ದಕ್ಷಿಣ ಭಾರತದ ಖ್ಯಾತ ನಟಿ ಎಸ್ ಜಾನಕಮ್ಮನವರಿಗೆ ಈಗ ಎಪ್ಪತ್ತೇಳರ ಹುಟ್ಟುಹಬ್ಬದ ಸಂಭ್ರಮ. ಏಪ್ರಿಲ್ 23, 1938ರಲ್ಲಿ ಆಂದ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಜಾನಕಮ್ಮನವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಬಗ್ಗೆ ಅತೀವ ಆಸಕ್ತಿಯಿತ್ತು. 1957ರಲ್ಲಿ ತಮಿಳಿನ `ವಿಧಿಯಿನ್ ವಿಲಯಟ್ಟು’, ತೆಲುಗಿನ `ಎಂಎಲ್ಎ’ ಚಿತ್ರದಲ್ಲಿ ಪ್ಲೇಬ್ಯಾಕ್ ಸಿಂಗರ್ ಆಗಿ ಹಾಡತೊಡಗಿದರು. ಮುಂದೆ ಸಂಗೀತ ನಿರ್ದೇಶಕ ಎಂ ವಿಶ್ವನಾಥನ್ ಅವರ `ಅವರ್ ಗಳ್’, ಕೆ ವಿ ಮಹಾದೇವನ್ ಅವರ `ಮಜೈ ಮೇಘಂ’, ಶಂಕರ್ ಗಣೇಶ್ ಅವರ `ಆಸೈ’ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ಗಾಯಕಿಯಾಗಿ ಯಶಸ್ವಿಯಾದರು. ಅಲ್ಲಿಂದ ಶುರುವಾದ ಅವರ ಯಶೋಗಾಥೆಗೆ ಕಡಿವಾಣ ಹಾಕಲು ಸಾಧ್ಯವೇ ಇರಲಿಲ್ಲ. ಕನ್ನಡ ಚಿತ್ರಗಳ ಮಟ್ಟಿಗೆ ಎಸ್. ಜಾನಕಿ, ಎಸ್.ಪಿ ಬಾಲಸುಬ್ರಮಣ್ಯಂ ಕಾಂಬಿನೇಶನ್ ನ ಹಾಡಿಗಂತೂ ಅಭಿಮಾನಿಗಳು ಹುಚ್ಚೆದ್ದುಹೋಗಿದ್ದರು. ಎಸ್. ಜಾನಕಿ ಅವರ ವೃತ್ತಿಜೀವನದಲ್ಲಿ ಹಾಡಿದ ಅತ್ಯಂತ ಟಫ್ಫೆಸ್ಟ್ ಹಾಡು ಎಂದರೇ ಅದು ಹೇಮಾವತಿ ಚಿತ್ರದ `ಶಿವ ಶಿವ ಎನ್ನದ ನಾಲಿಗೆಯೇಕೆ’ ಹಾಡು. ಸಂಗೀತ ನಿರ್ದೇಶಕ ಎಲ್. ವೈದ್ಯನಾಥನ್, ತೋಡಿ-ಅಭೋಗಿ ರಾಗದಲ್ಲಿ ಸಂಯೋಜಿಸಿದ್ದ ಈ ಹಾಡನ್ನು ಎಸ್. ಜಾನಕಿ ಹೊರತುಪಡಿಸಿ ಮತ್ಯಾರಿಂದಲೂ ಹಾಡಲು ಸಾಧ್ಯವಿಲ್ಲ ಎಂದಿದ್ದು ಖ್ಯಾತ ಹಿನ್ನೆಲೆಗಾಯಕಿ ಕೆ. ಎಸ್ ಚಿತ್ರಾ. ತಮ್ಮ ವೃತ್ತಿಜೀವನದಲ್ಲಿ ನಲವತ್ತಕ್ಕೂ ಹೆಚ್ಚು ಬಾರಿ ಬೆಸ್ಟ್ ಫೀಮೆಲ್ ಪ್ಲೇಬ್ಯಾಕ್ ಸಿಂಗರ್ ಅವಾರ್ಡ್ ಪಡೆದುಕೊಂಡಿರುವ ಜಾನಕಮ್ಮನವರಿಗೆ ಫಿಲ್ಮ್ ಫೇರ್ ಅವಾರ್ಡ್ ಕೂಡ ಸಿಕ್ಕಿದೆ.
POPULAR STORIES :
ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!
`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್