ಕಂಪ್ಯೂಟರ್ ಕೀಬೋರ್ಡ್ ನ ’F’ ಮತ್ತು ’J’ ಕೀ ಗಳು ಉಳಿದವುಗಳಿಗಿಂತ ಭಿನ್ನವಾಗಿವೆ…ನಿಮಗಿದು ಗೊತ್ತೆ?

Date:

ಇಂದಿನ ಆಧುನಿಕ ಜಗತ್ತಲ್ಲಿ ಕಂಪ್ಯೂಟರ್ ನ ನೋಡದವರಿಲ್ಲ.ಹುಟ್ಟಿದ ಮಗುವಿನಿಂದ ಶುರುವಾಗಿ ವಯಸ್ಸಾದ ಹಿರಿಯರ ತನಕ ಎಲ್ಲಾರು ಆ ಕಂಪ್ಯೂಟರ್ ಎಂಬ ಮಾಯಾ ಯಂತ್ರದೊಳಗೆ ನುಸುಳುವವರೆ. ಇಂದು ಕಂಪ್ಯೂಟರ್ ಇಲ್ಲದೆ ಯಾವ ಕೆಲಸವೂ ನಡೆಯಲ್ಲ ಕಣ್ರಿ… ಸರಿ ಬಿಡಿ … ಮುಂದಕ್ಖೋಗೋಣ…
ಯಾರಾದ್ರೂ ಕಂಪ್ಯೂಟರ್ ಕೀಲಿಮಣೆ ಕಡೆ ಗಮನ ಹರಿಸಿದ್ದೀರಾ? ಅಂದ್ರೆ ಅರ್ಥಾತ್ ಕೀಬೋರ್ಡ್ ಕಡೆಗೆ ಕಣ್ರೀ?? ಗಮನ ಹರಿಸಿದ್ದೇ ಆದರೆ ಅಲ್ಲಿರೊ `F’ ಮತ್ತು `J’ keyಗಳು ಉಳಿದವುಗಳಿಗಿಂತ ಭಿನ್ನವಾಗಿವೆ…ಯಾಕೆ ಗೊತ್ತೆ??

ಅಯ್ಯೊ…ಗಣಕ ಯಂತ್ರದ ಒಳಗೆ ಇಣುಕಲು ಇರೊ ಟೈಮ್ ಸಾಲ್ದೆ ಇರೊವಾಗ ಕೀಲಿ ಮಣೆ ಬಗ್ಗೆ ಯಾರು ಗಮನ ಕೊಡ್ತಾರೆ ಅಂತಾರೆ ಕೆಲವ್ರು..ಸ್ಪೀಡ್ ಆಗಿ ಟೈಪ್ ಮಾಡೋ ಚಾಕಚಕ್ಯತೆ ಹೊಂದಿರುವ ಅನೇಕರು ಕಣ್ಣುಮುಚ್ಕೊಂಡೇ ಟೈಪ್ ಮಾಡ್ತಾರೆ. ಹಾಗಾಗಿ ಜನರ ದೃಷ್ಟಿ ಕಂಪ್ಯೂಟರ್ ಪರದೆ ಮೆಲಲ್ಲದೆ ಕೀಬೋರ್ಡ್ ಮೇಲೆ ಇರಲಾರದು, ಇದ್ದರೂ ಹೆಚ್ಚಾಗಿ ಗಮನಹರಿಸಿರಲಾರರು. ಹಾಗಾಗಿ..ಇವುಗಳ ಬಗ್ಗೆ ಇರೊ ಅಚ್ಚರಿ ಸಂಗ್ತಿನ ಹೇಳ್ತೀನಿ ಕೇಳಿ.
ಹೌದು ಸರಿಯಾಗಿ ನೋಡಿದಾಗ ಕೀಬೋರ್ಡ್ ನಲ್ಲಿರೊ `F’ ಮತ್ತು `J’ ಮೇಲೆ ದಪ್ಪನೆಯ ಒಂದೊಂದು ಗೆರೆಗಳಿವೆ. ಯಾಕಿರಬಹುದು? ಇದೊಂದು ಮ್ಯಾನುಫೇಕ್ಚರಿಂಗ್ ಡಿಫೆಕ್ಟ್ ಅಲ್ಲ ಆರೋಗ್ಯದೃಷ್ಟಿಂದಂತು ಅಲ್ವೆ ಅಲ್ಲ. ಆ ಗೆರೆಗಳ ಉದ್ದೇಶವು ನಿಮ್ಮ ಬೆರಳುಗಳನ್ನು ಟೈಪ್ ಮಾಡುವಾಗ ವ್ಯವಸ್ಥಿತವಾದ ಜಾಗದಲ್ಲಿ ಇಡುವುದಾಗಿದೆ. ಈ ಎರಡು ಕೀ ಗಳಿರುವ ಸಾಲುಗಳನ್ನು ಹೋಂ ರೋಸ್ ಅಂತಾನೂ ಕರೆಯಲಾಗುತ್ತದೆ. ಟೈಪಿಂಗ್ ಕೆಲಸವನ್ನು ಸುಲಭಗೊಳಿಸುವ ಉದ್ದೇಶದಿಂದ ಇವುಗಳ ಮೇಲೆ ಈ ದಪ್ಪನೆಯ ಗೆರೆಯನ್ನು ಅಳವಡಿಸಲಾಗಿದೆ ಯಾಕೆಂದರೆ ನೀವು ವೇಗವಾಗಿ ಟೈಪ್ ಮಾಡುತ್ತಿರುವಾಗ ಅಕಸ್ಮಾತ್ತಾಗಿ ನಿಮ್ಮಕೈ ತಪ್ಪಿದಲ್ಲಿ ಈ ಗೆರೆಗಳು ನಿಮಗೆ ನಿಮ್ಮ ಬೆರಳುಗಳನ್ನು ಸರಿಯಾದ ಜಾಗದಲ್ಲಿಡುವಂತೆ ಸಹಾಯಮಾಡುತ್ತವೆ.
ವ್ಯವಸ್ಥಿತವಾದ ಟೈಪಿಂಗ್ ಗೆ ನಿಮ್ಮ ಎಡ ತೋರು ಬೆರಳನ್ನು `F’ ಮೇಲೂ ಬಲ ತೋರು ಬೆರಳನ್ನು`J’ ಮೇಲೂ, ಎಡಬದಿಯ ೩ ಬೆರಳುಗಳನ್ನು ಕ್ರಮದಂತೆ ‘D’,’S’,’A’ ಹಾಗೂ ಬಲಬದಿಯ ೩ ಬೆರಳುಗಳನ್ನು ಕ್ರಮದಂತೆ ‘K’, ‘L’ , ‘;:'(semi colon)ಹಾಗೂ ಇನ್ನುಳಿದೆರಡೂ ಹೆಬ್ಬೆರಳು ಸ್ಪೇಸ್ ಬಾರ್ ಮೇಲೂ ಇಡಲಾಗುತ್ತದೆ, ಹಾಗೂ ಇನ್ನುಳಿದೆರಡೂ ಹೆಬ್ಬೆರಳು ಸ್ಪೇಸ್ ಬಾರ್ ಮೇಲೂ ಇಡಲಾಗುತ್ತದೆ.
೨೦೦೨ರಲ್ಲಿ ಜೂನ್ ಇ ಬೊತಿಖ್ ನ ಹಕ್ಕು ದಾಖಲಾತಿ ಪ್ರಕಾರ ನಂತರ ತಯಾರಾದ ಎಲ್ಲ ಕೀಬೋರ್ಡ್ ಗಳಲ್ಲು ಈ ಬದಲಾವಣೆಯನ್ನು ಜಾರಿಗೆ ತರಲಾಗಿದೆ.
ಇನ್ನೇಕೆ ತಡ ಬನ್ನಿ ಟೈಪ್ ಮಾಡೋಣ….

  • ಸ್ವರ್ಣ ಭಟ್

POPULAR  STORIES :

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..!ಶಕೀಲಾ ಲೈಫ್ ಸ್ಟೋರಿ.

ಸಂಜಯ್ ದತ್ ನಾಪತ್ತೆ..!? ಜೈಲಿಂದ ಬಂದನಂತರ ಖಳನಾಯಕನ ಸುಳಿವಿಲ್ಲ..!?

ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!

ತನ್ನ ಸಿನಿಮಾವನ್ನ ನೋಡಿ ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ..!

ಮುಖದ ಅಂದ ಹೆಚ್ಚಿಸಬೇಕಾ…? ಇದನ್ನು ಓದಿ…

ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?

ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...