ಇತಿಹಾಸ ಸುಪ್ರಸಿದ್ದ ಹಂಪಿಯ ಬಳಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ನಾಮಾಂಕಿತಗೊಂಡಿರುವ 500 ಎಕರೆ ಭೂಮಿಯಲ್ಲಿ ಕರ್ನಾಟಕದ ಅತೀ ದೊಡ್ಡ ಮೃಗಾಲಯವು ಪ್ರವಾಸಿಗರಿಗೆ ಜೂನ್ ಅಂತ್ಯದೊಳಗೆ ವೀಕ್ಷಿಸಲು ಅವಕಾಶ ನೀಡುತ್ತಿದೆ.
ಯುನೇಸ್ಕೊದ ಜಗತ್ ಪ್ರಸಿದ್ದ ಶಿಲ್ಪಕಲೆಗಳೊಲ್ಲೊಂದಾದ ಹಂಪಿಯ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಇದರ ಹೊರತಾಗಿಯೂ ಹಿಂದಿನ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿರುವ ಹಂಪಿ ನಾಡಿನಲ್ಲಿ ಅನಾವರಣಗೊಳ್ಳಲಿರುವ ಮೃಗಾಲಯದ ವಿವಿಧ ತಳಿಗಳ ಪ್ರಾಣಿ ವೀಕ್ಷಣೆಗೆ ಅವಕಾಶವಿರುವುದು
ಬಳ್ಳಾರಿ ಜಿಲ್ಲೆಯ, ಹೊಸಪೇಟೆ ತಾಲ್ಲೂಕಿನ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪಕ್ಕದಲ್ಲಿ ಮೃಗಾಲಯದ ಕಾಮಗಾರಿಕೆಯು ಇನ್ನೇನು ಮುಕ್ತಾಯದ ಹಂತದಲ್ಲಿದೆ.
ಮೃಗಾಲಯದಲ್ಲಿ ಹುಲಿ,ಕರಡಿ,ಸಿಂಹಗಳನ್ನೊಳಗೊಂಡ ಸಫಾರಿಯು ಮೃಗಾಲಯದ ಒಂದು ಅಕರ್ಷಣೆಯ ಕೇಂದ್ರ,
ಕರ್ನಾಟಕದ ಮೄಗಾಲಯದ ಸಂಸ್ಥೆಯು ಒಟ್ಟು 500 ಎಕರೆ ಭೂಮಿಯಲ್ಲಿ 34 ಕೋಟಿ ವೆಚ್ಚದಲ್ಲಿ ಮೃಗಾಲಯವನ್ನು ನಿರ್ಮಿಸುತ್ತಿದೆ, ಈಗಾಗಲೆ ಮುಗಿದಿರೊ ಕೆಲಸಕ್ಕೆ 20ಕೋಟಿ ವೆಚ್ಚ ಹಾಗೂ ಇನ್ನು ಮಕ್ತಾಯದ ಹಂತದ ಕೆಲಸಗಳಿಗೆ 14 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ.
ಮೃಗಾಲಯದಲ್ಲಿನ ರಸ್ತೆಗಳು ಹುಲಿ,ಕರಡಿ,ಸಿಂಹಗಳ ಸಫಾರಿಗೆ ಅನುಕೂಲವಾಗುವಂತೆ ವಿಭಾಗಿಸಲಾಗಿದೆ. ಮೃಗಾಲಯದಲ್ಲಿನ ಪ್ರಾಣಿಗಳಿಗೆ ಓಡಾಡಲು ಅನುಕೂಲವಾಗುವಂತೆ ೩ದೊಡ್ಡ ಕೊಳಗಳನ್ನು ನಿರ್ಮಿಸಲಾಗಿದೆ. ೫ ಬೇರೆ ಬೇರೆ ಭಾಗಗಳಲ್ಲಿ ಕುಡಿಯುವ ನೀರ ಸೌಲಭ್ಯವನ್ನು ಒದಗಿಸುವಂತೆ ಸಣ್ಣ ಸಣ್ಣ ತಡೆಕಟ್ಟುಗಳನ್ನು ನಿರ್ಮಿಸಲಾಗಿದೆ.
ಮಣ್ಣಿನ ಸವೆತವನ್ನು ತಡೆಗಟ್ಟಲು ಏರಿಯನ್ನು ಕಲ್ಲಿನ ಚಪ್ಪಡಿ ಗಳಿಂದ ನಿರ್ಮಿಸಲಾಗಿದೆ.
ಮೃಗಾಲಯದ ಸುತ್ತಲೂ 7ಕಿ.ಮಿ ವ್ಯಾಪ್ತಿ ಯವರೆಗೂ 12ಅಡಿ ಎತ್ತರದ ಮುಳ್ಳಿನ ತಂತಿಯ ಬೇಲಿಯನ್ನು ನಿರ್ಮಿಸಲಾಗಿದೆ. ಪ್ರತ್ಯೇಕ ಕೊಳಗಳನ್ನು ಪ್ರತೀ ಪ್ರಾಣಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸುವ ಕೆಲಸಗಳು ಭರದಿಂದ ಸಾಗುತ್ತಿದೆ. ಇನ್ನುಳಿದಂತೆ ವೀಕ್ಷಣ ಗೋಪುರ, ನೌಕರರ ವಸತಿಗೃಹ, ಟಿಕೆಟ್ ಕೌಂಟರ್ ಹಾಗೂ ಪ್ರವಾಸಿ ಉಪಹಾರ ಗೃಹ, ಮೊದಲಾದ ಕಾರ್ಯಗಳು ನಡೆಯುತ್ತಿವೆ.
- ಸ್ವರ್ಣಲತಾ ಭಟ್
POPULAR STORIES :
ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!
ಗಾನಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ ಆ ಹಾಡನ್ನು ಅವರಿಂದ ಮಾತ್ರ ಹಾಡಲು ಸಾಧ್ಯವಾಗಿತ್ತು..!!
`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್