ಆರೋಗ್ಯದಲ್ಲಿ ಏರುಪೇರಾಗೋದು ಸಹಜ.. ಇನ್ನೂ ಅನಾರೋಗ್ಯದಿಂದ ಬಳಲುವ ರೋಗಿಗಳೆ ಹೇಳ್ತಾರೆ, ನನಗೆ ಬಂದ ಖಾಯಿಲೆ ಅಥವಾ ನಾನು ಪಟ್ಟ ನರಳಾಟ ಬೇರೆ ಯಾರು ಪಡೋದು ಬೇಡ ಅಂತ.. ಈಗ ನಾವ್ ಹೇಳೋಕೆ ಹೊರಟಿರೋ ವ್ಯಕ್ತಿಯು ಹೀಗೆ ಇದ್ದು ಈತನ ವ್ಯಥೆಯೂ ಯಾರಿಗೂ ಬರೋದು ಬೇಡ.. ಯಾಕಂದ್ರೆ ಈ ವ್ಯಕ್ತಿ ಅಂತಹದೊಂದು ಸಮಸ್ಯೆಗೆ ಒಳಗಾಗಿ ಇಲ್ಲೇ ನರಕವನ್ನ ನೋಡಿ ಬಿಟ್ಟಿದ್ದಾನೆ.. ಅಸಲಿಗೆ ಅಂತದ್ದೇನಾಯ್ತು ಅಂತ್ತೀರಾ..? ಮುಂದೆ ಓದಿ.. ಈ ವ್ಯಕ್ತಿಯ ಹೆಸರು ಝಂಗ್ ಅಂತಾ ಚೀನಾದವರು.. ತುಂಬು ಗರ್ಭಿಣಿಯ ಹಾಗೆ ಕಾಣ್ತಿದ್ದ ಈತನ ಹೊಟ್ಟೆಯಲ್ಲಿ ದೊಡ್ಡದೊಂದು ಗೆಡ್ಡೆ ಬೆಳೆದಿತ್ತು.. ಇದರ ಜೊತೆ ಉಡುಗರೆ ಎಂಬಂತೆ ನೋವು ಕೂಡ ಹೆಚ್ಚಾಗೆ ಭಾದಿಸಿತ್ತು.. ಹತ್ತು ವರ್ಷಕ್ಕೂ ಹೆಚ್ಚು ಕಾಲ 15ಕೆಜಿಯಷ್ಟು ದೊಡ್ಡದೊಂದು ಗೆಡ್ಡೆಯಿಂದ ಬಳಲಿದ್ದ ಈ ವ್ಯಕ್ತಿ ಈಗ ತನ್ನೊಳಗಿದ್ದ ಗೆಡ್ಡೆಯಿಂದ ಮುಕ್ತಿ ಪಡೆದಿದ್ದಾನೆ.. ಹಾಗಾದ್ರೆ ಹತ್ತು ವರ್ಷಗಳ ಕಾಲ ಈ ಸಮಸ್ಯೆ ಇರೋದು ಗೊತ್ತೇ ಆಗಿಲ್ವ ಅಂತಾ ಕೇಳ್ಬೇಡಿ.. ಯಾಕಂದ್ರೆ ತನ್ನೊಳಗೆ ಇಂತಹದೊಂದು ಸಮಸ್ಯೆ ಇದೆ ಅಂತ ಗೊತ್ತಿದ್ರು, ಅಕ್ಕಪಕ್ಕದವರು ನೋಡಿ ಗಂಡು ಗರ್ಭಿಣಿ ಅಂತಾ ನಕ್ಕರು ಆಪರೇಷನ್ಗೆ ಬೇಕಾದ ಹಣ ಮಾತ್ರ ಇರಲಿಲ್ಲ.. ಹೀಗಾಗೆ ಎಷ್ಟೇ ನೋವಿನಲ್ಲಿದ್ರು ಸಹಿಸಿಕೊಳ್ಳಬೇಕಾದ ಪರಿಸ್ಥಿತಿ.. ಆದ್ರೆ ಇದನ್ನ ಈತನ ಸಹೋದರಿ ಕೈಲಿ ನೋಡೋಕೆ ಸಾಧ್ಯವಾಗಿಲ್ಲ.. ತನ್ನ ಸಹೋದರನ ಕಷ್ಟವನ್ನ ನೋಡಲಾಗದ ಆಕೆ ಅಲ್ಲಿನ ಚೆಂಗ್ಡು ಡೈಲಿ ಬ್ಯೂಸಿನೆಸ್ ಹೆಸರಿನ ಸಂಸ್ಥೆಯಲ್ಲಿ ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ಲು.. ಈ ಸಮಯದಲ್ಲಿ ಈಕೆ ನೆರವಿಗೆ ಬಂದ ಈ ಸಂಸ್ಥೆಯ ಮೂಲಕ 80,000ಯುವಾನ್ (12,300 ಯುಎಸ್ ಡಾಲರ್) ಹಣ ಕಲೆಕ್ಟ್ ಆಯ್ತು. ಮತ್ತುಳಿದ ಹಣವನ್ನ ತನ್ನ ಸಂಬಂಧಿಕರಿಂದ ಪಡೆದು ಆಪರೇಷನ್ಗೆ ವ್ಯವಸ್ಥೆ ಮಾಡಿದ್ಲು.. ಆದ್ರೆ ಹೊಟ್ಟೆಯಲ್ಲಿದ್ದಿದ್ದು 15ಕೆಜಿ ಗೆಡ್ಡೆಯಾಗಿದ್ರಿಂದ ಡಾಕ್ಟರ್ಗಳಿಗೆ ಇದು ದೊಡ್ಡ ಸವಾಲ್ ಆಗಿ ಪರಿಣಮಿಸಿತ್ತು.. ಕಾರಣ ಈ ಸಮಯದಲ್ಲಿ ಹೊಟ್ಟೆಯಲ್ಲಿರುವ ಬೇರೆ ಬೇರೆ ಅಂಗಾಂಗಳಿಗೆ ಹಾನಿಯಾಗುವ ಸಾಧ್ಯತೆಗಳೆ ಹೆಚ್ಚಾಗಿತ್ತು.. ಆದ್ರೂ ಆಪರೇಷನ್ ಮಾಡೋಕೆ ಒಪ್ಪಿದ ಡಾಕ್ಟರ್ ಗಳು 6 ಗಂಟೆಗಳ ಕಾಲ ಸತತ ಶಸ್ತ್ರಚಿಕಿತ್ಸೆ ನಡೆಸಿ 15 ಕೆಜಿ ಗೆಡ್ಡೆಯನ್ನ ಹೊರ ತಗೆದಿದ್ದಾರೆ… ಅಷ್ಟೆ ಅಲ್ಲ ಹತ್ತಾರು ವರ್ಷಗಳಿಂದ ತುಂಬು ಗರ್ಭಿಣಿಯಂತೆ ತೀರ್ವ ನೋವಿನಿಂದ ಬಳಲಿದ್ದ ಈ ವ್ಯಕ್ತಿಗೆ ತಾನು ಈ ಯಮಯಾತನೆಯಿಂದ ಮುಕ್ತಿ ನೀಡಿದ್ದಾರೆ.. ಈ ಸಂದರ್ಭದಲ್ಲಿ ನಮ್ಮ ಕಿವಿಗೆ ಆಗಾಗ ಬೀಳೊ ಮಾತೊಂದು ನೆನೆಪಿಗೆ ಬರುತ್ತೆ.. ಅದೇ ವೈದ್ಯೋ ನಾರಾಯಣೋ ಹರಿ..
- ಅಶೋಕ
POPULAR STORIES :
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಮೀನಾಕುಮಾರಿ ಅದೇಕೆ ಕುಡಿದು ಸತ್ತಳು…!? `ದಿಲ್ ಸಾ ಜಬ್ ಸಾಥಿ ಪಾಯ, ಬೇಚೈನೀ ಭೀ ವೋ ಸಾಥ್ ಆಯಾ’
ಸಂಜಯ್ ದತ್ ನಾಪತ್ತೆ..!? ಜೈಲಿಂದ ಬಂದನಂತರ ಖಳನಾಯಕನ ಸುಳಿವಿಲ್ಲ..!?
ನೀವೂ ಫಿಟ್ ಆಗಿ, ಆರೋಗ್ಯವಾಗಿರೋಕೆ ಈಗ ಸಂಜನಾ ಹೇಳಿಕೊಡ್ತಾರಂತೆ ಯೋಗ.!