸಂಶೋಧನೆಗಳನ್ನು ಅವರು ಮಾಡಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಮೂಳೆ ಸಾಂದ್ರತೆ ಮಾಪನ ವ್ಯವಸ್ಥೆ ಜಾರಿ ಮಾಡಿದ ಶ್ರೇಯ ಅವರಿಗೇ ಸಲ್ಲಬೇಕು.
ಡಾ. ಮಿತ್ತಲ್ ಅವರು ಬೇರೆ ಬೇರೆ ರೋಗಗಳು ಮತ್ತದಕ್ಕೆ ಪರಿಹಾರವನ್ನು ಕೂಡ ಪತ್ತೆ ಮಾಡಿದ್ದಾರೆ. ಇಂತಹ ಮಾರಕ ಕಾಯಿಲೆಗಳಿಂದ ಪಾರಾಗುವ ಬಗೆಯನ್ನು ಜನರಿಗೆ ತಲುಪಿಸಿದ್ದಾರೆ. ಲಕ್ಷಾಂತರ ರೋಗಿಗಳಿಗೆ ಚಿಕಿತ್ಸೆ ಹಾಗೂ ಮರುಜೀವ ಕೊಟ್ಟವರು. ಅವರ ವ್ಯಕ್ತಿತ್ವವೇ ವಿಭಿನ್ನ, ಅತ್ಯಂತ ರೋಚಕ.
ಡಾ. ಅಂಬರೀಶ್ ಮಿತ್ತಲ್ ಅವರು ಚಿಕ್ಕಂದಿನಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅವರು ವೈದ್ಯರಾಗಬೇಕೆಂದು ನಿರ್ಧರಿಸಿದ್ರು. ಆ ಸಮಯದಲ್ಲಿ ಎಷ್ಟೋ ತಜ್ಞವೈದ್ಯರಿಗೆ ಗೊತ್ತಿಲ್ಲದ ಕ್ಷೇತ್ರವನ್ನೇ ಅವರು ಆಯ್ದುಕೊಂಡ್ರು. ಉಳಿದವರಂತೆ ಹಾರ್ಟ್ ಸ್ಪೆಷಲಿಸ್ಟ್ ಆಗಲು ಹೊರಟಿದ್ರೆ ವೈದ್ಯರ ಸೇನೆಯಲ್ಲಿ ಮಿತ್ತಲ್ ಕೂಡ ಒಬ್ಬ ಸಿಪಾಯಿ ಆಗಿಬಿಡುತ್ತಿದ್ರು. ಡಾ.ಮಿತ್ತಲ್ ಅವರ ಬದುಕಿನಿಂದ ಕಲಿಯಬೇಕಾದದ್ದು ಸಾಕಷ್ಟಿದೆ.
ಡಾ. ಅಂಬರೀಶ್ ಅವರು ಇದುವರೆಗೆ ಅನೇಕ ಬಗೆಯ ರೋಗಗಳ ಬಗ್ಗೆ ಹೊಸ ಹೊಸ ಸಂಶೋಧನೆ ಮಾಡಿದ್ದಾರೆ. ಉತ್ತರಪ್ರದೇಶದಾದ್ಯಂತ ಫ್ಲೋರೈಡ್ ಯುಕ್ತ ನೀರಿನಿಂದಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ಈ ವಿಷಯದ ಮೇಲೆ ಮಾತನಾಡಲು ಹಾರ್ವರ್ಡ್ ವಿಶ್ವವಿದ್ಯಾನಿಲಯ ಕೂಡ ಅವರನ್ನು ಆಹ್ವಾನಿಸಿತ್ತು. ಇದೇ ವಿಶ್ವವಿದ್ಯಾಲಯ 1993ರಲ್ಲೇ ಅವರಿಗೆ ಫೆಲೋಶಿಪ್ ಕೂಡ ಪ್ರದಾನ ಮಾಡಿದೆ.
ಭಾರತದಲ್ಲಿ ಇದುವರೆಗೆ ಯಾರೂ ಮಾಡಿರದಂತಹ ಅದ್ಭುತ ಕಾರ್ಯಗಳನ್ನು ಡಾ. ಅಂಬರೀಶ್ ಅವರು ಮಾಡಿದ್ದಾರೆ. ಅವರ ಸಂಶೋಧನೆಗಳಿಂದ ಭಾರತದ ಚಿಕಿತ್ಸಾ ವಿಜ್ಞಾನಕ್ಕೆ ಹೊಸ ಆಯಾಮ ಸಿಕ್ಕಿದೆ. ಜಪಾನ್ ನ ಜೆಐಸಿಎನಲ್ಲಿ ಮೂಳೆ ಸಾಂದ್ರತೆ ನಿರ್ವಹಣೆ ಶಿಕ್ಷಣ ಪಡೆದ ಮೊದಲ ಭಾರತೀಯ ಡಾ.ಅಂಬರೀಶ್ ಅವರು. ಆಸ್ಟಿಯೊಪೋರೊಸಿಸ್ ಎಂಬ ರೋಗವನ್ನು ಪತ್ತೆ ಹಚ್ಚಿದ ಕೀರ್ತಿಯೂ ಅವರದು.
ಅಷ್ಟೇ ಅಲ್ಲ; ಭಾರತದಲ್ಲಿ ವಿಟಮಿನ್ ಡಿ ಕೊರತೆಯಿಂದ ಲಕ್ಷಾಂತರ ಮಂದಿ ಬಗೆಬಗೆಯ ರೋಗಗಳಿಂದ ಬಳಲುತ್ತಿದ್ದಾರೆ ಅನ್ನೋದನ್ನು ಕಂಡುಹಿಡಿದ್ದು ಕೂಡ ಡಾ. ಮಿತ್ತಲ್ ಅವರೇ. ಮತ್ತೆ, ಹತ್ತಾರು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಕೆಲಸ ಮಾಡಿದ ಭಾರತದ ಮೊಟ್ಟ ಮೊದಲ ವೈದ್ಯ ಅಂದ್ರೆ ಡಾ. ಅಂಬರೀಶ್ ಮಿತ್ತಲ್ .
ಡಾ. ಅಂಬರೀಶ್ ಮಿತ್ತಲ್ , ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಸಂಸ್ಥೆಗಳ ನೇತೃತ್ವ ವಹಿಸಿದ್ದರು. ಈ ಮೂಲಕ ದೇಶಕ್ಕೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ಚಿಕಿತ್ಸೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅನೇಕ ರಾಷ್ಟ್ರೀಯ ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಗಿದೆ. 2004ರಲ್ಲಿ ಅಮೆರಿಕನ್ ಸೊಸೈಟಿ ಆಫ್ ಬೋನ್ & ಮಿನರಲ್ ರಿಸರ್ಚ್ ನ ‘ಬಾಯ್ ಫ್ರೇಮ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ಅಂಬರೀಶ್.
ನೋಡಿ, 2005ರಲ್ಲಿ ಡಾ. ಅಂಬರೀಶ್ ಮಿತ್ತಲ್ ಅವರಿಗೆ ಅಂತರಾಷ್ಟ್ರೀಯ ಅಸ್ಟಿಯೊಪೊರೋಸಿಸ್ ಫೌಂಡೇಶನ್ ನ ಹೆಲ್ತ್ ಪ್ರೊಫೆಷನಲ್ ಅವೇರ್ನೆಸ್ ಪ್ರಶಸ್ತಿ ನೀಡಲಾಗಿದೆ. 2015ರಲ್ಲಿ ಭಾರತ ಸರ್ಕಾರ ಅವರಿಗೆ ‘ಪದ್ಮಭೂಷಣ’ ನೀಡಿ ಗೌರವಿಸಿದೆ. ಸದ್ಯ ಅಂಬರೀಶ್ ಮಿತ್ತಲ್ ಗುರ್ಗಾಂವ್ ನ ಮೇದಾಂತ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಏನೇ ಹೇಳಿ, ಡಾ. ಅಂಬರೀಶ್ ಈಗ ಮಾಹಿತಿ ತಂತ್ರಜ್ಞಾನ ಹಾಗೂ ಹೊಸ ಟೆಕ್ನಾಲಜಿ ಬಳಸಿ ರೋಗಿಗಳಿಗೆ ನೆರವಾಗುತ್ತಿದ್ದಾರೆ. ಇಂಟರ್ನೆಟ್, ಮೊಬೈಲ್ ಮತ್ತು ಆ್ಯಪ್ ಮೂಲಕ ಸಲಹೆ ಸೂಚನೆ, ಮಾಹಿತಿಗಳನ್ನು ರೋಗಿಗಳಿಗೆ ತಲುಪಿಸುತ್ತಿದ್ದಾರೆ. ಅವರ ಅತ್ತುತ್ತಮ ವೈದ್ಯಕೀಯ ಸೇವೆಗೆ ನಮ್ಮೆಲ್ಲರ ಸಲಾಂ..