ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

Date:

ನಮ್ಮ ಕನ್ನಡದ ರಿಯಲ್ ಹೀರೋಗಳಿವರು..! ಕನ್ನಡಿಗರೆಂದು ಹೆಮ್ಮೆಯಿಂದ ಹೇಳಿಕೊಳ್ಳಿ..!

ನಮ್ಮ ಕರ್ನಾಟಕ ಸುಂದರ ಭೂಪ್ರದೇಶ, ಮನಮೋಹಕ ಬೆಟ್ಟ-ಗುಡ್ಡಗಳು, ನದಿ, ಹೊಳೆ, ಜಲಪಾತ, ಸರೋವರಗಳಿಂದ ಸಮೃದ್ಧವಾಗಿರುವ ನಾಡು. ಸಂಸ್ಕೃತಿ, ಪರಂಪರೆಯಲ್ಲೂ ಶ್ರೇಷ್ಠವಾದುದು. ಅದೇರೀತಿ ಮಹಾನ್ ವ್ಯಕ್ತಿಗಳನ್ನು ಭಾರತ ಹಾಗೂ ಜಗತ್ತಿಗೇನೇ ಕೊಡುಗೆಯನ್ನಾಗಿ ನೀಡಿರುವಂತಹ ಹೆಮ್ಮೆ ನಮ್ಮ ಕರ್ನಾಟಕಕ್ಕಿದೆ..! ಕರ್ನಾಟಕದ ಅಂತಹ ಮಹಾನ್ ವ್ಯಕ್ತಿಗಳಲ್ಲಿ ಕೆಲವೇ ಕೆಲವರ ಪರಿಚಯವಿಲ್ಲಿದೆ..

ರಾಹುಲ್ ದ್ರಾವಿಡ್ :


ರಾಹುಲ್ ದ್ರಾವಿಡ್ ಭಾರತ ಕ್ರಿಕೆಟಿನ ಆಧಾರಸ್ತಂಭವಾಗಿದ್ದ ಮಹಾನ್ ಆಟಗಾರರು. ಈಗ ಇವರು ಕಿರಿಯರ ತಂಡದ ಕೋಚ್ ಆಗಿದ್ದಾರೆ. ಇವರು ಹುಟ್ಟಿದ್ದು ಮಧ್ಯಪ್ರದೇಶದ ಇಂದೂರಿನಲ್ಲಾದರೂ ಆಡಿ ಬೆಳೆದಿದ್ದು, ನೆಲಸಿರುವುದೂ ಕೂಡ ನಮ್ಮ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ.
ಕರ್ನಾಟಕದ ಮನೆಮಗನಾಗಿ ಬೆಳೆದ ಇವರು ಭಾರತ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದು ಈಗ ಇತಿಹಾಸ. ಅದೆಷ್ಟೋಬಾರಿ ಸಂಕಷ್ಟದ ಪರಿಸ್ಥಿತಿಯಲ್ಲಿ ಏಕಾಂಗಿಯಾಗಿ ನೆಲಕಚ್ಚಿ ಆಡಿ ತಂಡವನ್ನು ಸೋಲಿನ ದವಡೆಯಿಂದ ಪಾರುಮಾಡಿದ್ದ ಕನ್ನಡಿಗ ರಾಹುಲ್ ದ್ರಾವಿಡ್, ಪದ್ಮಶ್ರಿ, ಪದ್ಮಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ವಿಶ್ವಮಟ್ಟದಲ್ಲಿ ಕೀತರ್ಿ ಸಂಪಾದಿಸಿರುವ ರಾಹುಲ್ ಕರ್ನಾಟಕದ ಕಳಶಪ್ರಾಯರು.

ಆರ್ ಕೆ ಲಕ್ಷ್ಮಣ್ : 


ದೇಶವೇ ಹೆಮ್ಮೆ ಪಡುವಂತಹ ಸೃಜನಶೀಲ ವ್ಯಂಗ್ಯಚಿತ್ರಕಾರರು ಆರ್.ಕೆ ಲಕ್ಷ್ಮಣ್. ಇವರು ಹುಟ್ಟೂರು ಮೈಸೂರು. ತಮ್ಮ ವ್ಯಂಗ್ಯಚಿತ್ರದಲ್ಲಿ `ಕಾಮನ್ ಮ್ಯಾನ್’ ಕ್ಯಾರೆಕ್ಟರ್ ಪರಿಕಲ್ಪನೆಯನ್ನು ಪರಿಚಯಿಸಿದವರು. ಅವರ ಎಲ್ಲಾ ವ್ಯಂಗ್ಯಚಿತ್ರಗಳಲ್ಲಿಯೂ ಈ ಕಾಮನ್ ಮ್ಯಾನ್ ಇದ್ದೇ ಇರುತ್ತಿದ್ದ. ಪದ್ಮವಿಭೂಷಣ ಮತ್ತು ಪದ್ಮಭೂಷಣ ಪ್ರಶಸ್ತಿಗೂ ಭಾಜನರಾಗಿದ್ದಾರೆ. ವಿಶೇಷ ವ್ಯಂಗ್ಯಚಿತ್ರಗಳ ಮೂಲಕ ವಿಶ್ವಪ್ರಸಿದ್ಧರಾದವರು.

ಶಕುಂತಲಾ ದೇವಿ:


ಮಾನವ ಕಂಪ್ಯೂಟರ್ ಎಂದೇ ಖ್ಯಾತರಾಗಿರುವ ಭಾರತೀಯ ಗಣಿತ ಶಾಸ್ತ್ರಜ್ಞೆ ಶಕುಂತಲಾ ದೇವಿ. ಚಿಕ್ಕಂದಿನಲ್ಲೇ 201 ಡಿಜಟ್ ಗಳ ಸಂಖ್ಯೆಯೊಂದರ 23ನೆ ವರ್ಗಮೂಲವನ್ನು ಚಿಟಿಕೆ ಹೊಡೆಯುವಷ್ಟರಲ್ಲಿ, ಕೇವಲ 50 ಸೆಕೆಂಡ್ ಗಳಲ್ಲಿ ಕಪ್ಪುಕಲೆಗೆ ಮೇಲೆ ಬರೆದರು. ಇದೇ ಕೆಲಸಕ್ಕೆ ಕಂಪ್ಯೂಟರ್ ತೆಗೆದುಕೊಂಡ ಸಮಯಯಾವಕಾಶ 62 ಸೆಕೆಂಡ್ಗಳಾಗಿತ್ತು..! ಕಂಪ್ಯೂಟರಿಗಿಂತಲೂ ಚುರುಕಾಗಿ ಲೆಕ್ಕಹಾಕಿದ ಇವರನ್ನು ಅಂದಿನಿಂದ ಮಾನವ ಕಂಪ್ಯೂಟರ್ ಎಂದೇ ಕರೆಯುತ್ತಾರೆ. ಇವರ ಈ ಸಾಧನೆ 1995ರಲ್ಲಿ ಗಿನ್ನಿಸ್ಬುಕ್ಆಫ್ ರೆಕಾರ್ಡ್ ನಲ್ಲಿ ನಮೂದಾಗಿದೆ.

ಅನಿಲ್ ಕುಂಬ್ಳೆ :


ವಿಶ್ವಕಂಡ ಅದ್ಭುತ ಕ್ರಿಕೆಟಿಗರು. ಈ ಮಹಾನ್ ಕ್ರಿಕೆಟಿಗರು ನಮ್ಮವರು.. ಅಂದ್ರೆ ನಮ್ಮ ಕರ್ನಾಟಕದವರು. ವಿಶ್ವದಲ್ಲಿಯೇ ಅತೀಹೆಚ್ಚು ವಿಕೆಟ್ ಪಡೆದ ಬೌಲರ್ಗಳ ಸಾಲಿನಲ್ಲಿ ಮೂರನೇಯವರು. ಕೇವಲ ಒಂದೇ ಇನ್ನಿಂಗ್ಸಿನಲ್ಲಿ 10 ವಿಕೆಟ್ ಪಡೆದ ಇಬ್ಬರೇ ಬೌಲರ್ ಗಳಲ್ಲಿ ಇವರೂ ಒಬ್ಬರು. ಪದ್ಮಶ್ರಿ, ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಾರಾಯಣಮೂರ್ತಿ : 

ಕೋಲಾರ ಜಿಲ್ಲೆಯ ಸಿಡ್ಲಘಟ್ಟದವರು. ವಿಶ್ವಕಂಡ ಹೆಸರಾಂತ ಉದ್ಯಮಿ. ನಾರಾಯಣಮೂರ್ತಿ ಅಂದರೆ ಯಾರಿಗೂ ಅರ್ಥ ಆಗಲ್ಲ.. ಇನ್ಫೋಸಿಸ್ ನಾರಾಯಣ ಮೂರ್ತಿ ಅಂದ್ರೆ ಗೊತ್ತಲ್ವಾ..?ಅದೇ ನಾರಾಯಣಮೂರ್ತಿ ಗಳು ನಮ್ಮ ಕನ್ನಡಿಗರು. ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು. ಭಾರತದ ಮಾಹಿತಿತಂತ್ರಜ್ಞಾನದ ಪಿತಾಮಹರೆಂದು ಕರೆಯಲ್ಪಡುವ ಕನ್ನಡಿಗರು.

ಹಾಗೆಯೇ ಅವರ ಪತ್ನಿ ಸುಧಾ ಮೂರ್ತಿ ಕೂಡ ನಮ್ಮ ಕನ್ನಡದ ಹೆಮ್ಮೆ .

 

ಸಂದೀಪ್ ಉನ್ನಿಕೃಷ್ಣನ್ :


ಕನ್ನಡದ ಹೆಮ್ಮೆಯ ಸಿಪಾಯಿ ಸಂದೀಪ್ ಉನ್ನಿಕೃಷ್ಣನ್. 1999ರ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು. ಸೈನ್ಯದಲ್ಲಿ ಅತ್ಯಂತ ಕಠಿಣವಾದ ಘಾಟಕ್ ಕೋರ್ಸ್ ನಲ್ಲಿದ್ದರು. 26/11 2008ರ ಮುಂಬೈದಾಳಿಯಲ್ಲಿ ಭಯೋತ್ಪಾದಕರೊಡನೆ ಹೋರಾಡುತ್ತ ಹುತಾತ್ಮರಾದ ವೀರ ಯೋಧರು.

ಪ್ರಕಾಶ್ ಪಡುಕೋಣೆ :


ಉಡುಪಿ ಜಿಲ್ಲೆಯವರು. ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೇಂಡ್ ಚಾಂಪಿಯನ್ ಶಿಪ್ನಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಗೆಲುವನ್ನು ಪಡೆದ ಮೊಟ್ಟಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರರು. ಡ್ಯಾನಿಷ್ ಓಪನ್, ಸ್ವೀಡೀಷ್ ಓಪನ್, ಡಚ್ ಓಪನ್, ಹಾಂಗ್ಕಾಂಗ್ ಓಪನ್ ವಿಜೇತರು. ಅರ್ಜುನ ಪ್ರಶಸ್ತಿ ಮತ್ತು ಪದ್ಮಶ್ರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆ ಎಂ ಕಾರಿಯಪ್ಪ :


ಕೊಡೆಂದೆರ ಮಾದಪ್ಪ ಕಾರಿಯಪ್ಪ ಮಡಿಕೇರಿಯವರು. ಫೀಲ್ಡ್ ಮಾರ್ಷಲ್ ಕಾರಿಯಪ್ಪರೆಂದೇ ಪರಿಚಿತರು. ಭಾರತ ಸೇನೆಯ ಪ್ರಥಮ ದಂಡನಾಯಕರು ಮತ್ತು ಫೀಲ್ಡ್ಮಾರ್ಷಲ್ ( ಮಹಾದಂಡನಾಯಕ) ಪದವಿಯನ್ನು ಪಡೆದ ಮೊದಲಿಗರಾಗಿದ್ದಾರೆ.

ಸಿ.ಎನ್ ಆರ್ ರಾವ್ :


ವಿಶ್ವವಿಖ್ಯಾತ ಭಾರತೀಯ ವಿಜ್ಞಾನಿಗಳಲ್ಲಿ ಒಬ್ಬರಾದ ಸಿ ಎನ್ ಆರ್ ರಾವ್ ಕನ್ನಡದ್ರು..! 2014ರಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದಾರೆ. 60 ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ ..! 15000ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದಿದ್ದಾರೆ. 45 ವಿಜ್ಞಾನ ಪುಸ್ತಕಗಳನ್ನು ಬರೆದಿದ್ದಾರೆ.

ಭೀಮ್ ಸೇನ್ ಜೋಶಿ :


ಶಾಸ್ತ್ರೀಯ ಹಿಂದುಸ್ಥಾನಿ ಸಂಗೀತದ ಪ್ರಸಿದ್ಧ ಗಾಯಕರು. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಹಿಂದುಸ್ತಾನಿ ಸಂಗೀತ ಗಾಯಕರು. “ಮೈಲಿ ಸುರ್ ಮೇರಾ ತುಮ್ಹಾರ” ವೀಡೀಯೋ(1988) ಮೂಲಕ ಜನಜನಿತರಾದವರು.
ನ್ಯಾಷನಲ್ ಫಿಲ್ಮ್ ಅವಾರ್ಡ್, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಮತ್ತು ಈ ಮೊದಲೇ ಹೇಳಿರುವಂತೆ ಭಾರತ ರತ್ನ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಸರ್ ಎಂ ವಿಶ್ವೇಶ್ವರಯ್ಯ :


ವಿಶ್ವವಿಖ್ಯಾತ ಇಂಜಿನಿಯರ್. ಸರ್ ಎಂ ವಿ ಎಂದೇ ಪ್ರಸಿದ್ಧರಾಗಿರುವ ಇವರು ನಮ್ಮವರು. ನಮ್ಮ ಕರ್ನಾಟಕದವರು. ಮೈಸೂರು ದಿವಾನರೂ ಆಗಿದ್ದರು. ಬ್ರಿಟೀಷ್ ಸರ್ಕಾರ ಸರ್ ಎಂಬ ಬಿರುದನ್ನು ನೀಡಿ ಗೌರವಿಸಿದೆ. ಭಾರತರತ್ನ ಗೌರವವೂ ಲಭಿಸಿದೆ. ಇಂದು ರಾಜ್ಯದಲ್ಲಿ ಅನೇಕ ಐಐಟಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜುಗಳಿಗೆ ಸರ್ ಎಂ ವಿ ಹೆಸರನ್ನಿಟ್ಟು ಗೌರವ ನೀಡಲಾಗಿದೆ. ಇವರು ಇಂಜಿನಿಯರ್ ಆಗಿ ಸಲ್ಲಿಸಿದ ಅವಿಸ್ಮರಣೀಯ ಸೇವೆಯ ಸ್ಮರಣೆಗಾಗಿ ಪ್ರತಿವರ್ಷ ಭಾರತದಲ್ಲಿ ಇವರ ಜನ್ಮದಿನವಾದ ಸೆಪ್ಟೆಂಬರ್ 15ರನ್ನು ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತಿದೆ.

ಡಾ.ರಾಜ್ ಕುಮಾರ್ : 


ನಟ ಸಾರ್ವಭೌಮ ಡಾ. ರಾಜ್ಕುಮಾರ್ ಕನ್ನಡ ಚಿತ್ರರಂಗದ ಧ್ರುವತಾರೆ. ಇವರ ಬಗ್ಗೆ ತಿಳಿಯದೇ ಇರುವವರೇ ಇಲ್ಲ. ದಾದಾಸಾಹೇಬ್ ಫಾಲ್ಕೆ, ಕರ್ನಾಟಕ ರತ್ನ, ರಾಷ್ಟ್ರಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿರುವ ಇವರು ಪತ್ರಕರ್ತರಿಂದ ಮತ್ತು ಅಭಿಮಾನಿಗಳಿಂದಾಗಿ ವರನಟರೆಂದೇ ಪ್ರಸಿದ್ಧರಾದರು.
ಇವರುಗಳಲ್ಲದೆ ಇನ್ನೂ ಅನೇಕ ಸಾಹಿತಿಗಳನ್ನು, ಕವಿಗಳನ್ನು, ಬರಹಗಾರರನ್ನು, ಕ್ರೀಡಾಪಟುಗಳನ್ನು, ಸಿನಿತಾರೆಯರನ್ನು, ಶ್ರೇಷ್ಠ ರಾಜಕಾರಣಿಗಳನ್ನು, ಶಿಕ್ಷಕರನ್ನು.. ಒಂದೇ ಮಾತಿನಲ್ಲಿ ಹೇಳುವುದಾದರೆ ಪ್ರತಿ ಕ್ಷೇತ್ರದಲ್ಲಿಯೂ ಕರ್ನಾಟಕದ ಸಾಧಕರು ಇದ್ದೇ ಇದ್ದಾರೆ.. ಕನ್ನಡಿಗರು ಸದ್ದು ಮಾಡದೇ ಇರೋ ಕ್ಷೇತ್ರಗಳೇ ಇಲ್ಲ..! ಕನ್ನಡಿಗರೆಂದೂ ಎಂದೆಂದಿಗೂ ಗ್ರೇಟ್.. ಹೆಮ್ಮೆಯಿಂದ ಹೇಳಿ ನಾವೆಲ್ಲಾ ಕನ್ನಡಿಗರೆಂದು..! ಕನ್ನಡ ರಾಜ್ಯೋತ್ಸವದ ಶುಭಾಷಯಗಳೊಂದಿಗೆ..

ಕುವೆಂಪು :


ರಾಷ್ಟ್ರಕವಿ ಕುವೆಂಪು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಮೊಟ್ಟ ಮೊದಲ ಕನ್ನಡಿಗರು. ಮಲೆನಾಡಿನ ಮೂಲೆಯಲ್ಲಿ ಹುಟ್ಟಿ ವಿಶ್ವಮಟ್ಟಕ್ಕೆ ಕನ್ನಡದ ಕೀತರ್ಿಯನ್ನು ಬೆಳಗಿದ ಮಹಾನ್ ವ್ಯಕ್ತಿ. ವಿಶ್ವಮಾನವ ತತ್ವವನ್ನು ಸಾರಿದ ಮಹಾನ್ ಚೇತನ. ಕುವೆಂಪು ಪದಗಳಲ್ಲಿ ವರ್ಣಿಸಲಾಗದ ಕನ್ನಡದ ಆಸ್ತಿ.

ಶಂಕರ್ ನಾಗ್ :


ಇವರೊಬ್ಬ ನಟ ಮತ್ತು ನಿರ್ದೇಶಕ ಮಾತ್ರವಾಗಿರಲಿಲ್ಲ. ಅಭಿವೃದ್ಧಿಯ ಚಿಂತಕರೂ ಆಗಿದ್ದರೆಂದರೆ ತಪ್ಪಾಗಲಾರದು. ಇವತ್ತೋ ನಿನ್ನೆನೋ ಬೆಂಗಳೂರಿಗೆ ಬಂದಿದೆಯಲ್ಲಾ ಮೆಟ್ರೋ,..! ಈ ಮೆಟ್ರೋವನ್ನು ಶಂಕರ್ ನಾಗ್ ಅಂದೇ ತರಬೇಕು ಅಂತ ಕನಸು ಕಂಡು ಶ್ರಮಿಸಿದ್ದರು. ಶಂಕರ್ ನಾಗ್ ಆಕಸ್ಮಿಕ ಅಪಘಾತದಿಂದಾಗಿ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲ ಇಡೀ ದೇಶಕ್ಕೇ ತುಂಬಲಾರದ ನಷ್ಟ. ನಮ್ಮ ಶಂಕರ್ ನಾಗ್ ಸಿನಿಮಾ ನಟರಾಗಿ ಮಾತ್ರವಲ್ಲದೆ ದೇಶದ ಆಸ್ತಿಯೂ ಆಗಿದ್ದರು. ಅವರೊಬ್ಬ ಸ್ನೇಹಜೀವಿ, ಚಿಂತಕ ಎಲ್ಲಕ್ಕಿಂತ ಹೆಚ್ಚಾಗಿ ಆದರ್ಶ ಪುರುಷ.

ಅಂತೆಯೇ  ವಿಷ್ಣುವರ್ಧನ್, ಅಂಬರೀಶ್, ಕ್ರಿಕೆಟಿಗರಾದ  ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್ ಹೀಗೆ ಅನೇಕ ಹೆಮ್ಮೆಯ ಹೀರೋಗಳನ್ನು ಕನ್ನಡ ನಾಡು ಕಂಡಿದೆ . ಆಗಾಗ ಅವರೆಲ್ಲರ ಕಿರುಪರಿಚಯ ಮಾಡಿಕೊಡುವ ಕೆಲಸವನ್ನು ಮಾಡುತ್ತೇವೆ.

Share post:

Subscribe

spot_imgspot_img

Popular

More like this
Related

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ!

ಪಂಚಭೂತಗಳಲ್ಲಿ ಲೀನರಾದ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ! ಮೈಸೂರು: ಹಿರಿಯ ಸಾಹಿತಿ...

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆ !

ನವರಾತ್ರಿ ಐದನೇ ದಿನ ಆರಾಧಿಸುವ ದೇವಿ ಸ್ಕಂದಮಾತೆಯ ಹಿನ್ನಲೆ ನೋಡೊದಾದ್ರೆ, ಸ್ಕಂದಮಾತೆ...

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...