ದೇಶದಲ್ಲಿ ಕೊರೋನಾ ಆತಂಕ ಹೆಚ್ಚಿದೆ. ಇನ್ನೂ ಕೂಡ ಅದಕ್ಕೆ ಔಷಧ ಕಂಡು ಹಿಡಿಯಲಾಗಿಲ್ಲ. ಸಾರ್ವಜನಿಕ ಓಡಾಟ ನಿರ್ಬಂಧವೇ ಮಾನದಂಡವಾಗಿದೆ. ನಾವು ಸ್ವಚ್ಛ ಹಾಗೂ ಜಾಗೃತಿವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಇದೇ ಉದ್ದೇಶದಿಂದ ಜನರು ತಮಗಾಗಿ ತಾವೇ ವಿಧಿಸಿಕೊಳ್ಳುವ ‘ಜನತಾ ಕರ್ಫ್ಯೂ’ಗೆ ಕರೆ ಕೊಟ್ಟಿದ್ದಾರೆ. ಪ್ರಧಾನಿ ಕರೆಗೆ ಈಗಾಗಲೇ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಒಂದು ದಿನದ ಮಟ್ಟಿಗೆ ಇಡೀ ದೇಶದ ಜನ ಮನೆ ಬಿಟ್ಟು ಹೊರಬರದೆ ದಿಗ್ಬಂದನ ವಿಧಿಸಿಕೊಂಡರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಹಕರಿಸುವುದು ಅಗತ್ಯ ಕರ್ತವ್ಯ ಹಾಗೂ ಜವಬ್ದಾರಿ ಕೂಡ.
ಇನ್ನು ಈ ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಯಾವೆಲ್ಲಾ ಸೇವೆಗಳಿರುತ್ತವೆ? ಏನೆಲ್ಲಾ ಇರಲ್ಲ ಅನ್ನೋದರತ್ತ ಗಮನಹರಿಸಬೇಕು. ಹಾಗೂ ಮುಂಜಾಗೃತೆ ದೃಷ್ಟಿಯಿಂದ ಏನ್ ಮಾಡಬೇಕು ಎಂಬುದನ್ನು ಗಮನಿಸುವುದಾದರೆ..
ಏನಿರಲ್ಲ?
ಇಂದು ಮಧ್ಯರಾತ್ರಿಯಿಂದ ನಾಳೆ (ಭಾನುವಾರ) ಮಧ್ಯರಾತ್ರಿವರೆಗೆ ರೈಲು ಸೇವೆ ರದ್ದು
ಬೆಂಗಳೂರು, ದಿಲ್ಲಿಯಲ್ಲಿ ಮೆಟ್ರೋ ರೈಲು ಸಂಚಾರ ಇರುವುದಿಲ್ಲ
ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಸಂಚಾರ ಬಹುತೇಕ ರದ್ದು
ಬೆಂಗಳೂರಿನಲ್ಲಿ ಎಲ್ಲ ಹೋಟೆಲ್, ಬೇಕರಿ, ಜ್ಯೂಸ್ ಅಂಗಡಿ ಬಾಗಿಲು ತೆರೆಯುವುದಿಲ್ಲ. ರಾಜ್ಯದ ಇತರ ಭಾಗಗಳಲ್ಲೂ ಇದು ಜಾರಿಗೆ ಬರುವ ಸಾಧ್ಯತೆ
ಎಪಿಎಂಪಿ, ಕ್ಯಾಟರಿಂಗ್ ಸೇವೆ ಬಂದ್
ರಾಜ್ಯಾದ್ಯಂತ ಎಲ್ಲ ಆಭರಣ ಮಳಿಗೆಗಳು
ಆಟೋ, ಲಾರಿ ಸಂಚಾರ ಸ್ತಬ್ಧ ಸಾಧ್ಯತೆ
ಓಲಾ, ಉಬರ್ ಟ್ಯಾಕ್ಸಿ ಸೇವೆ ಇರುವುದಿಲ್ಲ.
ರಾಜ್ಯದ ಎಲ್ಲಾ ಆಭರಣ ಮಳಿಗೆಗಳು ಸಂಪೂರ್ಣ ಬಂದ್
ಏನಿರುತ್ತೆ?
ಯಾವುದನ್ನೂ ಬಲವಂತವಾಗಿ ಮುಚ್ಚಿಸುವಂತಿಲ್ಲ
ಆಸ್ಪತ್ರೆ, ಮೆಡಿಕಲ್, ತುರ್ತು ಸೇವೆ ಸಿಗಲಿದೆ
ಹಾಲು, ಪತ್ರಿಕೆ, ಪೆಟ್ರೋಲ್ ಬಂಕ್, ಆ್ಯಂಬುಲೆನ್ಸ್ ಸೇವೆಗಳು ಲಭ್ಯ
ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಗಮಗಳು
ನಾಳೆಗೆ ಬೇಕಾಗುವ ಅತ್ಯಗತ್ಯ ವಸ್ತುಗಳನ್ನು ಇಂದೇ ಖರೀದಿಸಿ. ನಾಳೆ ಹೊರಗೆ ಹೋಗೋ ಕಾರ್ಯಕ್ರಮ ಬೇಡ. ಊರ್ ಬಿಟ್ ಊರ್ ಸುತ್ತೋ ಸಾಹಸಕ್ಕೂ ಕೈ ಹಾಕ್ಬೇಡಿ.