ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

0
616

ವಿಶ್ವಕ್ಕೆ ಭಾರತ ಏನೆಲ್ಲಾ ಪರಿಚಯಿಸಿದೆ ..? ಕೆಲವು ಆಟಗಳು, ಸಂಗತಿಗಳು ಇಲ್ಲಿವೆ ..!

ಭಾರತ ದೇಶ ವಿಶ್ವಕ್ಕೆ ಹತ್ತಾರು ಕೊಡುಗೆಗಳನ್ನು ನೀಡಿದೆ. ಆ ಕೊಡುಗೆಗಳು ಇಂದು ಜನಜೀವನದ ಪ್ರಮುಖ ಭಾಗವಾಗಿ ಹೋಗಿವೆ. ಅವುಗಳಿಲ್ಲದೇ ದಿನ ದೂಡುವುದು ಕಷ್ಟ ಎನ್ನುವಂತಾಗಿದೆ. ಇಷ್ಟಕ್ಕೂ ವಿಶ್ವಕ್ಕೆ ಭಾರತ ಕೊಟ್ಟ ಕೊಡುಗೆಗಳೇನು..? ನೀವೇ ನೋಡಿ..

1. ಚೆಸ್
ಕ್ರಿಸ್ತ ಪೂರ್ವ ಭಾರತವನ್ನಾಳಿದ ಗುಪ್ತ ಅರಸರು ಮೊಟ್ಟ ಮೊದಲ ಬಾರಿಗೆ ಚದುರಂಗದಾಟವನ್ನು ಆಡಿದರು ಎನ್ನುತ್ತದೆ ಇತಿಹಾಸ. ಅಂದಿನಿಂದ ಇಂದಿನವರೆಗೆ ಚೆಸ್ ಆಟ ಜನಜೀವನದ ಒಂದು ಭಾಗವಾಗಿದೆ. ಅಲ್ಲದೇ ಭಾರತವು ವಿಶ್ವನಾಥನ್ ಆನಂದ್ ರಂತಹ ಮಹಾನ್ ಚೆಸ್ ಪಟುವನ್ನು ನೀಡಿದ ಕೀತರ್ಿಗೂ ಭಾಜನವಾಗಿದೆ.

2. ಗುಂಡಿ

ಮೆಹೆಂಜೋ-ದಾರೋ ಸಂಸ್ಕೃತಿ ಅಸ್ಥಿತ್ವದಲ್ಲಿದ್ದಾಗಲೇ ಬಟ್ಟೆಗಳಿಗೆ ಬಳಸುವ ಗುಂಟಿಗಳನ್ನು ಕಂಡುಹಿಡಿಯಲಾಗಿತ್ತು. ಕಾಲಾಂತರದಲ್ಲಿ ಗುಂಡಿಗಳು ವಿಶ್ವದಾದ್ಯಂತ ಪಸರಿಸಿ ಪ್ರತಿಯೊಬ್ಬ ವ್ಯಕ್ತಿ ಗುಂಡಿಗಳನ್ನು ಬಳಸುವಂತಾಗಿದೆ.

3. ರೂಲರ್

ಅಳತೆ ಮಾಡಲು ಬಳಸಲ್ಪಡುವ ರೂಲರ್ ಗಳನ್ನು ಭಾರತದಲ್ಲೇ ಕಂಡುಹಿಡಿಯಲಾಗಿತ್ತು. ಕ್ರಿಸ್ತ ಪೂರ್ವ 1500ರ ಕಾಲದಲ್ಲಿ ಇದನ್ನು ಸಂಶೋಧಿಸಲಾಗಿತ್ತು.

4. ಸ್ಥಳಾಂತರಿಸಬಲ್ಲ ಮನೆ ಕಲ್ಪನೆ

ಮನೆಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂಬ ಕಲ್ಪನೆ ಭಾರತದಲ್ಲೇ ಹುಟ್ಟಿಕೊಂಡಿತ್ತು. 16ನೇ ಶತಮಾನದಲ್ಲಿ ಮೊಘಲ್ ರಾಜ ಅಕ್ಬರ್ ಇಂಥದ್ದೊಂದು ಕಲ್ಪನೆಗೆ ಸಾಕ್ಷಿಯಾಗಿದ್ದ.

5. ಹಾವು ಏಣಿಯಾಟ

ಹಾವು ಏಣಿಯಾಟವನ್ನು ಮೊಟ್ಟಮೊದಲ ಬಾರಿಗೆ ಭಾರತದಲ್ಲೇ ಕಂಡುಹಿಸಿಯಲಾಯಿತು. ನಂತರ ಯುರೋಪಿಯನ್ನರು ಅದನ್ನು ತಮ್ಮ ತಾಯ್ನಾಡಿಗೆ ಕೊಂಡೊಯ್ದರು. ಕ್ರಿಸ್ತ ಶಕ 1943ರಲ್ಲಿ ಮಿಲ್ಟನ್ ಬಾಡ್ಲಿ ಎಂಬುವವರು ಇದನ್ನು ಅಮೆರಿಕಾದಲ್ಲಿ ಪರಿಚಯಿಸಿದರು.

6. ಶಾಂಪೂ..!

ಬಂಗಾಳದ ನವಾಬರು ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ ಶಾಂಪೂವನ್ನು ಬಳಸಿದ ಕೀತರ್ಿಯನ್ನು ಹೊಂದಿದ್ದಾರೆ. 18ನೇ ಶತಮಾನದಲ್ಲಿ ಅವರು ಶಾಂಪೂ ಬಳಕೆ ಮಾಡಲಾರಂಭಿಸಿದ್ದರು.

7. ಅಂಕಿಸಂಖ್ಯೆಗಳು

ವಿಶ್ವಕ್ಕೆ ಅಂಕಿಗಳನ್ನು ನೀಡಿದ ಕೀರ್ತಿ  ಭಾರತಕ್ಕೆ ಸಲ್ಲುತ್ತದೆ. ವಿರಾಹಂಕ, ಹೇಮಚಂದ್ರ ಮತ್ತು ಗೋಪಾಲ ಎಂಬುವವರು ಅಂಕಿ ಸಂಖ್ಯೆಗಳನ್ನು ಪರಿಚಯಿಸಿದರು.

8. ಕಾಟನ್ ಬಟ್ಟೆ

ಮಾನವ ನಾಗರಿಕತೆ ಆರಂಭವಾದ ಬಳಿಕ ಮೊಟ್ಟ ಮೊದಲ ಬಾರಿಗೆ ಭಾರತೀಯರೇ ಕಾಟನ್ ಬಟ್ಟೆಗಳನ್ನು ಬಳಕೆ ಮಾಡಲಾರಂಭಿಸಿದರು. ಇಂಡಸ್ ಕಣಿವೆಯಲ್ಲಿ ವಾಸವಾಗಿದ್ದ ಜನರು ಇದರ ಬಳಕೆಯನ್ನು ಆರಂಭಿಸಿದರು. ಕ್ರಿಸ್ತ ಪೂರ್ವ 5ನೇ ಶತಮಾನದಲ್ಲಿ ಕಾಟನ್ ಬಟ್ಟೆ ಬಳಕೆಗೆ ಬಂತು.

9. ಇಸ್ಪೀಟ್

ವಿಶ್ವದಾದ್ಯಂತ ಬಳಕೆಯಲ್ಲಿರುವ ಇಸ್ಪೀಟ್ ಆಟವನ್ನು ಭಾರತವೇ ಅನ್ವೇಷಿಸಿತ್ತು. 18ನೇ ಶತಮಾನದಲ್ಲಿ ಮೊಘಲ್ ಅರಸರು ಇದನ್ನು ಆಡುತ್ತಿದ್ದರು ಎನ್ನಲು ಇಂದಿಗೂ ಹತ್ತಾರು ದಾಖಲೆಗಳು ದೊರೆತಿವೆ.

10. ಡೆಸಿಮಲ್ ಸಿಸ್ಟಂ

ಕ್ರಿಸ್ತ ಶಕ 1 ರಿಂದ 5ನೇ ಶತಮಾನದ ಅವಧಿಯಲ್ಲಿ ಬ್ರಹ್ಮಗುಪ್ತ ಎಂಬುವವರು ಡೆಸಿಮಲ್ ಸಿಸ್ಟಂನ್ನು ಕಂಡುಹಿಡಿದರು.

11. ವಜ್ರ ಗಣಿಗಾರಿಕೆ

ಸುಮಾರು 5000 ವರ್ಷಗಳ ಹಿಂದೆ ಭಾರತೀಯರು ವಜ್ರಗಳನ್ನು ಕಂಡುಹಿಡಿದರು. ನಂತರ ಅದನ್ನು ಕತ್ತರಿಸುವ ಕಲೆಯನ್ನು ಸಿದ್ಧಿಸಿಕೊಂಡರು. ಕಾಲಾಂತರದಲ್ಲಿ ವಜ್ರದ ಕೀತರ್ಿ ವಿಶ್ವದಾದ್ಯಂತ ಪಸರಿಸಿತು.

12. ಕಣ್ಣಿನ ಪೊರೆಯ ಸರ್ಜರಿ

ಸುಶ್ರುತ ಎಂಬ ಭಾರತೀಯ ವಿಜ್ಞಾನಿ ಕಣ್ಣಿನ ಪೊರೆಯ ಚಿಕಿತ್ಸೆ ನೀಡುವಲ್ಲಿ ನಿಶ್ಣಾತನಾಗಿದ್ದ. ಅದೂ ಕೂಡಾ ಕ್ರಸ್ತ ಪೂರ್ವ 6ನೇ ಶತಮಾಅನದಲ್ಲಿ..!
13. ರೇಡಿಯೋ, ವೈರ್ ಲೆಸ್ ತಂತ್ರಜ್ಞಾನ

ಮಾಕರ್ೋನಿಯು ರೇಡಿಯೋ ಕಂಡುಹಿಡಿದ ಎಂದು ಇಡೀ ವಿಶ್ವವೇ ನಂಬಿದೆ. ಆದರೆ ನಿಜವಾಗಿಯೂ ಮೊಟ್ಟಮೊದಲ ಬಾರಿಗೆ ರೇಡಿಯೋವನ್ನು ಕಂಡುಹಿಡಿದ ಕೀತರ್ಿ ಭಾರತೀಯರಾದ ಜಗದೀಶ್ ಚಂದ್ರ ಬೋಸ್ ರವರಿಗೆ ಸಲ್ಲುತ್ತದೆ.

14. ಚಂದ್ರನ ಮೇಲೆ ನೀರು

ಭಾರತದ ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ ಎಂದರೆ ಚಂದ್ರನ ಮೇಲೆ ನೀರಿದೆ ಎಂದು ಇಸ್ರೋದ ವಿಜ್ಞಾನಿಗಳು ಹೇಳಿದರು. ಭಾರತದ ಚಂದ್ರಯಾನ ಮಿಷನ್ ಇಂಥದ್ದೊಂದು ಮಹಾನ್ ಸಾಧನೆಗೆ ಕಾರಣವಾಯಿತು.

15. ಬೈನರಿ ಕೋಡ್

ಪಿಂಗಳ ಎಂಬ ಭಾರತೀಯ ವಿಜ್ಞಾನಿ ಮೊಟ್ಟ ಮೊದಲ ಬಾರಿಗೆ ಬೈನರಿ ಕೋಡನ್ನು ಕ್ರಿಸ್ತ ಪೂರ್ವ 200ದಲ್ಲಿ ಕಂಡುಹಿಡಿದಿದ್ದ.

16. ಫ್ಲಶ್ ಟಾಯ್ಲೆಟ್

ಇಂಡಸ್ ಕಣಿವೆಯ ಜನರು ಮೊಟ್ಟ ಮೊದಲ ಬಾರಿಗೆ ಫ್ಲಶ್ ಟಾಯ್ಲೆಟ್ ಗಳನ್ನು ಕಂಡುಹಿಡಿದಿದ್ದರು..! ವಿಶೇಷವೆಂದರೆ ಅಂದಿನ ಟಾಯ್ಲೆಟ್ ಗಳು ಅತ್ಯಂತ ಸುವ್ಯವಸ್ಥಿತವಾಗಿದ್ದವು.

17. ಕಬ್ಬಿಣ ಮತ್ತು ಉಕ್ಕಿನ ಕೆಲಸ

ಭಾರತೀಯರು ಮೊಟ್ಟ ಮೊದಲನೆ ಬಾರಿಗೆ ಕಬ್ಬಿಣದ ಬಳಕೆಯನ್ನು ತಂದರು. ಅದು ಕಾಲಾಂತರದಲ್ಲಿ ವಿಶ್ವದಾದ್ಯಂತ ಪಸರಿಸಿ ಎಲ್ಲಿ ನೋಡಿದರಲ್ಲಿ ಕಬ್ಬಿಣದ ವಸ್ತುಗಳನ್ನು ಬಳಕೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ.

18. ಇಂಕ್

ವಿಶೇಷವೆಂದರೆ ಪೆನ್ನುಗಳಿಗೆ ಬಳಕೆ ಮಾಡಲ್ಪಡುವ ಇಂಕನ್ನು ಮೊಟ್ಟಮೊದಲ ಬಾರಿಗೆ ಸಂಶೋಧಿಸಿದ್ದು ಭಾರತ. ವಿಶೇಷವೆಂದರೆ 4ನೇ ಶತಮಾನದಲ್ಲಿ ದಕ್ಷಿಣ ಭಾರತದಲ್ಲಿ ಇಂಕನ್ನು ಬಳಸಲಾಯಿತು.

19. ಪ್ಲಾಸ್ಟಿಕ್ ಸರ್ಜರಿ

ಅಚ್ಚರಿ ಎನಿಸಿದರೂ ಇದು ನಿಜ. ಭಾರತದ ವಿಜ್ಞಾನಿಯೊಬ್ಬರು ಕ್ರಿಸ್ತ ಪೂರ್ವ 2000ದಲ್ಲೇ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದರಂತೆ..!

20. ಫೈಬರ್ ಕೇಬಲ್

ಭಾರತದ ಡಾಕ್ಟರ್ ನರಿಂದರ್ ಕಪಾನಿ ಎಂಬುವವರು ಮೊಟ್ಟ ಮೊದಲಬಾರಿಗೆ ಫೈಬರ್ ಕೇಬಲ್ ಗಳನ್ನು ಕಂಡುಹಿಡಿದರು. ಆದ್ದರಿಂದ ಡಾಕ್ಟರ್ ನರಿಂದರ್ ಸಿಂಗ್ ಕಪಾನಿಯವರನ್ನು ಫಾದರ್ ಆಫ್ ಫೈಬರ್ ಆಫ್ಟಿಕ್ಸ್ ಎಂದು ಕರೆಯಲಾಗುತ್ತದೆ.

LEAVE A REPLY

Please enter your comment!
Please enter your name here