ಬರಲಿದೆ ಲವ್​​​ ಮಾಕ್ಟೇಲ್​ -2..!

Date:

ಲವ್​ ಮಾಕ್ಟೇಲ್ .. ಸದ್ಯ ಸ್ಯಾಂಡಲ್​​ವುಡ್​ನಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡ್ತಿರೋ ಸಿನಿಮಾ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್​​ ಅಭಿನಯದ ಸೂಪರ್ ಹಿಟ್ ಸಿನಿಮಾ ಲವ್​ ಮಾಕ್ಟೇಲ್​ ಸಿನಿಮಾ ಸಿನಿರಸಿಕರು, ಅಭಿಮಾನಿಗಳಿಂದ ಹಾಗೂ ಚಿತ್ರ ವಿಮರ್ಶಕರಿಂದಲೂ ಮೆಚ್ಚುಗೆಗೆ ಪಾತ್ರವಾಗಿದೆ.


ಒಂದು ಸಿನಿಮಾ ಅಂದ್ರೆ ಥಿಯೇಟರ್​ನಿಂದ ಹೊರ ಬಂದಮೇಲೂ ವೀಕ್ಷಕರನ್ನು ಕಾಡುವಂತಿರಬೇಕು… ಜನ ವಾವ್ಹ್ ಅಂತ ಹೊರ ಬರುವುದಲ್ಲದೆ ನೂರು ಸಲ ಯಾವಾಗ ಆ ಸಿನಿಮಾ ಬಗ್ಗೆ ಮೆಲುಲು ಹಾಕುತ್ತಾರಾ ಆ ಸಿನಿಮಾ ಗೆದ್ದಂತೆ…ಲವ್ ಮಾಕ್ಟೇಲ್ ಗೆದ್ದಿದೆ.. ಬಾಕ್ಸ್​ ಆಫೀಸಲ್ಲೂ ಒಂದಿಷ್ಟು ಗಳಿಕೆ ಕಂಡಿದೆ.
ಕೃಷ್ಣ ನಿರ್ದೇಶಿಸಿ, ನಿರ್ಮಿಸಿ, ನಟಿಸಿರುವ ಸಿನಿಮಾ ಲವ್ ಮಾಕ್ಟೇಲ್. ಆರಂಭದಲ್ಲಿ ಉತ್ತಮ ರೆಸ್ಪಾನ್ಸ್​ ಸಿಗದಿದ್ದರೂ.. ಬಳಿಕ ಅದ್ಭುತ ಯಶಸ್ಸು ಕಂಡಿತು. ಅದರಲ್ಲೂ ಮಿಲನ ಅವರ ನಿಧಿ ಪಾತ್ರ ಪ್ರತಿಯೊಬ್ಬರನ್ನು ಕಾಡಲಾರಂಭಿಸಿದೆ. ಸಿನಿಮಾದ ಲವ್ ಯು ಚಿನ್ನ ಹಾಡಂತು ಯುವ ಪ್ರೇಮಿಗಳ ಹಾಡಾಗಿ ಬಿಟ್ಟಿದೆ.


ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಹೊಸ ಸಿಹಿ ಸುದ್ದಿಯೊಂದು ಬಂದಿದೆ. ಆ ಸಿನಿಮಾದ ಯಶಸ್ಸು ಸ್ವೀಕ್ವೆಲ್ ಮಾಡಲು ತಂಡಕ್ಕೆ ಪ್ರೇರಣೆ ನೀಡಿದೆ. ಹೀಗಾಗಿ ಲವ್ ಮಾಕ್ಟೇಲ್ 2 ಮಾಡಲು ಕೃಷ್ಣ ಮನಸ್ಸು ಮಾಡಿದ್ದಾರೆ. ಈಗಾಗಲೇ ಕೃಷ್ಣ ಸ್ಕ್ರಿಪ್ಟ್ ವರ್ಕ್​ನಲ್ಲಿ ಬ್ಯುಸಿ ಇದ್ದಾರೆ ಎಂದು ತಿಳಿದುಬಂದಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ. ಈಗಾಗಲೇ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ.


ಒಟ್ಟಿನಲ್ಲಿ ಚಂದನವನದಲ್ಲಿ ಒಳ್ಳೊಳ್ಳೆಯ ಸಿನಿಮಾಗಳು ಬರುತ್ತಿವೆ. ಹೊಸಬರ ಸಿನಿಮಾಗಳು ಕ್ಲಿಕ್ ಆಗುತ್ತಿವೆ. ಒಂದೊಳ್ಳೆ ಕಥೆಯುಳ್ಳ ಅದ್ಭುತ ಸಿನಿಮಾಗಳನ್ನು ಕೊಟ್ಟಾಗ ಜನ ಖಂಡಿತಾ ಸ್ವೀಕರಿಸುತ್ತಾರೆ. ಸ್ಯಾಂಡಲ್​ವುಡ್​​ನಲ್ಲಿ 2020ರ ಆರಂಭದಲ್ಲೇ ಮೂರು ಸಿನಿಮಾಗಳಂಥೂ ನಿರೀಕ್ಷೆಗೂ ಮೀರಿ ಜನ ಮಾನಸವನ್ನು ಆಕ್ರಮಿಸಿಕೊಂಡಿವೆ.
6-5 =2 ಖ್ಯಾತಿಯ ಅಶೋಕ್ ನಿರ್ದೇಶನದ, ಕೃಷ್ಣ ಚೈತನ್ಯ ನಿರ್ಮಾಣದ, ಪೃಥ್ವಿ ಅಂಬಾರ್ ನಿರ್ಮಾಣದ ದಿಯಾ, ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್ ಮತ್ತು ಈಗಾಗಲೇ ಹೇಳಿರುವ ಲವ್ ಮಾಕ್ಟೇಲ್ ಸಿನಿಮಾಗಳು ಬಹಳ ಸದ್ದು ಮಾಡುತ್ತಿವೆ.

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...