ಚಿತ್ರ ನಿರ್ಮಾಪಕ, ವಿತರಕ ಕಪಾಲಿ ಮೋಹನ್ ಆತ್ಮಹತ್ಯೆ

Date:

ಬೆಂಗಳೂರು : ಚಿತ್ರ ನಿರ್ಮಾಪಕ, ವಿತರಕರ, ಉದ್ಯಮಿ ಕಪಾಲಿ ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ನಗರದ ಪೀಣ್ಯ ಬಸವೇಶ್ವರ ಬಸ್​ ಟರ್ಮಿನಲ್​​ ಸಮೀಪವಿರುವ ತಮ್ಮ ಸುಪ್ರೀಂ ಹೋಟೆಲ್​ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ಹೋಟೆಲ್​ಗೆ ತೆರಳಿದ್ದ ಅವರು, ಅಲ್ಲಿಯೇ ಉಳಿದುಕೊಂಡಿದ್ದರು. ಇಂದು ಬೆಳಗ್ಗೆ ಹೋಟೆಲ್ ಸಿಬ್ಬಂದಿ ಅವರನ್ನು ಎಬ್ಬಿಸಲು ಬಾಗಿಲು ತಟ್ಟಿದಾಗ ಅವರು ಬಾಗಿಲು ತೆಗೆದಿಲ್ಲ. ಆ ವೇಳೆ ಸಹಜವಾಗಿ ಅನುಮಾನಗೊಂಡು ಕಿಟಕಿ ಒಡೆದು ನೋಡಿದಾಗ ಮೋಹನ್ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಡಾ. ರಾಜ್​ಕುಮಾರ್ ಕುಟುಂಬಕ್ಕೆ ಬಹಳ ಹತ್ತಿರದವರಾಗಿದ್ದ ಮೋಹನ್ ಸಿನಿಮಾ ನಿರ್ಮಾಣ, ವಿತರಣೆಯಲ್ಲಿ ತೊಡಗಿಕೊಂಡಿದ್ದರು. ಹೋಟೆಲ್ ಉದ್ಯಮವನ್ನೂ ನಡೆಸುತ್ತಿದ್ದರು. ಈ ಹಿಂದೆ ಅವರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇವರು ಮೂಲತಃ ಉಡುಪಿ ಕುಂದಾಪುರದ ವಕ್ವಾಡಿಯವರಾಗಿದ್ದು, ಕೆಲವು ವರ್ಷಗಳಿಂದ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Share post:

Subscribe

spot_imgspot_img

Popular

More like this
Related

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ

10ನೇ ತರಗತಿ ವಿದ್ಯಾರ್ಥಿನಿ ಆದ್ಲು ತಾಯಿ! ಪ್ರಿಯಕನಿಂದ ಕೃತ್ಯ – ಬೆಚ್ಚಿಬೀಳಿಸುವ...

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ ಆರೋಪಿಗಳು

ಮನೆ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ: 300 ಗ್ರಾಂ ಚಿನ್ನ ದೋಚಿದ...

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರು

ಗೋಲ್ಡನ್ ಅವರ್‌ನಲ್ಲಿ 2.16 ಕೋಟಿ ರೂ. ರಕ್ಷಿಸಿದ ಸೈಬರ್ ಕ್ರೈಮ್ ಪೊಲೀಸರುಬೆಂಗಳೂರು:ಸೈಬರ್...

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿ

ಶಬರಿ ಮಲೆಯಲ್ಲಿ ಚಿನ್ನ ಕಳವು ಪ್ರಕರಣ: ಹಲವು ಕಡೆ ಇಡಿ ದಾಳಿಬೆಂಗಳೂರು:ಶಬರಿ...