ಕೊರೋನಾ ಎಂಬ ಮಹಾಮಾರಿಗೆ ಇಡೀ ವಿಶ್ವ ತತ್ತರಿಸಿದೆ. ಭಾರತ ಕೂಡ ಕೊರೋನಾ ಅಟ್ಟಹಾಸದಿಂದ ಕಂಗೆಟ್ಟಿದ್ದು ಲಾಕ್ ಡೌನ್ ಮೊರೆ ಹೋಗಿದ್ದೇವೆ. ಸದ್ಯ ಏಪ್ರಿಲ್ 14 ರವರೆಗೆ ಭಾರತ ಲಾಕ್ ಡೌನ್. ಆದರೆ, ಕೆಲವರು ಲಾಕ್ ಡೌನ್ ಉದ್ದೇಶವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಮನೆಯಲ್ಲೇ ಹೇಗಿರುವುದು ಎಂಬುದು ಬಹುತೇಕರ ಚಿಂತೆಯಾಗಿದೆ.ಆದರೆ,ಕೊರೋನಾ ವಿರುದ್ಧದ ಹೋರಾಟಕ್ಕೆ ಅದು ಅನಿವಾರ್ಯ.
ಲಾಕ್ ಡೌನ್ ಆಗಿ ಇಂದಿಗೆ 9 ದಿನವಾಗಿದ್ದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಏಪ್ರಿಲ್ 5 ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಪ್ರತಿಯೊಬ್ಬರು ಮನೆಯ ಲೈಟ್ ಗಳನ್ನು ಆಫ್ ಮಾಡಿ ಮನೆ ಎದುರು ಅಥವಾ ಬಾಲ್ಕನಿಯಲ್ಲಿ ದೀಪ , ಮೇಣದ ಬತ್ತಿ ಅಥವಾ ಟಾರ್ಚ್ ಬೆಳಗುವ ಮೂಲಕ ಬೆಳಕಿನ ಮಹತ್ವ ಸಾರೋಣ. ಅಂಧಕಾರವನ್ನು ಹೋಗಲಾಡಿಸೋಣ ಎಂಬ ಸಂದೇಶವನ್ನು ಮೋದಿ ನೀಡಿದ್ದಾರೆ.
ಈ ರೀತಿ ದೀಪ ಬೆಳಗುವ ಮೂಲಕ 130 ಕೋಟಿ ಜನ ಒಗ್ಗಟ್ಟಾಗಿದ್ದೇವೆ ಎಂಬುದನ್ನು ತಿಳಿಸೋಣ. ಆದರೆ ಹೊರಗಡೆ ಹೋಗಿ ಆಚರಣೆ ಬೇಡ. ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ಮನೆಯಲ್ಲೇ ದೀಪ ಬೆಳಗಿ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
ಒಟ್ಟಿನಲ್ಲಿ ಮೋದಿ ಬೆಳಕಿನಶಕ್ತಿ ಮತ್ತು ಏಕತೆಯ ಮಂತ್ರ ಜಪಿಸುವ ಸಂದೇಶವನ್ನು ನೀಡಿದ್ದಾರೆ. ಇದನ್ನು ಉತ್ಸವದ ರೀತಿ ಮಾಡ್ಬೇಡಿ. ಮನೆಯಲ್ಲೇ ಮಾಡಬೇಕಿದೆ.