ವಿಶ್ವದ ಮೊಟ್ಟ ಮೊದಲ ಬಿಯರ್ ಹೊಟೇಲ್ನ್ನು ಅಮೆರಿಕದ ಕೊಲಂಬಸ್ ನಗರದಲ್ಲಿ ಪ್ರಾರಂಭಿಸಲಾಗಿದೆ. ಇಲ್ಲಿನ ವಿಶೇಷತೆ ಏನೆಂದರೆ ನೀವು ಬುಕ್ ಮಾಡಿರುವ ಕೊಠಡಿಗಳ ನಲ್ಲಿಗಳಲ್ಲೂ ಕೂಡ ಬಿಯರ್ ಸಿಗಲಿದೆ. ಈ ಹೊಟೇಲ್ನಲ್ಲಿ 32 ರೂಮ್ಗಳಿದ್ದು, ಪ್ರತಿಯೊಂದು ಕೋಣೆಯಲ್ಲೂ ಬಿಯರ್ ಶವರ್ ಫ್ರಿಡ್ಜ್ನ್ನು ಕೂಡ ಇರಿಸಲಾಗಿದೆ. ಇಲ್ಲಿ ಕೂಡ ತಣ್ಣನೆಯ ಬಿಯರ್ನ್ನು ಪಡೆಯಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಬಿಯರ್ ಪ್ರಿಯರು ಹೆಚ್ಚಾಗಿದ್ದು, ಮದ್ಯಪಾನಿಗಳ ಕೆಲ ಕಲ್ಪನೆಯನ್ನು ಸಕಾರಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಬ್ರೂಡಾಗ್ ಸಹ ಸಂಸ್ಥಾಪಕ ಜೇಮ್ಸ್ ವ್ಯಾಟ್ ತಿಳಿಸಿದ್ದಾರೆ.
ಈ ಬಿಯರ್ ಹೊಟೇಲ್ನಲ್ಲಿ ಒಟ್ಟು 32 ಕೊಠಡಿಗಳಿದ್ದು, ಇದಲ್ಲದೆ 6 ಸಾವಿರ ಚದರ ಅಡಿಯ ಬಿಯರ್ ಹೌಸ್ನ್ನು ಕೂಡ ಈ ಹೊಟೇಲ್ನಲ್ಲಿ ನಿರ್ಮಿಸಲಾಗಿದೆ. ಇಲ್ಲಿ ನೀವು ರೂಮ್ ಬುಕ್ ಮಾಡದೇ ಕೂಡ ಬಿಯರ್ನ್ನು ಹೀರಬಹುದು. ಆದರೆ ಹೆಚ್ಚಿನ ಮದ್ಯದಂಗಡಿಯಲ್ಲಿ ಸಿಗುವಂತೆ ಟೇಬಲ್ ಮುಂಭಾಗದಲ್ಲಿ ಮದ್ಯಗಳು ಸಿಗುವುದಿಲ್ಲ. ಹಾಗಯೇ ಇಲ್ಲಿ ಅಂತಹ ಯಾವುದೇ ಪರಿಚಾರಕರು ಸಹ ಇರುವುದಿಲ್ಲ. ಬದಲಾಗಿ ನಿಮ್ಮ ಇಚ್ಛೆಗೆ ತಕ್ಕಂತೆ ಬಿಯರ್ಗಳನ್ನು ನಲ್ಲಿಗಳ ಮೂಲಕ ತುಂಬಿಸಿ ಕುಡಿಯಬಹುದು.
ಇದಲ್ಲದೆ ನೀವು ರೂಮ್ ಬುಕ್ ಮಾಡಿ ಕುಡಿಯಬೇಕೆಂದರೆ ಹೊಟೇಲ್ನ ಕೊಠಡಿಗಳಿಗೆ ನೀವು ಪ್ರವೇಶಿಸುವಂತೆ ಪ್ರತಿಯೊಂದು ಬಿಯರ್ ನಲ್ಲಿಗಳು ಸಕ್ರೀಯಗೊಳ್ಳುತ್ತದೆ. ಪ್ರತಿ ಕೋಣೆಯಲ್ಲೂ ಬಿಯರ್ನ್ನು ತುಂಬಿಸಿರುವ ಫ್ರಿಡ್ಜ್ಗಳನ್ನು ಇಡಲಾಗಿದ್ದು, ಅದರಲ್ಲಿ ಬ್ರೂಡಾಗ್ನ ಕ್ರಾಫ್ಟ್ ಬಿಯರ್, ಕಾಲೋಚಿತ ರುಚಿಯ ಬಿಯರ್ ಮತ್ತು ಅತಿಥಿಗಳ ಮೆಚ್ಚಿನ ಪಾನೀಯಗಳನ್ನು ಇರಿಸಲಾಗುತ್ತದೆ. ಅಲ್ಲದೆ ಸ್ನಾನಗೃಹದಲ್ಲೂ ಶವರ್ ಮೂಲಕ ಬಿಯರ್ ಒದಗಿಸುವ ಸೇವೆಯನ್ನು ನೀವು ಬ್ರೂಡಾಗ್ ಹೊಟೇಲ್ನಲ್ಲಿ ಪಡೆಯಬಹುದು ಎಂದು ಹೊಟೇಲ್ ಮಾಲೀಕರಾದ ಜೇಮ್ಸ್ ವ್ಯಾಟ್ ತಿಳಿಸಿದ್ದಾರೆ.