ಕೊರೋನಾ ರುದ್ರತಾಂಡವಕ್ಕೆ ಇಡೀ ವಿಶ್ವ ನಲುಗಿದೆ … ದಿಢೀರ್ ಅಂತ ಚೀನಾದಲ್ಲಿ ಕಂಡುಬಂದ ಮಹಾಮಾರಿ ಇಂದು ಜಗತ್ತಿನ 183 ರಾಷ್ಟ್ರಗಳನ್ನು ಕಾಡುತ್ತಿದೆ …ಜಗತ್ತಿನಲ್ಲಿ 12, 73, 794 ಮಂದಿಗೆ ಕೊರೋನಾ ದೃಢಪಟ್ಟಿದೆ …69, 419 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ..
ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾದಲ್ಲಿ ಇದುವರೆಗೆ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಕಂಡು ಬಂದಿವೆ … 3 , 37, 274 ಮಂದಿ ಅಮೆರಿಕಾದಲ್ಲಿ ಕೊರೋನಾ ದಿಂದ ಬಳಲುತ್ತಿದ್ದಾರೆ . ಜರ್ಮನಿಯಲ್ಲಿ 1, 00, 123 ಮಂದಿಗೆ , ಫ್ರಾನ್ಸ್ ನಲ್ಲಿ 93, 780 ಮಂದಿ ಕೊರೋನಾದಿಂದ ಬಳಲುತ್ತಿದ್ದಾರೆ. ಕೊರೋನಾ ತವರು ರಾಷ್ಟ್ರ ಚೀನಾದಲ್ಲಿ 82, 602 ಮಂದಿ ಕೊರೋನಾದಿಂದ ನಪ್ಪಳಿಯುತ್ತಿದ್ದಾರೆ.
ಭಾರತದ ಕೂಡ ಕೊರೋನಾ ಮಹಾಮಾರಿಗೆ ನಲುಗಿದೆ . . . ದೇಶದಲ್ಲಿ ಸದ್ಯ ಲಾಕ್ ಡೌನ್ ಇದೆ . . ಹಿಮಾಚಲ ಪ್ರದೇಶ ಸರ್ಕಾರ ಕೂಡ ಕೊರೋನಾ ವಿರುದ್ಧದ ಸಮರದ ಭಾಗವಾಗಿ ಚ್ಯುಯಿಂಗಮ್ ಅನ್ನು ಬ್ಯಾನ್ ಮಾಡಿದೆ . . . ಕರೋನಾ ಸೋಂಕು ಹರಡದಂತೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಜನ ಎಲ್ಲೆಂದರಲ್ಲಿ ಉಗಿಯುವುದನ್ನು ತಪ್ಪಿಸುವ ಉದ್ದೇಶದಿಂದ , ಮತ್ತಷ್ಟು ಹರಡದಂತೆ ತಡೆಗಟ್ಟಲು ಹಿಮಾಚಲ ಪ್ರದೇಶ ಸರ್ಕಾರ ಚ್ಯುಯಿಂಗಮ್ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ . . .
ಮೂರು ತಿಂಗಳ ಕಾಲ ಚ್ಯುಯಿಂಗಮ್ ನಿಷೇಧಿಸಿ ಆದೇಶಿಸಿದೆ …ಈ ಬಗ್ಗೆ ಆದೇಶ ಹೊರಡಿಸಿರುವ ಅಲ್ಲಿನ ಆರೋಗ್ಯ ಮುಖ್ಯ ಕಾರ್ಯದರ್ಶಿ ಆರ್ . ಡಿ ಧಿಮಾನ್, ” ಸಾರ್ವಜನಿಕ ಹಿತ ದೃಷ್ಟಿಯಿಂದ ಚ್ಯುಯಿಂಗಮ್ ಮತ್ತು ಬಬಲ್ ಗಕ್ ಉತ್ಪನ್ನಗಳ ಮಾರಾಟ ಹಾಗೂ ಬಳಕೆಯನ್ನು ಜೂ 30 ರವರೆಗೆ ನಿಷೇಧ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಆದೇಶ ಹೊರಡಿಸಿದೆ. ಈ ಮೂಲಕ ಹೆಮ್ಮಾರಿ ಕೊರೋನಾ ಸೋಂಕು ಹರಡದಂತೆ ತಡೆಯಲು ಈ ಕ್ರಮವನ್ನು ಜರುಗಿಸಿದೆ. ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 6 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಆ ಆರು ಮಂದಿಯಲ್ಲಿ ಒಬ್ಬರು ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಒಟ್ಟಿನಲ್ಲಿ ಕೊರೋನಾ ಆರ್ಭಟಕ್ಕೆ ಇಡೀ ದೇಶ ನಲುಗಿದ್ದು . . .ಆದಷ್ಟು ಬೇಗ ಸುಧಾರಣೆ ಕಾಣಬೇಕಿದೆ.
ಜಗತ್ತಿನಾದ್ಯಂತ 12, 73,794 ಮಂದಿಗೆ ಹರಡಿದ ಕರೋನಾ ….69, 419 ಮಂದಿ ಬಲಿ..! ಯಾವ ದೇಶದಲ್ಲಿ ಎಷ್ಟೆಷ್ಟು?
ಮಂಗಳೂರಿಗೆ ಕೊರೋನಾ ತವರು ಚೀನಾದ ಹಡಗು..!
ಕೊರೋನಾ ಆಸ್ಟ್ರೇಲಿಯಾ ಕಂಡು ಹಿಡೀತಾ ಲಸಿಕೆ? ಕೋವಿಡ್ -19 ಲಸಿಕೆ ಪರೀಕ್ಷೆಗೆ ರೆಡಿ..!
ಕೊರೋನಾ ಸೋಂಕಿತರ ಸಂದರ್ಶನ ಮಾಡಿದ್ದ ಜನಪ್ರಿಯ ಆ್ಯಂಕರ್ ಗೂ ಕೊರೋನಾ!
ಕೊರೋನಾ ಹಾವಳಿ ಇಲ್ಲದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳಿವು…!
ಕೊರೋನಾ ಜೊತೆಗೆ ಹ್ಯಾಂಟ ವೈರಸ್ ಹಾವಳಿ..!
ಕೊರೋನಾ ಬಂದ್ನಿಂದ ಸ್ಯಾಂಡಲ್ವುಡ್ ಗಾದ ನಷ್ಟ ಕೇಳಿದ್ರೆ ತಲೆ ತಿರುಗುತ್ತೆ!
ಕೊರೋನಾದಿಂದ ಐಪಿಎಲ್ ರದ್ದಾದ್ರೆ ಬಿಸಿಸಿಐಗೆ ಎಷ್ಟು ನಷ್ಟ ಆಗುತ್ತೆ ಗೊತ್ತಾ?
ಗತಕಾಲದ ವೈಭವ ನೆನಪಿಸಿದ್ದ ದಿಗ್ಗಜರ ಕ್ರಿಕೆಟ್ ಕಿಕ್ಗೆ ಕೊರೋನಾ ಶಾಕ್!
ರಾಜ್ಯದಲ್ಲಿ ಮೊದಲ ಕೊರೋನಾ ವೈರಸ್ ಪ್ರಕರಣ ದೃಢ