ಮಂಗಳೂರು : ವಿಶ್ವದೆಲ್ಲೆಡೆ ಕೊರೋನಾ ವೈರಸ್ ತಾಂಡವವಾಡುತ್ತಿದೆ. ಅಂತಾರಾಷ್ಟ್ರೀಯ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಈ ನಡುಗೆ ಕರಾವಳಿ ಭಾಗದಲ್ಲಿ ಚೀನಾದ ಹಡುಗೊಂದು ಆತಂಕ ಸೃಷ್ಟಿಸಿದೆ.
ಕರುನಾಡ ಕರಾವಳಿ ಪ್ರದೇಶಕ್ಕೆ ಕೊರೋನಾ ತವರು ಚೀನಾದ ಹಡಗು ಪ್ರವೇಶಿಸಿದ್ದು, ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು ಬಂದರಿಗೆ ಏಪ್ರಿಲ್ 1 ರಂದು ರಾತ್ರಿ 3 ಗಂಟೆಗೆ ಹಡಗು ಪ್ರವೇಶಿಸಿದೆ. ಚೀನಾದ ಹಲವು ಕಾರ್ಮಿಕರನ್ನು ಹೊತ್ತು ತಂದಿದೆ. ಎಂ ಆರ್ ಪಿ ಎಲ್ ನಿಂದ ಡೀಸೆಲ್ ಸಾಗಿಸಲು ಬಂದಿತ್ತು ಎನ್ನಲಾಗಿದೆ. ಬಂದರು ಅಧಿಕಾರಿಗಳು ಮೆಡಿಕಲ್ ಕ್ಲಿಯರೆನ್ಸ್ ಕೊಟ್ಟಿದ್ದರೆಂದು ತಿಳಿದುಬಂದಿದೆ. ಚೀನಾ ಕೊರೋನಾ ವೈರಸ್ ತವರಾಗಿದ್ದು ಅಲ್ಲಿನ ಹಡಗಿಗೆ ಹೇಗೆ ಅನುಮತಿಕೊಟ್ಟರು ಎಂಬುದು ಪ್ರಶ್ನೆ. ಒಟ್ಟಿನಲ್ಲಿ ಹಡಗು ಪ್ರವೇಶದಿಂದ ಆತಂಕ ಮೂಡಿದೆ.