ಕೊರೋನಾ ಆಸ್ಟ್ರೇಲಿಯಾ ಕಂಡು ಹಿಡೀತಾ ಲಸಿಕೆ? ಕೋವಿಡ್ -19 ಲಸಿಕೆ ಪರೀಕ್ಷೆಗೆ ರೆಡಿ..!

Date:

ಕೊರೋನಾ ಎಂಬ ಹೆಮ್ಮಾರಿ ಇಡೀ ವಿಶ್ವವನ್ನು ನಡುಗಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಕೊರೋನಾದಿಂದ ತತ್ತರಿಸಿವೆ. ಆತಂಕ ಇನ್ನೂ ಕಮ್ಮಿ ಆಗಿಲ್ಲ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಲಾಕ್ ಡೌನ್ ಗೆ ಒಳಪಟ್ಟಿವೆ. ಈ ನಡುವೆ ಆಸ್ಟ್ರೇಲಿಯಾದಿಂದ ಸಿಹಿ ಸುದ್ದಿಯೊಂದು ಬಂದಿದೆ..

ಆಸ್ಟ್ರೇಲಿಯಾದ ರಾಷ್ಟ್ರೀಯ ವಿಜ್ಞಾನ ಏಜೆನ್ಸಿ ‘ಕಾಮನ್ ವೆಲ್ತ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ ಆರ್ಗನೈಸೇಶನ್ ( ಸಿ ಎಸ್ ಐ ಆರ್ ಒ) ಸಂಭಾವ್ಯ ಕೋವಿಡ್ -19 ಲಸಿಕೆಯನ್ನು ಪರೀಕ್ಷೆ ಮಾಡಲು ಮುಂದಾಗಿದ್ದು , ಜೀಲಾಂಗ್ ನಲ್ಲಿರುವ ಆಸ್ಟ್ರೇಲಿಯನ್ ಎನಿಮಲ್ ಹೆಲ್ತ್ ಲ್ಯಾಬೋರೇಟರಿ (ಎಎಎಚ್ ಎಲ್) ನಲ್ಲಿ ಕೊರೋನಾ ಸೋಂಕು ಲಸಿಕೆ ಟೆಸ್ಟ್ ನಡೆಸಲಾಗುತ್ತಿದೆ ಎಂದು ತಿಳದುಬಂದಿದೆ. ಇದರ ವರದಿ ಬರಲು ಮೂರು ತಿಂಗಳು ಬೇಕಾಗಬಹುದೆಂದು ನಿರೀಕ್ಷಿಸಲಾಗಿದೆ.‌

ಜಾಗತಿಕ ಮಟ್ಟದ ಸಂಶೋಧಕರ ಗುಂಪಾದ ಕೊಯಿಲಿಷನ್ ಫಾರ್ ಎಪಿಡೆಮಿಕ್ ಪ್ರಿಪೇರ್ಡ್ ನೆಸ್ ಇನ್ನೋವೇಷನ್ಸ್ (ಸಿ ಇ ಪಿ ಐ)ಯೊಡನೆ ಸಿ ಎಸ್ ಐ ಆರ್ ಒ ಸೇರಿಕೊಂಡಿತ್ತು. ಜನವರಿಯಿಂದ ಕೋವಿಡ್ -19 ಸೋಂಕಿಗೆ ಕಾರಣವಾದ ಸಾರ್ಸ್ ಕೋವ್ – 2 ಗೆ ಲಸಿಕೆ ಕಂಡು ಹಿಡಿಯುವ ಕೆಲಸಲ್ಲಿ ಅದು ನಿರತವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು ಹೆಚ್ ಒ) ಸಲಹೆಯೊಂದಿಗೆ ಸಿಇಪಿಐ ಲಸಿಕೆಯನ್ನು ಸಂಶೋಧೆ ಮಾಡಲು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಅಮೆರಿಕದ ಇನೋವಿಯೋ ಫಾರ್ಮಾಸ್ಯೂಟಿಕಲ್‌ ಇನ್ಸ್‌ಟಿಟ್ಯೂಷನ್‌ನೊಡನೆ ಸೇರಿ ಸಿಎಸ್‌ಐಆರ್‌ಒನಲ್ಲಿ ಮೊದಲ ಪ್ರೀ-ಕ್ಲೀನಿಕಲ್‌ ಟ್ರೈಯಲ್ಸ್‌ ಕೇಂದ್ರ ಆರಂಭಿಸಲಾಯಿತು.
ಚುಚ್ಚುಮದ್ದು ಅಥವಾ ನಾಸಲ್‌ ಸ್ಪ್ರೇ ಅಂದರೆ ಮೂಗಿನ ನಾಳದ ಮೂಲಕ ದೇಹದ ಒಳಗೆ ಹೋಗಿ ಸೋಂಕಿನ ವಿರುದ್ಧ ವೇಗವಾಗಿ ಮತ್ತು ಕರಾರುವಕ್ಕಾಗಿ ಹೋರಾಡುವಂಥಾ ಲಸಿಕೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಸದ್ಯ ಕಂಡು ಹಿಡಿದಿರುವ ಲಸಿಕೆಯನ್ನು ಸೋಂಕು ಪೀಡಿತ ಪ್ರಾಣಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ.
ಸಾರ್ಸ್‌ ಕೋವ್‌-2 ವೈರಸ್‌ಗೆ ಫೆರೆಟ್‌ಗಳು(ಮುಂಗುಸಿಯಂತಹ ಒಂದು ಪ್ರಾಣಿ) ಮೇಲೆ ಹೇಗೆ ಸ್ಪಂದಿಸುತ್ತವೆ ಎಂದು ಬಯಾಲಾಜಿಕಲ್‌ ಮಾಡೆಲ್‌ ಒಂದನ್ನು ಫೆಬ್ರವರಿಯಲ್ಲಿ ಸಿದ್ಧ ಪಡಿಸಿದ್ದೇವೆ. ವಿಶ್ವದಲ್ಲೇ ಮೊದಲು ಇಂತಹ ಮಾಡೆಲ್‌ ಮಾಡಲಾಗಿದೆ ಎಂದು ಸಿಎಸ್‌ಐಆರ್‌ಒ ತಿಳಿಸಿದೆ.
ಸದ್ಯ ಈ ಲಸಿಕೆ ಎಷ್ಟು ಪರಿಣಾಮಕಾರಿಯಾಗಲಿದೆ ಎಂಬುದು ಎಲ್ಲರ ಕುತೂಹಲ…ಕಾದು ನೋಡಣ..

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...